SK Home Ad
Home ನಮ್ಮ ಜಿಲ್ಲೆ ಯಾದಗಿರಿ ಸೇತುವೆಗೆ ಕಾರು ಡಿಕ್ಕಿ: ನಾಲ್ವರು ಸಾವು

ಸೇತುವೆಗೆ ಕಾರು ಡಿಕ್ಕಿ: ನಾಲ್ವರು ಸಾವು

0
5

ಯಾದಗಿರಿ: ತುಳಜಾಪುರಕ್ಕೆ ತೆರಳಿ ಮರಳುತ್ತಿದ್ದ ನಾಲ್ವರು ಯುವಕರ ಕಾರು ನಿಯಂತ್ರಣ ತಪ್ಪಿ ಸೇತುವೆಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಯುವಕರು ಮೃತಪಟ್ಟ ಘಟನೆ ಶಹಾಪುರ ತಾಲೂಕಿನ ಇಬ್ರಾಹಿಂಪುರ ಬಳಿ ಸಂಭವಿಸಿದೆ.

ಇಬ್ರಾಹಿಂಪುರ ಡಿಬಿಎಲ್ ಕ್ಯಾಂಪ್ ಬಳಿಯ ಸೂರತ್-ಚೆನ್ನೈ ರಾಷ್ಟ್ರೀಯ ಹೆದ್ದಾರಿಯ ಸಿಕ್ಸ್ವೇ ರಸ್ತೆಯಲ್ಲಿ ನ. 6ರ ರಾತ್ರಿ 11ರಿಂದ 11.30ರ ನಡುವೆ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಗುರುರಾಜ್ (29), ಬಾಮ್ಲಾ (33) ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಗೋವಿಂದ (28) ಮತ್ತು ರಾಮು (26) ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಯಾದಗಿರಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಎಲ್ಲರೂ ಯಾದಗಿರಿ ತಾಲೂಕಿನ ವಿವಿಧ ತಾಂಡಾಗಳ ನಿವಾಸಿಗಳಾಗಿದ್ದಾರೆ. ಈ ಕುರಿತು ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.