ಹುಬ್ಬಳ್ಳಿ: ನೈರುತ್ಯ ರೈಲ್ವೆ ಸ್ಥಾಪನೆಯಾದ ನಂತರದ ಅತ್ಯಧಿಕ ಮಾಸಿಕ ಸರಕು ಸಾಗಣೆ ದಾಖಲೆ ಬರೆದಿದೆ. ಅಕ್ಟೋಬರ್ 2026ರಲ್ಲಿ 5.5 ಮಿಲಿಯನ್ ಟನ್ ಸರಕು ಸಾಗಿಸಿ, 928 ಕೋಟಿ ರೂ. ಆದಾಯ ಗಳಿಸಿದೆ.
ಕಳೆದ ವರ್ಷದ ಅಕ್ಟೋಬರ್ಗೆ ಹೋಲಿಸಿದರೆ ಸರಕು ಸಾಗಣೆ ಶೇ. 31 ಮತ್ತು ಆದಾಯ ಶೇ. 20 ಹೆಚ್ಚಳವಾಗಿದೆ. ಕಲ್ಲಿದ್ದಲು ಸಾಗಣೆ ಶೇ. 71 ಏರಿಕೆ ಕಂಡು ಸಾರ್ವಕಾಲಿಕ ದಾಖಲೆ ನಿರ್ಮಿಸಿದೆ.
ಏಪ್ರಿಲ್-ಅಕ್ಟೋಬರ್ ಅವಧಿಯಲ್ಲಿ 31.56 MT ಸರಕು ಸಾಗಣೆ ಮತ್ತು 5,620 ಕೋಟಿ ಒಟ್ಟು ಆದಾಯದೊಂದಿಗೆ ನೈರುತ್ಯ ರೈಲ್ವೆ ನಿರಂತರ ಪ್ರಗತಿ ಸಾಧಿಸಿದೆ ಎಂದು ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಮಂಜುನಾಥ ಕಣಮಡಿ ತಿಳಿಸಿದ್ದಾರೆ.





















