SK Home Ad
Home ನಮ್ಮ ಜಿಲ್ಲೆ ಚಿತ್ರದುರ್ಗ ಕಾಡುಗೊಲ್ಲರಿಗೆ ಎಸ್‌ಟಿ ಸ್ಥಾನಮಾನಕ್ಕೆ ಮತ್ತೆ ಶಿಫಾರಸು

ಕಾಡುಗೊಲ್ಲರಿಗೆ ಎಸ್‌ಟಿ ಸ್ಥಾನಮಾನಕ್ಕೆ ಮತ್ತೆ ಶಿಫಾರಸು

0
48

ಹಿರಿಯೂರು: ಕಾಡುಗೊಲ್ಲ ಸಮುದಾಯವನ್ನು ಎಸ್‌ಟಿಗೆ ಸೇರ್ಪಡೆ ಮಾಡಲು ನಾವು ಕೇಂದ್ರಕ್ಕೆ ಶಿಫಾರಸ್ಸು ಮಾಡಿದ್ದೇವೆ, ಮತ್ತೊಮ್ಮೆ ಕಳುಹಿಸುತ್ತೇವೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ಹಿರಿಯೂರು ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ಚುನಾವಣೆ ವೇಳೆ ದೇವೇಗೌಡರು ಆದೇಶ ನಮ್ಮ ಜೇಬಿನಲ್ಲಿದೆ ಎಂಬಂತೆ ಭರವಸೆ ನೀಡಿದ್ದರು. ಬಿಜೆಪಿ, ಜೆಡಿಎಸ್ ನವರು ಭರವಸೆ ನೀಡಿದ್ದರು. ಆದರೆ, ನಾವು ಕಳುಹಿಸಿದ್ದ ಶಿಫಾರಸ್ಸನ್ನು ಕೇಂದ್ರ ಸರ್ಕಾರ ರಿಜೆಕ್ಟ್ ಮಾಡಿದೆ. ಮತ್ತೆ ನಾವು ಈ ಬಗ್ಗೆ ಕೇಂದ್ರಕ್ಕೆ ಶಿಫಾರಸ್ಸು ಮಾಡುತ್ತೇವೆ ಎಂದರು.

ನೀತಿ ಸಂಹಿತೆ ಬರದಿದ್ದರೆ ಮತ್ತೆ ಬಂದು ಪ್ರಜಾಸೇವೆ ಕಾರ್ಯಕ್ರಮ ಮಾಡುತ್ತೇನೆ. ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆಗೆ ನಾವು ಬದ್ಧರಾಗಿದ್ದೇವೆ ಎಂದರು.

ಹಿರಿಯೂರಲ್ಲಿ ನಾವು ನಾಲ್ಕು ಸಲ ಸರ್ವೇ ಮಾಡಿಸಿದ್ದೇವೆ. ಹಿರಿಯೂರಲ್ಲಿ ಕಾಂಗ್ರೆಸ್ ಪರ ಶೇ. 72 ರಷ್ಟು ಜನರ ಬೆಂಬಲ ನಮ್ಮ ಪರ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.