ಬಾಗಲಕೋಟೆ: ರಾಜ್ಯ ಸರ್ಕಾರವು ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಕ್ಷೇತ್ರಗಳ ಅಂತಿಮ ಮೀಸಲು ಪಟ್ಟಿಯನ್ನು ಪ್ರಕಟಿಸಿದೆ. ಜಿಪಂ 37 ಕ್ಷೇತ್ರಗಳ ಪೈಕಿ 19 ಕ್ಷೇತ್ರಗಳು ಮಹಿಳೆಯರಿಗೆ ಮೀಸಲಾಗಿದ್ದರೆ, 136 ತಾಪಂ ಕ್ಷೇತ್ರಗಳ ಪೈಕಿ 73 ಮಹಿಳೆಯರಿಗೆ ಮೀಸಲಾಗಿದೆ. ಸ್ಥಾನ ಮೀಸಲು ವಿಷಯದಲ್ಲಿ ಮಹಿಳಾ ಸ್ಥಾನಗಳ ಸಂಖ್ಯೆ ಅಧಿಕವಾಗಿದೆ.
ಜಿಪಂ ಮೀಸಲು ವಿವರ: ಜಿಲ್ಲಾ ಪಂಚಾಯಿತಿಯ 37 ಕ್ಷೇತ್ರಗಳ ಪೈಕಿ 19 ಮಹಿಳೆಯರಿಗೆ ಮೀಸಲಾಗಿವೆ. ಅನುಸೂಚಿತ ಜಾತಿಗೆ ಮೀಸಲಿಟ್ಟ 7 ಸ್ಥಾನಗಳ ಪೈಕಿ 4 ಮಹಿಳೆಯರಿಗೆ, ಅನುಸೂಚಿತ ಪಂಗಡ 2ರ ಪೈಕಿ 1 ಮಹಿಳಾ, ಹಿಂದುಳಿದ ವರ್ಗ ಅ 7 ಸ್ಥಾನಗಳ ಪೈಕಿ 4 ಮಹಿಳೆಯರಿಗೆ, ಹಿಂದುಳಿದ ವರ್ಗ ಬ 2 ಸ್ಥಾನಗಳ ಪೈಕಿ ಒಂದು ಮಹಿಳಾ ಮೀಸಲು, ಸಾಮಾನ್ಯ ವರ್ಗ 19ರ ಪೈಕಿ 9 ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿರಿಸಿ ರಾಜ್ಯ ಸರ್ಕಾರವು ರಾಜ್ಯಪತ್ರ ಹೊರಡಿಸಿದೆ.
ತಾಪಂ ಮೀಸಲು ವಿವರ: ತೇರದಾಳ 7 ಕ್ಷೇತ್ರಗಳ ಪೈಕಿ ನಾಲ್ಕು ಕ್ಷೇತ್ರಗಳಲ್ಲಿ ಮಹಿಳಾ ಮೀಸಲು, ಗುಳೇದಗುಡ್ಡದಲ್ಲಿ 9 ಸ್ಥಾನಗಳ ಪೈಕಿ ಐದು ಮಹಿಳಾ ಮೀಸಲು, ಹುನಗುಂದ, ಇಳಕಲ್ಲ ತಲಾ 11 ಕ್ಷೇತ್ರಗಳ ಪೈಕಿ ತಲಾ ಆರು ಕ್ಷೇತ್ರಗಳಲ್ಲಿ ಮಹಿಳಾ ಮೀಸಲು ನೀಡಲಾಗಿದೆ. ರಬಕವಿ ಬನಹಟ್ಟಿ 9 ಕ್ಷೇತ್ರದಲ್ಲಿ 5 ಮಹಿಳಾ ಮೀಸಲು, ಬಾಗಲಕೋಟೆ 17ರಲ್ಲಿ 9 ಮಹಿಳಾ ಮೀಸಲು, ಬಾದಾಮಿ 19 ಸ್ಥಾನಗಳ ಪೈಕಿ 10, ಜಮಖಂಡಿ 21 ಸ್ಥಾನಗಳ ಪೈಕಿ 11ರಲ್ಲಿ ಮಹಿಳಾ ಮೀಸಲು, ಮುಧೋಳ 17 ರಲ್ಲಿ 9 ಸ್ಥಾನಗಳನ್ನು ಮಹಿಳಾ ಮೀಸಲು ಮಾಡಲಾಗಿದೆ. ನಿಯಮಗಳಂತೆ ಅನುಸೂಚಿತ ಜಾತಿ, ಪಂಗಡ, ಹಿಂದುಳಿದ ವರ್ಗ ಅ ಹಾಗೂ ಬ ಮತ್ತು ಸಾಮಾನ್ಯ ಕ್ಷೇತ್ರಗಳನ್ನೂ ಪ್ರತ್ಯೇಕವಾಗಿ ಉಲ್ಲೇಖಿಸಲಾಗಿದೆ.





















