BBK13: ‘ಬಿಗ್ ಬಾಸ್ ಕನ್ನಡ ಸೀಸನ್ 13’ರ ರಿಯಾಲಿಟಿ ಶೋನಲ್ಲಿ ಈ ವಾರ ಮನರಂಜನೆ ಜತೆಗೆ ಎಲಿಮಿನೇಷನ್ ಆತಂಕವೂ ಮುಗಿಲು ಮುಟ್ಟಿದೆ. ಮನೆಯಲ್ಲಿ ಸ್ಪರ್ಧಿ ಯಶಸ್ ಮಹಿಳಾ ಸ್ಪರ್ಧಿಗಳಾದ ಆಸಿಯಾ ಹಾಗೂ ಸೌಂದರ್ಯಾ ಶೆಟ್ಟಿ ಜೊತೆ ಹೆಚ್ಚು ಆಪ್ತರಾಗಿದ್ದು, ಉಳಿದವರನ್ನು ಅಕ್ಕ-ತಂಗಿ ಎಂದು ಕರೆಯುತ್ತಿದ್ದಾರೆ. ಅವರ ಈ ಫ್ಲರ್ಟಿಂಗ್ ಗೇಮ್ ಪ್ರೇಕ್ಷಕರಲ್ಲಿ ನೆಗೆಟಿವ್ ಅಭಿಪ್ರಾಯ ಮೂಡಿಸುತ್ತಿರುವ ಬೆನ್ನಲ್ಲೇ, ಇವತ್ತೀನ (ಭಾನುವಾರ) ಸಂಚಿಕೆಯಲ್ಲಿ ನಿರೂಪಕ ಕಿಚ್ಚ ಸುದೀಪ್ ಈ ವಿಚಾರವನ್ನು ಇಟ್ಟುಕೊಂಡು ತಮಾಷೆ ಮಾಡಿದ್ದಾರೆ.
ಹಾಗೇ ಯಶಸ್ ಈ ವಿಚಾರವಾಗಿ ಸುದೀಪ್ ಅವರಿಗೆ ವಿಮರ್ಶೆ ಮಾಡುವಾಗ, ಮನೆಯಲ್ಲಿ ಆಸಿಯಾ ಮತ್ತು ಸೌಂದರ್ಯಾ ಇಬ್ಬರನ್ನು ಬಿಟ್ಟು ಎಲ್ಲರೂ ಅಕ್ಕ-ತಂಗಿ ಎಂಬಂತೆ ಹೇಳಿದರು. ಇದೇ ವಿಷಯಕ್ಕೆ ಕಿಚ್ಚ ನಿನ್ನೇಯ ಸಂಚಿಕೆಯಲ್ಲಿ ಗರಂ ಆಗಿದ್ದರು, ಇದೀಗ ಮತ್ತೇ ತಾವು ನಗುವುದರ ಜೊತೆಗೆ ಸ್ಪರ್ಧಿಗಳನ್ನು ನಗಿಸುತ್ತಿದ್ದಾರೆ. ಈ ವಿಚಾರ ಕಲರ್ಸ್ ಕನ್ನಡ ಖಾತೆಯಲ್ಲಿ ಹಂಚಿಕೊಂಡಿರುವ ವೀಡಿಯೊ ಈಗ ವೈರಲ್ ಆಗುತ್ತಿದೆ.
ಇದೇ ವೇಳೆ ಸ್ಪರ್ಧಿ ಮಂಜು, “ಆಸಿ.. ಆ ಸೌಂದರ್ಯಾ ಅವರಿಗಿಂತ ನೀವೇ ವಾಸಿ, ಆದ್ರೆ ಏನ್ ಮಾಡೋದು.. ನೀವು ಯಶಸ್ ಅವರ ಮನದರಸಿ” ಎಂದು ಕವಿತೆ ವಾಚಿಸಿದ್ದು, ಕಿಚ್ಚ ಸುದೀಪ್ ಸೇರಿದಂತೆ ಇಡೀ ಬಿಗ್ ಬಾಸ್ ಮನೆ ನಗೆಗಡಲಲ್ಲಿ ತೇಲುವಂತೆ ಮಾಡಿತು.
ಮತ್ತೊಂದೆಡೆ, ಈ ವಾರದ ಎಲಿಮಿನೇಷನ್ ಪ್ರಕ್ರಿಯೆ ಪ್ರೇಕ್ಷಕರಲ್ಲಿ ತೀವ್ರ ಕೌತುಕ ಮೂಡಿಸಿದೆ. ಪ್ರಸ್ತುತ ಸಂಗೀತಾ ಭಟ್, ಕಿರಣ್ ಶಾಸ್ತ್ರಿ ಹಾಗೂ ಲಿಖಿತ್ ಡೇಂಜರ್ ಝೋನ್ನಲ್ಲಿದ್ದು, ಈ ಪೈಕಿ ಒಬ್ಬರು ಬಿಗ್ ಬಾಸ್ ಮನೆಯಿಂದ ಹೊರಬೀಳುವುದು ಖಚಿತವಾಗಿದೆ. ಈ ಬಾರಿಯ ಎಲಿಮಿನೇಷನ್ ವಿಮಾನಯಾನ ಕಾನ್ಸೆಪ್ಟ್ನಲ್ಲಿ ನಡೆಯುತ್ತಿದ್ದು, ಸಂಪೂರ್ಣ ಭಿನ್ನವಾಗಿರಲಿದೆ. ಪ್ರೋಮೋದಲ್ಲಿ ಸುಳಿವು ನೀಡಿದಂತೆ, ಕಮಾಂಡೋಗಳ ವೇಷಧಾರಿಗಳು ಮನೆಗೆ ಆಗಮಿಸಿ ಎಲಿಮಿನೇಟ್ ಆದ ಸ್ಪರ್ಧಿಗಳನ್ನು ಕರೆದೊಯ್ಯಲಿದ್ದಾರೆ. ಎಲಿಮಿನೇಟ್ ಆದ ಸ್ಪರ್ಧಿ ನೇರವಾಗಿ ವೇದಿಕೆಗೆ ಆಗಮಿಸಿ ಸುದೀಪ್ ಅವರನ್ನು ಭೇಟಿಯಾಗಲಿದ್ದಾರೆ.






















