SK Home Ad
Home ಸಿನಿ ಮಿಲ್ಸ್ ‘ಬಿಗ್ ಬಾಸ್‌ ಇದು, ಸ್ಪ್ಲಿಟ್ಸ್‌ವಿಲ್ಲಾ ಅಲ್ಲ’: ಸೌಂದರ್ಯಾಗೆ ಖಡಕ್ ವಾರ್ನಿಂಗ್ ಕೊಟ್ಟ ಆಸಿಯಾ

‘ಬಿಗ್ ಬಾಸ್‌ ಇದು, ಸ್ಪ್ಲಿಟ್ಸ್‌ವಿಲ್ಲಾ ಅಲ್ಲ’: ಸೌಂದರ್ಯಾಗೆ ಖಡಕ್ ವಾರ್ನಿಂಗ್ ಕೊಟ್ಟ ಆಸಿಯಾ

0
21

ಬೆಂಗಳೂರು: ‘ಬಿಗ್ ಬಾಸ್ ಕನ್ನಡ ಸೀಸನ್ 13’ ಅಖಾಡದಲ್ಲಿ ಸ್ಪರ್ಧಿಗಳ ನಡುವಿನ ಜಟಾಪಟಿ ತೀವ್ರಗೊಳ್ಳುತ್ತಿದೆ. ಮಿಡ್-ವೀಕ್ ಎಲಿಮಿನೇಷನ್ ಭೀತಿ ಎದುರಾಗಿರುವುದರಿಂದ ಮನೆಮಂದಿಯ ನಡುವೆ ವಾಕ್ಸಮರ ತಾರಕಕ್ಕೇರಿದ್ದು, ವಿಶೇಷವಾಗಿ ಮಹಿಳಾ ಸ್ಪರ್ಧಿಗಳಾದ ಆಸಿಯಾ ಮತ್ತು ಸೌಂದರ್ಯಾ ಶೆಟ್ಟಿ ನಡುವಿನ ಕಿತ್ತಾಟ ಜೋರಾಗಿದೆ.

ಇತ್ತೀಚೆಗೆ ನಡೆದ ಟಾಸ್ಕ್ ಒಂದರ ವೇಳೆ ಸೌಂದರ್ಯಾ ಶೆಟ್ಟಿ ಹೊಡಿತೀನಿ, ಹೊಡಿತೀನಿ ಎಂದು ಹೇಳುವುದಕ್ಕೆ ಸಿಡಿದೆದ್ದ ಆಸಿಯಾ, “ಇದು ಸ್ಪ್ಲಿಟ್ಸ್‌ವಿಲ್ಲಾ ಅಲ್ಲ, ಬಿಗ್ ಬಾಸ್” ಎಂದು ಖಡಕ್ ಆಗಿ ಎಚ್ಚರಿಸಿದ್ದಾರೆ. ಎಂಟಿವಿ ವಾಹಿನಿಯ ‘ಸ್ಪ್ಲಿಟ್ಸ್‌ವಿಲ್ಲಾ ಸೀಸನ್ 16’ರಲ್ಲಿ ಸ್ಪರ್ಧಿಸಿ 3ನೇ ರನ್ನರ್ ಆಪ್ ಆಗಿದ್ದ ಸೌಂದರ್ಯಾ, ಅಲ್ಲಿ ತಮ್ಮ ಅಬ್ಬರದ ಆಟಕ್ಕೆ ಹೆಸರುವಾಸಿಯಾಗಿದ್ದರು. ಆದ್ರೆ ಬೇರೆ ರಿಯಾಲಿಟಿ ಶೋಗಳ ಅನುಭವ ಬಿಗ್ ಬಾಸ್‌ನಲ್ಲಿ ಕೆಲಸ ಮಾಡುವುದಿಲ್ಲ ಎಂಬುದನ್ನು ನೇರವಾಗಿಯೇ ನೆನಪಿಸಿದ ಆಸಿಯಾ, ಸೌಂದರ್ಯಾಗೆ ಮಾತಿನ ಚಾಟಿ ಬೀಸಿದ್ದಾರೆ.

ಆಸಿಯಾ ಈ ಹೇಳಿಕೆಯಿಂದ ಕೆರಳಿದ ಸೌಂದರ್ಯಾ, “ಇದು ನಿನ್ನ ಮನೆಯೂ ಅಲ್ಲ” ಎಂದು ಸಡ್ಡು ಹೊಡೆದಿದ್ದಾರೆ. ಮತ್ತೊಂದೆಡೆ, ಇದೇ ಸಂಚಿಕೆಯಲ್ಲಿ ಟಾಸ್ಕ್ ವಿಚಾರವಾಗಿ ಅವಿನಾಶ್ ಮತ್ತು ತಾಂಡವ್ ರಾಮ್ ನಡುವೆಯೂ ಮಾತಿನ ಚಕಮಕಿ ನಡೆದಿದ್ದು, ಮಧ್ಯಂತರ ಎಲಿಮಿನೇಷನ್ ಟೆನ್ಷನ್‌ನಿಂದಾಗಿ ಇಡೀ ಮನೆ ರಣರಂಗವಾಗಿದೆ.