SK Home Ad
Home ಸಿನಿ ಮಿಲ್ಸ್ 100ರ ಗಡಿ ದಾಟಿದ ‘ಅಗ್ನಿಸಾಕ್ಷಿ’: ಸೆಟ್‌ನಲ್ಲೇ ಕೇಕ್ ಕತ್ತರಿಸಿ ಸಂಭ್ರಮಿಸಿದ ತಂಡ

100ರ ಗಡಿ ದಾಟಿದ ‘ಅಗ್ನಿಸಾಕ್ಷಿ’: ಸೆಟ್‌ನಲ್ಲೇ ಕೇಕ್ ಕತ್ತರಿಸಿ ಸಂಭ್ರಮಿಸಿದ ತಂಡ

0
66

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಅಗ್ನಿಸಾಕ್ಷಿ’ ಧಾರಾವಾಹಿ ಯಶಸ್ವಿಯಾಗಿ ನೂರು ಸಂಚಿಕೆಗಳನ್ನು ಪೂರೈಸಿ ಶತಕದ ಸಂಭ್ರಮದಲ್ಲಿದೆ. ಪ್ರಸಾರ ಆರಂಭಿಸಿದ ಬಳಿಕ 100 ಸಂಚಿಕೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ಧಾರಾವಾಹಿಯ ಕಲಾವಿದರು ಹಾಗೂ ತಂತ್ರಜ್ಞರು ಶೂಟಿಂಗ್ ಸೆಟ್‌ನಲ್ಲೇ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ.

‘ಅಗ್ನಿಸಾಕ್ಷಿ’ ಕಥೆಯ ಕೇಂದ್ರಬಿಂದು ಅಗ್ನಿ ಮತ್ತು ಸಾಕ್ಷಿ. ಆರಂಭದಲ್ಲಿ ಪರಸ್ಪರ ಭಿನ್ನಾಭಿಪ್ರಾಯ ಹಾಗೂ ದ್ವೇಷದಿಂದ ಸಾಗುವ ಇವರ ಸಂಬಂಧ ಇದೀಗ ನಿಧಾನವಾಗಿ ಪ್ರೀತಿಯತ್ತ ತಿರುಗುತ್ತಿದೆ. ಈ ಕಥೆಯ ತಿರುವುಗಳು ವೀಕ್ಷಕರಲ್ಲಿ ಅತ್ಯಂತ ಕುತೂಹಲ ಮೂಡಿಸುತ್ತಿವೆ.

100 ಸಂಚಿಕೆಗಳ ಪೂರೈಕೆಯ ಖುಷಿಯನ್ನು ನಾಯಕ ಅಗ್ನಿ ಪಾತ್ರದಲ್ಲಿ ನಟಿಸುತ್ತಿರುವ ಶಮಂತ್ ಬ್ರೋ ಗೌಡ ಕೂಡ ಹಂಚಿಕೊಂಡಿದ್ದಾರೆ. ಧಾರಾವಾಹಿ ಇದೇ ರೀತಿ ಮುಂದುವರಿದು 10 ಸಾವಿರ ಸಂಚಿಕೆಗಳನ್ನು ಪೂರೈಸಲಿ ಎಂದು ಅವರು ಆಶಯ ವ್ಯಕ್ತಪಡಿಸಿದ್ದು, ವೀಕ್ಷಕರ ಪ್ರೀತಿ ಮತ್ತು ಬೆಂಬಲಕ್ಕೆ ಧನ್ಯವಾದಗಳನ್ನು ತಿಳಿಸಿದ್ದಾರೆ.

ಇನ್ನು ಮುಂದಿನ ಸಂಚಿಕೆಗಳಲ್ಲಿ ಅಗ್ನಿಯ ಕುಟುಂಬದಲ್ಲಿ ಎದುರಾಗುತ್ತಿರುವ ಸಮಸ್ಯೆಗಳು ಕಥೆಗೆ ಮತ್ತಷ್ಟು ತಿರುವು ನೀಡಲಿವೆ. ತಂಗಿಯ ಮದುವೆ ಮಾಡಬೇಕು ಎಂಬ ಅಗ್ನಿಯ ಕನಸು ಈಡೇರುತ್ತದೆಯೇ? ಕೌಟುಂಬಿಕ ಸವಾಲುಗಳನ್ನು ಆತ ಹೇಗೆ ಎದುರಿಸುತ್ತಾನೆ? ಎಂಬ ಪ್ರಶ್ನೆಗಳಿಗೆ ಮುಂದಿನ ಕಥೆ ಉತ್ತರ ನೀಡಲಿದೆ.

ಒಟ್ಟಿನಲ್ಲಿ ಶತಕ ಪೂರೈಸಿ ವೀಕ್ಷಕರ ಮನಗೆದ್ದು ಮುನ್ನುಗ್ಗುತ್ತಿರುವ ಧಾರಾವಾಹಿ ಮುಂದಿನ ದಿನಗಳಲ್ಲಿ ಇಂತಹ ಸಂಭ್ರಮಗಳನ್ನು ಆಚರಿಸುತ್ತ ಸಾಗಲಿ ಎನ್ನುವುದು ಕಲಾವಿದರ ಆಶಯವಾಗಿದೆ.