SK Home Ad
Home ನಮ್ಮ ಜಿಲ್ಲೆ ಉಡುಪಿ ನದಿಗೆ ಬಿದ್ದ ಕಾರು: ಚಾಲಕ ಸಹಿತ ಮಗುವಿನ ರಕ್ಷಣೆ

ನದಿಗೆ ಬಿದ್ದ ಕಾರು: ಚಾಲಕ ಸಹಿತ ಮಗುವಿನ ರಕ್ಷಣೆ

0
13

ಉಡುಪಿ: ಕೊಡವೂರು ಚೆನ್ನಂಗಡಿ ಸಮೀಪ ನದಿಗೆ ಕಾರೊಂದು ಬಿದ್ದಿದ್ದು, ಅದರಲ್ಲಿದ್ದ ಚಾಲಕ ಹಾಗೂ ಮೂರು ವರ್ಷದ ಮಗುವನ್ನು ಮೀನುಗಾರರೊಬ್ಬರ ಸಾಹಸದಿಂದ ರಕ್ಷಿಸಿದ ಘಟನೆ ಭಾನುವಾರ ನಡೆದಿದೆ.

ಕಾರು ನದಿಗೆ ಬಿದ್ದಿರುವುದನ್ನು ಗಮನಿಸಿದ ಮೀನುಗಾರ ಗಣೇಶ್ ಚೆನ್ನಂಗಡಿ ಅವರು, ಕ್ಷಣವೂ ವಿಳಂಬ ಮಾಡದೆ ತಮ್ಮ ಪ್ರಾಣದ ಹಂಗು ತೊರೆದು ನದಿಗೆ ಧುಮುಕಿ ಕಾರಿನೊಳಗೆ ಸಿಲುಕಿದ್ದ ಚಾಲಕ ಹಾಗೂ ಮೂರು ವರ್ಷದ ಮಗುವನ್ನು ಸುರಕ್ಷಿತವಾಗಿ ಹೊರಕ್ಕೆ ಕರೆತರುವಲ್ಲಿ ಯಶಸ್ವಿಯಾದರು.

ನೀರಿನ ಸೆಳೆತದ ನಡುವೆಯೂ ಧೈರ್ಯದಿಂದ ಕಾರ್ಯಾಚರಣೆ ನಡೆಸಿ ಇಬ್ಬರ ಜೀವ ಉಳಿಸಿದ ಗಣೇಶ್ ಅವರ ಸಮಯಪ್ರಜ್ಞೆ ಹಾಗೂ ಸಾಹಸಕ್ಕೆ ಸ್ಥಳೀಯರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಅಪಾಯದ ಸಂದರ್ಭದಲ್ಲೂ ಮಾನವೀಯತೆ ಮೆರೆದ ಅವರ ಕಾರ್ಯ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.