SK Home Ad
Home ಸುದ್ದಿ ಕಾರ್ಪೊರೇಟ್‌ ವಲಯಕ್ಕೆ ಮಹಿಳಾ ನಾಯಕತ್ವ ಅಗತ್ಯ: ಮುಕೇಶ್‌ ಅಂಬಾನಿ

ಕಾರ್ಪೊರೇಟ್‌ ವಲಯಕ್ಕೆ ಮಹಿಳಾ ನಾಯಕತ್ವ ಅಗತ್ಯ: ಮುಕೇಶ್‌ ಅಂಬಾನಿ

0
58

ಮುಂಬಯಿ: ಭಾರತದ ಕಾರ್ಪೊರೇಟ್‌ ವಲಯದಲ್ಲಿ ಕೆಲಸ ಮಾಡುವ ಮಹಿಳೆಯರು ಹಾಗೂ ತಾಯಂದಿರನ್ನು ಬೆಂಬಲಿಸಲು ಎಲ್ಲರೂ ಒಟ್ಟಾಗಿ ಉತ್ತಮ ವ್ಯವಸ್ಥೆಯನ್ನು ರೂಪಿಸಬೇಕು. ಇಲ್ಲಿ ಮಹಿಳಾ ನಾಯಕತ್ವ ಹೆಚ್ಚಬೇಕು ಎಂದು ಮುಕೇಶ್‌ ಅಂಬಾನಿ ಕರೆ ನೀಡಿದ್ದಾರೆ.

ಅರುಂಧತಿ ಭಟ್ಟಾಚಾರ್ಯ ಅವರ ʻಇಂಡೊಮಿಟಬಲ್ʼ ಪುಸ್ತಕದ ಹಿಂದಿ ಆವೃತ್ತಿಯ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿ, ಅವರು ಹಲವು ಪ್ರಮುಖ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಕೆಲಸದ ಸ್ಥಳದಲ್ಲಿ ಮತ್ತು ಸಮಸ್ಯೆಗಳನ್ನು ಬಗೆಹರಿಸುವಾಗ ಮಹಿಳೆಯರು ವಿಶೇಷವಾದ ಭಾವನಾತ್ಮಕ ಬುದ್ಧಿವಂತಿಕೆ (ಇಕ್ಯೂ – ಎಂಪತಿ) ತೋರುತ್ತಾರೆ. ಬುದ್ಧಿವಂತಿಕೆಗಿಂತಲೂ (ಐಕ್ಯೂ) ಹೆಚ್ಚು ಭಾವನಾತ್ಮಕ ಬುದ್ಧಿವಂತಿಕೆ ಅಗತ್ಯ. ಈ ನಿಟ್ಟಿನಲ್ಲಿ ಹೆಚ್ಚಿನ ಮಹಿಳಾ ನಾಯಕರು ಜಗತ್ತಿಗೆ ಈಗ ತುರ್ತಾಗಿ ಬೇಕಾಗಿದ್ದಾರೆ ಎಂದು ಅಂಬಾನಿ ಹೇಳಿದರು.

ಅರುಂಧತಿ ಭಟ್ಟಾಚಾರ್ಯ ಅವರು 2018ರಿಂದ ರಿಲಯನ್ಸ್ ಸಂಸ್ಥೆಯಲ್ಲಿದ್ದಾರೆ. ಯಾವುದೇ ಕಷ್ಟಗಳಿಗೆ ಹೆದರದೆ ಮುನ್ನುಗ್ಗುವ ಅವರ ಗುಣ ಎಲ್ಲರಿಗೂ ಸ್ಫೂರ್ತಿ ಎಂದರು. ಈ ಪುಸ್ತಕವು ದೇಶದ ಮೂಲೆಮೂಲೆಯಲ್ಲಿರುವ ಯುವಕ-ಯುವತಿಯರನ್ನು ತಲುಪಲಿದೆ ಎಂದು ಅಭಿಪ್ರಾಯಪಟ್ಟರು. ಕೆಲಸ ಮಾಡುವ ಮಹಿಳೆಯರಿಗೆ ಸಿಗಬೇಕಾದ ಗೌರವ ಮತ್ತು ಸೌಲಭ್ಯಗಳನ್ನು ಖಾತರಿಪಡಿಸಲು ಕಾರ್ಪೊರೇಟ್ ಕ್ಷೇತ್ರವು ಇನ್ನೂ ಹೆಚ್ಚಿನ ಕೆಲಸ ಮಾಡಬೇಕು. ಇದಕ್ಕಾಗಿ ಎಲ್ಲ ಉದ್ಯಮಿಗಳು ಒಟ್ಟಾಗಿ ಕೈಜೋಡಿಸಬೇಕು. ಈ ದಿಟ್ಟ ಮಹಿಳೆಯರು ‘ವಿಕಸಿತ ಭಾರತ’ದ ನಿರ್ಮಾಣಕ್ಕೆ ದಾರಿ ತೋರಿಸಲಿ ಎಂದು ಅಂಬಾನಿ ಹಾರೈಸಿದರು.