ಸಾಮಾನ್ಯ ಜನರ ಅಡುಗೆಮನೆಯ ಅವಿಭಾಜ್ಯ ಅಂಗವಾಗಿರುವ ಈರುಳ್ಳಿ ದರ ಇದೀಗ ಶತಕದ ಗಡಿಯತ್ತ ಮುನ್ನುಗ್ಗುತ್ತಿದ್ದು, ಗ್ರಾಹಕರ ಕಣ್ಣಲ್ಲಿ ನೀರು ತರಿಸುತ್ತಿದೆ. ಮಳೆ ಇಲ್ಲದ ಹಾಗೂ ಹಳೆಯ ದಾಸ್ತಾನು ಕುಸಿತ ,ಹೊಸ ಫಸಲು ಮಾರುಕಟ್ಟೆಗೆ ಬರುವುದು ವಿಳಂಬವಾಗಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಈರುಳ್ಳಿ ಬೆಲೆಯಲ್ಲಿ ಭಾರಿ ಏರಿಕೆ ಕಂಡುಬಂದಿದೆ.
ಬೆಂಗಳೂರಿನ ಚಿಲ್ಲರೆ ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ಈರುಳ್ಳಿ ಬೆಲೆ ಪ್ರತಿ ಕೆ.ಜಿ.ಗೆ ರೂ.70 ರಿಂದ ರೂ.80 ರವರೆಗೆ ತಲುಪಿದೆ. ಇನ್ನು ರಾಜ್ಯದ ಪ್ರಮುಖ ಎಪಿಎಂಸಿ ಸಗಟು ಮಾರುಕಟ್ಟೆಗಳಲ್ಲಿ ಕ್ವಿಂಟಲ್ ಈರುಳ್ಳಿ ದರ ಸರಾಸರಿ ರೂ.4,000 ದಿಂದ ರೂ.5,000 ವರೆಗೆ ಇದೆ.
ರಾಜ್ಯದ ಪ್ರಮುಖ ಎಪಿಎಂಸಿ ಮಾರುಕಟ್ಟೆಗಳ ಇಂದಿನ ಸಗಟು ದರ ಹೀಗಿದೆ:
ಬೆಂಗಳೂರು (ಯಶವಂತಪುರ): ಕನಿಷ್ಠ ರೂ.3,000 – ಗರಿಷ್ಠ ರೂ.5,500 (ಸರಾಸರಿ: ರೂ.4,200)
ಉಡುಪಿ: ಕನಿಷ್ಠ ರೂ.4,400 – ಗರಿಷ್ಠ ರೂ.4,500
ದೊಡ್ಡಬಳ್ಳಾಪುರ: ಕನಿಷ್ಠ ರೂ.4,000 – ಗರಿಷ್ಠ ರೂ.5,000
ಶಿವಮೊಗ್ಗ: ಕನಿಷ್ಠ ರೂ.2,400 – ಗರಿಷ್ಠ ರೂ.6,000
ವಿಜಯಪುರ: ಕನಿಷ್ಠ ರೂ.1,500 – ಗರಿಷ್ಠ ರೂ.5,000
ಈ ಮೇಲಿನ ಸಗಟು ದರಗಳು ಈರುಳ್ಳಿಯ ಗಾತ್ರ ಹಾಗೂ ಗುಣಮಟ್ಟದ ಆಧಾರದ ಮೇಲೆ ನಿರ್ಧಾರವಾಗುತ್ತವೆ. ಸಾರಿಗೆ ಮತ್ತು ಇತರ ವೆಚ್ಚಗಳ ಕಾರಣದಿಂದಾಗಿ ಸ್ಥಳೀಯ ಚಿಲ್ಲರೆ ಅಂಗಡಿಗಳಲ್ಲಿ ಬೆಲೆ ಮತ್ತಷ್ಟು ಹೆಚ್ಚಾಗಿರುತ್ತದೆ. ಮುಂಗಾರು ಫಸಲು ಮಾರುಕಟ್ಟೆಗೆ ಬರುವವರೆಗೂ ಬೆಲೆಯಲ್ಲಿ ಏರಿಳಿತ ಮುಂದುವರಿಯುವ ಸಾಧ್ಯತೆಯಿದೆ.






















