SK Home Ad
Home ಸುದ್ದಿ ಶ್ರೀನಗರದಲ್ಲಿ ಸಂಭ್ರಮದಿಂದ ಜನ್ಮಾಷ್ಟಮಿ ಆಚರಣೆ: ಕಾಶ್ಮೀರಿ ಪಂಡಿತರಿಂದ ಶೋಭಾಯಾತ್ರೆ

ಶ್ರೀನಗರದಲ್ಲಿ ಸಂಭ್ರಮದಿಂದ ಜನ್ಮಾಷ್ಟಮಿ ಆಚರಣೆ: ಕಾಶ್ಮೀರಿ ಪಂಡಿತರಿಂದ ಶೋಭಾಯಾತ್ರೆ

0
12

ಭಗವಾನ್ ಶ್ರೀಕೃಷ್ಣನ ಜನ್ಮದಿನ ಸೂಚಿಸುವ ಜನ್ಮಾಷ್ಟಮಿಯನ್ನು ಕಾಶ್ಮೀರಿ ಪಂಡಿತ ಸಮುದಾಯವು ಶುಕ್ರವಾರ ಧಾರ್ಮಿಕ ಶ್ರದ್ಧೆ ಹಾಗೂ ಸಂಭ್ರಮದಿಂದ ಆಚರಿಸಿತು. ಈ ಸಂದರ್ಭದಲ್ಲಿ ಶ್ರೀನಗರ ನಗರದ ಪ್ರಮುಖ ಪ್ರದೇಶಗಳ ಮೂಲಕ ಶೋಭಾಯಾತ್ರೆಯನ್ನು ಆಯೋಜಿಸಲಾಯಿತು.

ಹಬ್ಬದ ಅಂಗವಾಗಿ ನಡೆದ ಶೋಭಾಯಾತ್ರೆಯು ಹಬ್ಬಾ ಕದಲ, ರೀಗಲ್ ಚೌಕ್ ಮತ್ತು ಲಾಲ್ ಚೌಕ್ ಸೇರಿದಂತೆ ನಗರದ ಹಲವು ಪ್ರದೇಶಗಳ ಮೂಲಕ ಸಾಗಿತು. ಬಳಿಕ ಅದು ಮುಖ್ಯ ಕಾರ್ಯಕ್ರಮದ ಸ್ಥಳಕ್ಕೆ ಬಂದಿತ್ತು ಯಾತ್ರೆ ಶಾಂತಿಯುತವಾಗಿ ನಡೆಯುವಯದಕ್ಕೆ ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆ ಮಾಡಲಾಗಿತ್ತು.

ಕಾಶ್ಮೀರಿ ಪಂಡಿತ ಸಮುದಾಯದ ಮುಖಂಡರೊಬ್ಬರು ಮಾತನಾಡಿ, ಜನ್ಮಾಷ್ಟಮಿಯು ಕಾಶ್ಮೀರಿ ಪಂಡಿತ ಸಮುದಾಯಕ್ಕೆ ವಿಶೇಷ ಮಹತ್ವ ಹೊಂದಿದೆ. ಈ ಹಬ್ಬವು ವಿವಿಧ ಸಮುದಾಯಗಳ ಜನರು ಒಗ್ಗೂಡಿ ಸಂಭ್ರಮಿಸುವ ಸಂದರ್ಭವಾಗಿಯೂ ರೂಪುಗೊಂಡಿದೆ, ಸ್ನೇಹಿತರು, ಸಂಬಂಧಿಕರು ಹಾಗೂ ಬಹುಸಂಖ್ಯಾತ ಸಮುದಾಯದ ಸದಸ್ಯರು ಈ ಸಂದರ್ಭದಲ್ಲಿ ಒಟ್ಟಾಗಿ ಸೇರಿ ಹಬ್ಬವನ್ನು ಆಚರಿಸುತ್ತಾರೆ ಎಂದು ಅವರು ತಿಳಿಸಿದರು.
“ನಮ್ಮ ಸ್ನೇಹಿತರು ಮತ್ತು ಸಂಬಂಧಿಕರು ಇಲ್ಲಿ ಭೇಟಿಯಾಗುತ್ತಾರೆ. ವಿಶೇಷವಾಗಿ ಬಹುಸಂಖ್ಯಾತ ಸಮುದಾಯದವರು ಈ ಹಬ್ಬಕ್ಕಾಗಿ ಕಾಯುತ್ತಾರೆ. ಏಕೆಂದರೆ ಶೋಭಾಯಾತ್ರೆಯ ಸಂದರ್ಭದಲ್ಲಿ ನಾವೆಲ್ಲರೂ ಒಟ್ಟಾಗಿ ಸೇರುತ್ತೇವೆ,” ಎಂದು ಅವರು ಹೇಳಿದರು.

ಜನ್ಮಾಷ್ಟಮಿ ಆಚರಣೆಯ ಇತಿಹಾಸವನ್ನು ಸ್ಮರಿಸಿದ ಅವರು, 1990ರ ದಶಕಕ್ಕೂ ಮುನ್ನ ಶ್ರೀನಗರದಲ್ಲಿ ಈ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿತ್ತು.ಕಾಶ್ಮೀರ ಪರಿಸ್ಥಿತಿ ಹದಗೆಟ್ಟ ನಂತರ ಈ ಸಂಪ್ರದಾಯಕ್ಕೆ ಅಡ್ಡಿಯಾಯಿತು 2007ರಲ್ಲಿ ಮತ್ತೆ ಆಚರಣೆಯನ್ನು ಆರಂಭಿಸಲಾಯಿತು. ಅಂದಿನಿಂದ ನಿರಂತರವಾಗಿ ಈ ಹಬ್ಬವನ್ನು ಆಚರಿಸುತ್ತಿದ್ದೇವೆ,” ಎಂದು ಹೇಳಿದರು.

ಆಚರಣೆಯಲ್ಲಿ ಕಾಶ್ಮೀರಿ ಪಂಡಿತ ಸಮುದಾಯದ ಸದಸ್ಯರೊಂದಿಗೆ ಇತರ ಸಮುದಾಯಗಳ ಜನರೂ ಭಾಗವಹಿಸಿದ್ದರು. ಅನೇಕ ಪುಟ್ಟ ಮಕ್ಕಳು ಸಾಂಪ್ರದಾಯಿಕ ಕಾಶ್ಮೀರಿ ಉಡುಪುಗಳನ್ನು ಧರಿಸಿ, ಕೈಯಲ್ಲಿ ಶ್ರೀಕೃಷ್ಣನ ಪುಟ್ಟ ವಿಗ್ರಹಗಳನ್ನು ಹಿಡಿದುಕೊಂಡು ಸಂಭ್ರಮದಲ್ಲಿ ಪಾಲ್ಗೊಂಡಿದ್ದರು.