SK Home Ad
Home ಸುದ್ದಿ ದೇಶ ನೇಪಾಳ ದುರಂತ: 10 ದಿನಗಳ ಬಳಿಕ ಸುರಂಗದಿಂದ ಕೇಳಿಸಿದ ಜೀವಂತ ಧ್ವನಿ; ಬದುಕಿದ್ದೆ ವಿಸ್ಮಯ!

ನೇಪಾಳ ದುರಂತ: 10 ದಿನಗಳ ಬಳಿಕ ಸುರಂಗದಿಂದ ಕೇಳಿಸಿದ ಜೀವಂತ ಧ್ವನಿ; ಬದುಕಿದ್ದೆ ವಿಸ್ಮಯ!

0
94

ನೇಪಾಳದಲ್ಲಿ ಆಗಸ್ಟ್‌ಕ್ಕೆ 26 ಭೋಟೇಕೋಷಿ ನದಿಯಲ್ಲಿ ಉಂಟಾದ ಭೀಕರ ಪ್ರವಾಹದಿಂದಾಗಿ (Flash Flood) ರಸುವಾ ಜಿಲ್ಲೆಯ ತ್ರಿಶೂಲಿ-3ಎ ಜಲವಿದ್ಯುತ್ ಯೋಜನೆಗೆ (Trishuli-3A Hydropower Project) ಸೇರಿದ ಸುರಂಗದ ಒಳಗೆ ಕಾರ್ಮಿಕರು ಸಿಲುಕಿಕೊಂಡಿದ್ದರು. ನೇಪಾಳದಲ್ಲಿ ಒಂಬತ್ತು ದಿನಗಳ ನಂತರ ತ್ರೀಶುಲಿ 3ಎ ಹೈಡ್ರೋಪವರ ಪ್ರೊಜೆಕ್ಟ್‌ ನ ಸೂರಂಗದಿಂದ ಇಬ್ಬರ ವ್ಯಕ್ತಿಗಳನ್ನು ಜಿವಂತವಾಗಿ ಹೊರಗೆ ತಗೆಯಲಾಗಿದೆ. “ರಕ್ಷಣಾ ತಂಡವು ಸಂಜಯ್ ಸಾಹ ಮತ್ತು ಕಬೀರ್ ಮಹರ್ಜನ್ ಅವರನ್ನು ಸುರಕ್ಷಿತವಾಗಿ ಹೊರತೆಗೆದಿದೆ. ಸುರಂಗದ ಒಳಗಿನಿಂದ ಧ್ವನಿ ಕೇಳಿಬಂದ ನಂತರ ರಕ್ಷಣಾ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗಿತ್ತು.

ಈ ರಕ್ಷಣೆ ಸಂಭವಿಸಿದ್ದು ಆ ಸುರಂಗದಿಂದ ರಕ್ಷಣಾ ತಂಡಕ್ಕೆ ಕುಗಿದ ಧ್ವನಿ ಕೇಳಿಸಿದ್ದಕ್ಕೆ ,ರಕ್ಷಣಾ ತಂಡ “ಭಯಪಡಬೇಡಿ, ನಾವು ನಿಮ್ಮ ರಕ್ಷಣೆಗೆ ಬಂದಿದೆವೆ” ಇದಕ್ಕೆ ಪ್ರತಿ ಉತ್ತರವಾಗಿ ಸುರಂಗದಿಂದ ಧ್ವನಿ ಕೇಳಿಬಂದವು. ನಂತರ ನೇಪಾಳ ಪೊಲೀಸರು ಮತ್ತು ಸಶಸ್ತ್ರ ಪೊಲೀಸ್ ಪಡೆ ರಕ್ಷಣಾ ಕಾರ್ಯಚರಣೆ ತೀವ್ರಗೊಳಿಸಿ ಸುರಂಗ ಒಳಗಿರೊ ಜನರನ್ನು ಸಂಪರ್ಕ ಸಾಧಿಸಿದರು.”ಇನ್ನೂ ಕೆಲವು ಜನರು ಸುರಂಗದೊಳಗೆ ಸಿಲುಕಿಕೊಂಡಿರಬಹುದು ಎಂದು ರಕ್ಷಣಾ ತಂಡಗಳು ಅಂದಾಜು ಮಾಡಲಾಗಿತ್ತು.

ನಂತರ ಭೀಕರ ಪ್ರವಾಹವು (Flash Flood) ತ್ರಿಶೂಲಿ ನದಿಯ ಸಂಪೂರ್ಣ ಕಾರಿಡಾರ್‌ನಲ್ಲಿ ಭಾರಿ ವಿನಾಶ ಉಂಟು ಮಾಡಿದ್ದು, ಈ ಘಟನೆಯಲ್ಲಿ 1252 ಜನರ ದುರ್ದೈವ ಸಾವನಪ್ಪಿದ್ದಾರೆ.ಇನ್ನೂ ಅನೇಕ ಜನರು ಮತ್ತು ಜಲವಿದ್ಯುತ್ ಯೋಜನೆಗಳ ಜೊತೆಗೆ ಪ್ರಮುಖ ರಸ್ತೆ ಸಂಪರ್ಕಗಳೂ ಸಹ ಹಾನಿಗೀಡಾದವು.

ಪ್ರವಾಹದ ನಂತರ 12 ಜಲವಿದ್ಯುತ್ ಯೋಜನೆಗಳಿಗೆ (Hydropower Projects) ಸೇರಿದ 900 ಕ್ಕೂ ಹೆಚ್ಚು ಉದ್ಯೋಗಿಗಳು ನಾಪತ್ತೆಯಾಗಿದ್ದು, ಅವರುಗಳಲ್ಲಿ ಸುಮಾರು 500 ಉದ್ಯೋಗಿಗಳು ಸುರಂಗಗಳಲ್ಲಿ ಸಿಲುಕಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ರಸುವಾ ಮತ್ತು ನುವಾಕೋಟ್‌ನಲ್ಲಿ ಪ್ರವಾಹದಿಂದ ಬಾಧಿತವಾಗಿರುವ ಜಲವಿದ್ಯುತ್ ಯೋಜನೆಗಳಲ್ಲಿ “ಪ್ರವಾಹಕ್ಕಿಂತ ಮುಂಚೆ ಕೆಲವು ಉದ್ಯೋಗಿಗಳು ಸಹಾಯಕ್ಕಾಗಿ ಕೂಗಿದ್ದರು. ಸುರಂಗದಿಂದ ಯಶಸ್ವಿಯಾಗಿ ಹೊರಬಂದ ಉದ್ಯೋಗಿಗಳು ಕೂಡ ತಮ್ಮ ಅನೇಕ ಸಹೋದ್ಯೋಗಿಗಳು ಒಳಗೆ ಸಿಲುಕಿಕೊಂಡಿದ್ದಾರೆ ಎಂದು ತಿಳಿಸಿದ್ದರು.

ರಕ್ಷಣಾ ಕಾರ್ಯಾಚರಣೆಯು ಹೆಚ್ಚು ಸಮಯ ತೆಗೆದುಕೊಳ್ಳುತ್ತಿರುವುದರಿಂದ ಸುರಂಗಗಳ ಒಳಗೆ ಆಮ್ಲಜನಕದ (Oxygen) ಕೋರತೆಯಾಗುವ ಬಗ್ಗೆ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಇದರಿಂದಾಗಿ ಒಳಗೆ ಸಿಲುಕಿಕೊಂಡಿರುವ ಜನರು ಬದುಕುವುದು ಸವಾಲಾಗಿದೆ. ಈ ಮಧ್ಯೆ, ಸುರಂಗದೊಳಗಿನಿಂದ ಒಂದಕ್ಕಿಂತ ಹೆಚ್ಚು ಜನರ ಧ್ವನಿ ಕೇಳಿಸುವುದು ರಕ್ಷಣಾ ತಂಡಕ್ಕೆ ಮತ್ತು ಅವರ ಕುಟುಂಬಗಳಿಗೆ ದೊಡ್ಡ ಭರವಸೆಯನ್ನುತಂದಿದೆ. ನೇಪಾಳಿ ಪೊಲೀಸರು ಮತ್ತು ಸಶಸ್ತ್ರ ಪೊಲೀಸ್ ಪಡೆಯ ತಂಡಗಳು ಈಗ ಆ ಜನರನ್ನು ತಲುಪಲು ಮತ್ತು ಅವರನ್ನು ಸುರಕ್ಷಿತವಾಗಿ ಹೊರತರಲು ಕಾರ್ಯಾಚರಣೆ ಮುಂದುವರೆಸಿದೆ.

-ಸಾರಿಕಾ ಪುಜಾರಿ