SK Home Ad
Home ಸುದ್ದಿ ಜಂತರ್ ಮಂತರ್ ಪ್ರತಿಭಟನೆ: ಸಿಜೆಪಿ (CJP) ಕಾರ್ಯಕರ್ತೆ ತಂದೆ ಮೇಲಿನ ಹಲ್ಲೆ ಪ್ರಕರಣ – ದೆಹಲಿ...

ಜಂತರ್ ಮಂತರ್ ಪ್ರತಿಭಟನೆ: ಸಿಜೆಪಿ (CJP) ಕಾರ್ಯಕರ್ತೆ ತಂದೆ ಮೇಲಿನ ಹಲ್ಲೆ ಪ್ರಕರಣ – ದೆಹಲಿ ಪೊಲೀಸ್‌ಗೆ ಗಡುವು ನೀಡಿದ ನಾಯಕರು

0
16

ಜಂತರ್ ಮಂತರ್‌ನಲ್ಲಿ ಕಾಕ್ರೋಚ್ ಜನತಾ ಪಾರ್ಟಿ (CJP) ಪ್ರತಿಭಟನೆಯ ಸಂದರ್ಭದಲ್ಲಿ ಕಾರ್ಯಕರ್ತೆ ನಿಶು ಆಜಾದ್ ಅವರ ತಂದೆ ಸಂಜಯ್ ಕುಮಾರ್ ಅವರ ಮೇಲೆ ನಡೆದ ಹಲ್ಲೆ ಪ್ರಕರಣವು ಮತ್ತೊಮ್ಮೆ ತೀರುವು ಪಡೆದುಕೊಂಡಿದೆ. ಈ ಸಂಬಂಧ ದೆಹಲಿಯಲ್ಲಿ ಮತ್ತೆ ಪ್ರತಿಭಟನೆ ಆರಂಭಗೊಂಡಿದೆ. CJP ನಾಯಕ ಸೌರವ್ ದಾಸ್ ಮತ್ತು ರಾಷ್ಟ್ರೀಯ ವಕ್ತಾರ ಅಶುತೋಷ್ ರಾಂಕಾ ಅವರು ತಮ್ಮ ಕಾರ್ಯಕರ್ತೆ ನಿಶು ಆಜಾದ್ ಹಾಗೂ ಅವರ ತಂದೆ ಸಂಜಯ್ ಅವರಿಗೆ ನ್ಯಾಯ ಒದಗಿಸುವಂತೆ ಒತ್ತಾಯಿಸಿ ನವ ದೆಹಲಿಯ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಗೆ ಆಗಮಿಸಿದರು.

CJP ವಕ್ತಾರ ಸೌರವ್ ದಾಸ್ ಈಗ ದೆಹಲಿ ಪೊಲೀಸ್‌ಗೆ ಗಡುವು ನೀಡಿದ್ದಾರೆ. ನಿಶು ಅವರ ತಂದೆಯ ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಕೊಲೆ ಯತ್ನದ ಮೊಕದ್ದಮೆ ದಾಖಲಿಸುವುದಾಗಿ ಹೆಚ್ಚುವರಿ ಎಸ್‌ಪಿ ಭರವಸೆ ನೀಡಿರುವುದಾಗಿ ಸೌರವ್ ತಿಳಿಸಿದ್ದಾರೆ. ಜೊತೆಗೆ ಎಸ್‌ಸಿ-ಎಸ್‌ಟಿ ಕಾಯ್ದೆ, ಸೆಕ್ಷನ್ 308 ಮತ್ತು ಸೆಕ್ಷನ್ 351 ಅನ್ನು ಕೂಡ ಹಾಕಲಾಗುವುದು ಎಂದಿದ್ದಾರೆ.

ಇಂದು ಸಂಜೆಯವರೆಗೆ ಈ ಬಗ್ಗೆ ಭರವಸೆ ನೀಡಲಾಗಿದೆ. ಆದರೆ ಸಂಜೆಯೊಳಗೆ ಪ್ರಕರಣ ದಾಖಲಾಗದಿದ್ದರೆ ನಾವು ಮರಳಿ ಬರಬೇಕಾಗುತ್ತದೆ. ಸಂಜೆ ಬಂದು ಇದರ ಕಾಪಿಯನ್ನು ಪಡೆದುಕೊಳ್ಳುತ್ತೇವೆ ಎಂದು ಸೌರವ್ ತಿಳಿಸಿದರು.

ಆರೋಪಿಯ ಬಂಧನದ ಕುರಿತು ಸೌರವ್ ದಾಸ್ ಮಾತನಾಡಿ, “72 ಗಂಟೆಗಳ ಒಳಗೆ ಅಂತಹ ಎಲ್ಲ ಗೂಂಡಾಗಳನ್ನು ಬಂಧಿಸಲಾಗುವುದು ಎಂದು ನಮಗೆಲ್ಲರಿಗೂ ಭರವಸೆ ನೀಡಲಾಗಿದೆ. ಇದಕ್ಕಾಗಿ ಒಂದು ತಂಡವನ್ನು ರಚಿಸಲಾಗುತ್ತಿದ್ದು, ಕ್ರಮ ಕೈಗೊಳ್ಳಲಾಗುವುದು. ಅದಕ್ಕಾಗಿಯೇ ನಾವು ಚರ್ಚೆ ನಡೆಸಲು ಬಂದಿದ್ದೆವು” ಎಂದರು.

ದೆಹಲಿ ಪೊಲೀಸ್ ನೀಡಿರುವ ಭರವಸೆಯನ್ನು ಈಡೇರಿಸಬೇಕು ಎಂದು CJP ವಕ್ತಾರರು ಒತ್ತಾಯಿಸಿದ್ದಾರೆ. ನಾವು ಗಮನಿಸುತ್ತಿದ್ದೇವೆ ಮತ್ತು ಮೊದಲ ದಿನದಿಂದಲೂ ಎಲ್ಲ ಪ್ರತಿಭಟನಾಕಾರರು ಹಾಗೂ ವಿದ್ಯಾರ್ಥಿಗಳ ಜೊತೆ ನಿಂತಿದ್ದೇವೆ. ಈ ಪ್ರಯತ್ನಗಳಿಂದಲೇ ಎಫ್‌ಐಆರ್ ದಾಖಲಾಯಿತು ಮತ್ತು ಪರಿಹಾರ ದೊರೆಯಿತು. ಈ ಪ್ರಯತ್ನಗಳಿಂದಲೇ ಮುಂದೆಯೂ ನ್ಯಾಯ ಸಿಗಲಿದೆ. ಸಂಜಯ್ ಆಜಾದ್ ಮತ್ತು ನಿಶು ಅವರಿಗೆ ಬರುತ್ತಿರುವ ಬೆದರಿಕೆಗಳ ಮೇಲೂ ಎಫ್‌ಐಆರ್ ದಾಖಲಿಸಲಾಗುವುದು. ಇದಕ್ಕೂ ಆಶ್ವಾಸನೆ ನೀಡಲಾಗಿದೆ. ಅದರ ಮೇಲೆ ಎಸ್‌ಸಿ-ಎಸ್‌ಟಿ ಕಾಯ್ದೆ ಹಾಗೂ ಸೈಬರ್ ಕ್ರೈಮ್ ಆರೋಪಗಳೂ ಕೂಡ ಹೊರಿಸಲ್ಪಡಲಿವೆ.

ಜಂತರ್ ಮಂತರ್‌ನಲ್ಲಿ ತಮ್ಮ ಶಾಂತಿಯುತ ಪ್ರತಿಭಟನೆ ನಡೆಯುತ್ತಿದ್ದಾಗ ಅಲ್ಲಿ ಹಿಂಸಾಚಾರ ನಡೆಯಿತು ಎಂದು CJP ಮುಖ್ಯ ವಕ್ತಾರ ಸೌರವ್ ದಾಸ್ ಮಾಧ್ಯಮಗಳಿಗೆ ತಿಳಿಸಿದರು. ಈ ಅಪರಾಧಿ ಗ್ಯಾಂಗ್ ದೆಹಲಿಯಲ್ಲಿ ಹಿಂದಿನಿಂದಲೂ ಹಿಂಸಾಚಾರ ನಡೆಸುತ್ತಾ ಬಂದಿದೆ ಎಂದು ಅವರು ಆರೋಪಿಸಿದರು. ಇಷ್ಟು ದಿನಗಳಿಂದ ಈ ಜನರು ದೆಹಲಿಯಲ್ಲಿ ಮುಕ್ತವಾಗಿ ತಿರುಗಾಡುತ್ತಿರುವುದು ನಮ್ಮ ತಿಳುವಳಿಕೆಗೆ ಮೀರಿದಾಗಿದೆ ಎಂದು ಅವರು ಹೇಳಿದರು.

ಜಂತರ್ ಮಂತರ್‌ನಲ್ಲಿ 2,800 ಕ್ಕೂ ಹೆಚ್ಚು ಅಪರಾಧಿಗಳನ್ನು ಗುರುತಿಸಲಾಗಿದೆ ಎಂದು ದೆಹಲಿ ಪೊಲೀಸ್ರು ಹೇಳುತ್ತಿದ್ದರೆ, ನೀವು ಆ ಜನರಿಗೆ ಯಾಕೆ ಶಿಕ್ಷೆ ನೀಡುತಿಲ್ಲ, ಆ 2,800 ಅಪರಾಧಿಗಳನ್ನು ಗುರುತಿಸಿ, ಅವರು ಯಾವುದೇ ಗಂಭೀರ ಅಪರಾಧ ಎಸಗಿದ್ದರೆ ಅವರ ವಿರುದ್ಧ ಕ್ರಮ ಕೈಗೊಂಡು ಜೈಲಿಗೆ ಹಾಕಿ ಎಂದು ನಾವು ಹೇಳಿದ್ದೇವೆ. ದೆಹಲಿಯಲ್ಲಿ ಕಾನೂನು ಸುವ್ಯವಸ್ಥೆ ಅಷ್ಟು ದುರ್ಬಲವಾಗಿದೆಯೇ? ದೆಹಲಿ ಪೊಲೀಸ್ ಇದಕ್ಕೆ ಉತ್ತರಿಸಬೇಕು ಎಂದರು.