SK Home Ad
Home ಸುದ್ದಿ Samyukta Karnataka News Live: ವಿಡಿಯೋ ಶೂಟಿಂಗ್‌ಗೆ ಗುಡ್‌ಬೈ? ಚಲನೆ ಬದಲಿಸದೇ ದೃಶ್ಯವನ್ನೇ ಬದಲಿಸುವ AI...

Samyukta Karnataka News Live: ವಿಡಿಯೋ ಶೂಟಿಂಗ್‌ಗೆ ಗುಡ್‌ಬೈ? ಚಲನೆ ಬದಲಿಸದೇ ದೃಶ್ಯವನ್ನೇ ಬದಲಿಸುವ AI ಸಾಧನ

0
179

ಪಿಂಕ್‌ ಲೈನ್‌ಗೆ ಸಜ್ಜಾದ ಬೆಂಗಳೂರು – ಕೃಷ್ಣಬೈರೇಗೌಡ, ತೇಜಸ್ವಿ ಸೂರ್ಯ ಪರಿಶೀಲನೆ: ಬೆಂಗಳೂರು ನಗರದ ಬಹುನಿರೀಕ್ಷಿತ ನಮ್ಮ ಮೆಟ್ರೋ ಪಿಂಕ್‌ ಲೈನ್‌ ಸಂಚಾರ ಆರಂಭಕ್ಕೆ ಮತ್ತಷ್ಟು ಹತ್ತಿರವಾಗಿದ್ದು, ಕಾಳೇನ ಅಗ್ರಹಾರ–ತಾವರೆಕೆರೆ ನಡುವಿನ 7.5 ಕಿ.ಮೀ. ಎಲಿವೇಟೆಡ್‌ ಮಾರ್ಗ ಉದ್ಘಾಟನೆಗೆ ಸಿದ್ಧವಾಗಿದೆ. ಸೆಪ್ಟೆಂಬರ್‌ನಲ್ಲೇ ಮಾರ್ಗವನ್ನು ಸಾರ್ವಜನಿಕರ ಸಂಚಾರಕ್ಕೆ ಮುಕ್ತಗೊಳಿಸುವ ವಿಶ್ವಾಸವನ್ನು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರ್ಕಾರ ಉದ್ಘಾಟನೆಗೆ ದಿನಾಂಕ ನಿಗದಿಪಡಿಸಿದ ತಕ್ಷಣ ಮಾರ್ಗವನ್ನು ಆರಂಭಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

18ರ ಹರೆಯದಲ್ಲೇ ವಿಶ್ವದಾಖಲೆ ಸಾಧನೆ – ವಿಶ್ವದ ಮೊದಲ ಮಹಿಳಾ ಪ್ಯಾರಾ-ಈಜುಗಾರ್ತಿಯ ಹೊಸ ಇತಿಹಾಸ : ಭಾರತದ 18 ವರ್ಷದ ಪ್ಯಾರಾ-ಈಜುಗಾರ್ತಿ ಜಿಯಾ ರೈ ಅಂತಾರಾಷ್ಟ್ರೀಯ ಈಜು ಕ್ಷೇತ್ರದಲ್ಲಿ ಐತಿಹಾಸಿಕ ಸಾಧನೆ ಮಾಡಿದ್ದಾರೆ. ನ್ಯೂಯಾರ್ಕ್‌ನ ಮ್ಯಾನ್‌ಹ್ಯಾಟನ್ ದ್ವೀಪವನ್ನು ಸುತ್ತುವರಿಯುವ 20 Bridges Swim ಅನ್ನು 8 ಗಂಟೆ 53 ನಿಮಿಷಗಳಲ್ಲಿ ಪೂರ್ಣಗೊಳಿಸುವ ಮೂಲಕ ಅವರು Open Water Swimming Triple Crown ಪೂರ್ಣಗೊಳಿಸಿದ್ದಾರೆ. ಲೈವ್ ಸ್ವಿಮ್ ಟ್ರ್ಯಾಕಿಂಗ್ ದಾಖಲೆಯಲ್ಲೂ ಜಿಯಾ ರೈ 8:53ರ ಸಮಯದೊಂದಿಗೆ ಈಜು ಪೂರ್ಣಗೊಳಿಸಿರುವುದು ದಾಖಲಾಗಿದೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ವಿಡಿಯೋ ಶೂಟಿಂಗ್‌ಗೆ ಗುಡ್‌ಬೈ? ಚಲನೆ ಬದಲಿಸದೇ ದೃಶ್ಯವನ್ನೇ ಬದಲಿಸುವ AI ಸಾಧನ : ಕೃತಕ ಬುದ್ಧಿಮತ್ತೆ (AI) ಆಧಾರಿತ ವಿಡಿಯೋ ನಿರ್ಮಾಣ ಮತ್ತು ಎಡಿಟಿಂಗ್ ಕ್ಷೇತ್ರದಲ್ಲಿ ಮತ್ತೊಂದು ಮಹತ್ವದ ಹೆಜ್ಜೆಯಾಗಿ Higgsfield ತನ್ನ ಹೊಸ Genjutsu ವಿಡಿಯೋ ಸಾಧನವನ್ನು ಪರಿಚಯಿಸಿದೆ. ಈಗಾಗಲೇ ಚಿತ್ರೀಕರಿಸಿರುವ ಅಥವಾ AI ಮೂಲಕ ಸೃಷ್ಟಿಸಿರುವ ವಿಡಿಯೋವನ್ನು ಸಂಪೂರ್ಣವಾಗಿ ಮರುಶೂಟ್ ಮಾಡದೆಯೇ ಅದರ ನಿರ್ದಿಷ್ಟ ಭಾಗಗಳನ್ನು ಬದಲಾಯಿಸುವುದು ಇದರ ಪ್ರಮುಖ ವೈಶಿಷ್ಟ್ಯವಾಗಿದೆ. ಈ ಹೊಸ AI ವಿಡಿಯೋ ಸಾಧನವಾವು ಮೂಲ ಚಲನೆ ಮತ್ತು ಕ್ಯಾಮೆರಾ ಟೈಮಿಂಗ್ ಉಳಿಸಿಕೊಂಡೇ ಪಾತ್ರ, ಉಡುಪು, ಸ್ಥಳ ಹಾಗೂ ವಸ್ತುಗಳನ್ನು ಬದಲಾಯಿಸಲು ಅವಕಾಶ ನೀಡುತ್ತದೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ರಾಮಮಂದಿರ ಆಡಳಿತಕ್ಕೆ ಹೊಸ ಸಾರಥಿ -ಜಿತೇಂದ್ರ ಮಿಶ್ರಾ CEO ಆಗಿ ನೇಮಕ : ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ರಾಮಮಂದಿರದ ಆಡಳಿತ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗೆ ಮುಂದಾಗಿದೆ. ನಿವೃತ್ತ ಏರ್ ಮಾರ್ಷಲ್ ಜಿತೇಂದ್ರ ಮಿಶ್ರಾ ಅವರನ್ನು ರಾಮಮಂದಿರ ಟ್ರಸ್ಟ್‌ನ ಮೊದಲ ಪೂರ್ಣಕಾಲಿಕ ಮುಖ್ಯ ಕಾರ್ಯನಿರ್ವಹಣಾಧಿಕಾರಿ (CEO) ಆಗಿ ನೇಮಕ ಮಾಡಲಾಗಿದೆ. ಸೆಪ್ಟೆಂಬರ್ 2ರಂದು ಅಯೋಧ್ಯೆಯಲ್ಲಿ ನಡೆದ ಟ್ರಸ್ಟ್‌ನ ಮಹತ್ವದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಭಾರತೀಯ ವಾಯುಪಡೆಯ ಹಿರಿಯ ಅಧಿಕಾರಿಯಾಗಿದ್ದ ಜಿತೇಂದ್ರ ಮಿಶ್ರಾ ಸುಮಾರು ನಾಲ್ಕು ದಶಕಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಅವರು ಫೈಟರ್ ಪೈಲಟ್, ಟೆಸ್ಟ್ ಪೈಲಟ್ ಹಾಗೂ ಹಿರಿಯ ಕಮಾಂಡರ್ ಆಗಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದರು. ಪಶ್ಚಿಮ ವಾಯು ಕಮಾಂಡ್‌ನ ಏರ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ ಆಗಿಯೂ ಸೇವೆ ಸಲ್ಲಿಸಿದ್ದರು. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ಅಯೋಧ್ಯೆ ರಾಮಮಂದಿರ ಟ್ರಸ್ಟ್‌ಗೆ 3 ಹೊಸ ಸದಸ್ಯರು – ಶೀಘ್ರದಲ್ಲೇ ಮೊದಲ CEO ನೇಮಕ : ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನಲ್ಲಿ ಮಹತ್ವದ ಆಡಳಿತಾತ್ಮಕ ಬದಲಾವಣೆಗಳು ನಡೆಯುತ್ತಿದ್ದು, ಸೆಪ್ಟೆಂಬರ್ 2ರಂದು ನಡೆದ ಮಹತ್ವದ ಸಭೆಯಲ್ಲಿ ಮೂವರು ಹೊಸ ಟ್ರಸ್ಟಿಗಳನ್ನು ನೇಮಕ ಮಾಡಲಾಗಿದೆ. ಇದೇ ಸಭೆಯಲ್ಲಿ ರಾಮಮಂದಿರ ಟ್ರಸ್ಟ್‌ನ ಮೊದಲ ಪೂರ್ಣಕಾಲಿಕ ಮುಖ್ಯ ಕಾರ್ಯನಿರ್ವಹಣಾಧಿಕಾರಿ (CEO) ನೇಮಕದ ಕುರಿತಂತೆಯೂ ಚರ್ಚೆ ನಡೆದಿದೆ. ಟ್ರಸ್ಟ್‌ಗೆ ಹೊಸದಾಗಿ ಮಹೇಶ್ ಭಾಗಚಂದ್ಕಾ, ಅಯೋಧ್ಯೆಯ ಮದನ್ ಮೋಹನ್ ಪಾಂಡೆ ಮತ್ತು ಶಿಕೋಹಾಬಾದ್‌ನ ನಿರ್ಮಲಾ ಯಾದವ್ ಅವರನ್ನು ಟ್ರಸ್ಟಿಗಳಾಗಿ ನೇಮಕ ಮಾಡಲಾಗಿದೆ. ಹೊಸ ಸದಸ್ಯರ ಸೇರ್ಪಡೆಯಿಂದ ಟ್ರಸ್ಟ್‌ನ ಆಡಳಿತಾತ್ಮಕ ವ್ಯವಸ್ಥೆ ಮತ್ತಷ್ಟು ಬಲಗೊಳ್ಳಲಿದೆ ಎಂದು ನಿರೀಕ್ಷಿಸಲಾಗಿದೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ರಾಜೀನಾಮೆ ಕೊಟ್ಟು ಚುನಾವಣೆ ಎದುರಿಸೋಣ – ಯಾರು ಗೆಲ್ಲುತ್ತಾರೆ ನೋಡೋಣ! : ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ಹಣದಿಂದಲೇ ಲೋಕಸಭಾ ಚುನಾವಣೆಯಲ್ಲಿ ಗೆದ್ದಿರುವ ತುಕಾರಾಂ ಅವರಿಗೆ ಬಿಜೆಪಿ ನಾಯಕರ ವಿರುದ್ಧ ಮಾತನಾಡುವ ನೈತಿಕತೆ ಇಲ್ಲ ಎಂದು ಮಾಜಿ ಶಾಸಕ ಸುರೇಶ್‌ಬಾಬು ವಾಗ್ದಾಳಿ ನಡೆಸಿ “ತುಕಾರಾಂ ಲೋಕಸಭಾ ಸ್ಥಾನಕ್ಕೆ ರಾಜೀನಾಮೆ ನೀಡಲಿ. ಅದೇ ವೇಳೆ ಜನಾರ್ದನ ರೆಡ್ಡಿ ಕೂಡ ರಾಜೀನಾಮೆ ನೀಡುತ್ತಾರೆ. ಇಬ್ಬರೂ ಒಟ್ಟಿಗೆ ಚುನಾವಣೆ ಎದುರಿಸೋಣ. ಯಾರು ಗೆಲ್ಲುತ್ತಾರೆ ಎಂಬುದನ್ನು ಜನರೇ ತೀರ್ಮಾನಿಸಲಿ” ಎಂದು ಸವಾಲು ಹಾಕಿದರು. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

2028ರ ಚುನಾವಣೆಯಲ್ಲಿ ಗೆದ್ದು ತೋರಿಸಿ – ನಾಗೇಂದ್ರಗೆ ಸಣ್ಣ ಫಕೀರಪ್ಪ ಸವಾಲು : ಮಾಜಿ ಸಚಿವ ಬಿ.ನಾಗೇಂದ್ರ ಅವರ ಇತ್ತೀಚಿನ ಹೇಳಿಕೆಗಳಿಗೆ ತೀವ್ರ ತಿರುಗೇಟು ನೀಡಿರುವ ಮಾಜಿ ಸಂಸದ ಸಣ್ಣ ಫಕೀರಪ್ಪ, ನಾಗೇಂದ್ರ ವಿರುದ್ಧ ವಾಗ್ದಾಳಿ ನಡೆಸಿದರು. ಸಚಿವ ಸ್ಥಾನ ಕಳೆದುಕೊಂಡ ಹತಾಶೆಯಿಂದ ನಾಗೇಂದ್ರ ಹುಚ್ಚುಹುಚ್ಚಾಗಿ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು. ನಾಗೇಂದ್ರ ಅವರ ಮಾತುಗಳಲ್ಲಿ ಯಾವುದೇ ಅರ್ಥವಿಲ್ಲ. ಬಿಜೆಪಿ ನಾಯಕರ ವಿರುದ್ಧ ವೈಯಕ್ತಿಕ ಟೀಕೆ ಮಾಡುವ ಬದಲು ತಮ್ಮ ಕ್ಷೇತ್ರದ ಜನರ ಸಮಸ್ಯೆಗಳತ್ತ ಗಮನ ಹರಿಸಲಿ “2028ರಲ್ಲಿ ಬನ್ನಿ. ಗೆದ್ದು ತೋರಿಸಿ, ಆಗ ನಿಮ್ಮ ರಾಜಕೀಯ ಶಕ್ತಿ ಎಷ್ಟಿದೆ ಎಂಬುದು ಗೊತ್ತಾಗುತ್ತದೆ” ಎಂದು ನಾಗೇಂದ್ರಗೆ ಸವಾಲು ಹಾಕಿದರು. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ಭರತ್ ರೆಡ್ಡಿ ವಿರುದ್ಧ ಜಿ. ಸೋಮಶೇಖರ್ ರೆಡ್ಡಿ ವಾಗ್ದಾಳಿ – ಕುಟುಂಬ, ಅಭಿವೃದ್ಧಿ ವಿಚಾರ ಪ್ರಸ್ತಾಪ : ಕಾಂಗ್ರೆಸ್–ಬಿಜೆಪಿ ನಾಯಕರ ನಡುವಿನ ವಾಕ್ಸಮರ ತೀವ್ರಗೊಂಡಿದ್ದು, ಶಾಸಕ ಭರತ್ ರೆಡ್ಡಿ ವಿರುದ್ಧ ಮಾಜಿ ಶಾಸಕ ಜಿ. ಸೋಮಶೇಖರ್ ರೆಡ್ಡಿ ತೀವ್ರ ವಾಗ್ದಾಳಿ ನಡೆಸಿದರು. ಬಳ್ಳಾರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಮ್ಮ ಅವಧಿಯಲ್ಲಿ ಕೈಗೊಂಡ ಅಭಿವೃದ್ಧಿ ಕಾಮಗಾರಿಗಳಿಗೆ ಭರತ್ ರೆಡ್ಡಿ ತಮ್ಮ ತಾಯಿಯ ಹೆಸರು ಇಡುತ್ತಿದ್ದಾರೆ. ಸರ್ಕಾರದ ಕೆಲಸಗಳಿಗೂ ‘ಸುವರ್ಣ ಬಳ್ಳಾರಿ’ ಎಂದು ತಾಯಿಯ ಹೆಸರು ಬಳಸುತ್ತಿದ್ದಾರೆ’ ಎಂದು ಟೀಕಿಸಿದರು. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ದೇಶಕ್ಕೆ ಚಿನ್ನ ತಂದ ಆಟಗಾರನಿಗೆ ಕೊನೆಗೂ ಸರ್ಕಾರದ ಗಮನ – ಉದ್ಯೋಗದ ನಿರೀಕ್ಷೆಯಲ್ಲಿ ಅಮರ್‌ದೀಪ್ : ದೇಶಕ್ಕಾಗಿ ನಾಲ್ಕು ಅಂತಾರಾಷ್ಟ್ರೀಯ ಚಿನ್ನದ ಪದಕಗಳನ್ನು ಗೆದ್ದ ಜಾರ್ಖಂಡ್‌ನ 29 ವರ್ಷದ ಥ್ರೋಬಾಲ್ ಆಟಗಾರ ಅಮರ್‌ದೀಪ್ ಕುಮಾರ್ ಅವರ ಸಂಕಷ್ಟದ ಜೀವನದ ಸುದ್ದಿ ಇದೀಗ ದೇಶದ ಗಮನ ಸೆಳೆದಿದೆ. ಕ್ರೀಡಾ ಸಾಧನೆಗಳ ಹೊರತಾಗಿಯೂ ಸರ್ಕಾರಿ ಉದ್ಯೋಗ ದೊರೆಯದೆ, ಕುಟುಂಬ ನಿರ್ವಹಣೆಗಾಗಿ ಅವರು ರಾಂಚಿಯ ಅರ್ಗೋರಾ ಚೌಕ್‌ನಲ್ಲಿ ತರಕಾರಿ ಮಾರಾಟ ಮಾಡುವುದರ ಜೊತೆಗೆ ಕ್ಯಾಬ್ ಕೂಡ ಓಡಿಸುತ್ತಿದ್ದಾರೆ. ಈ ಪ್ರಕರಣಕ್ಕೆ ಸಿಎಂ ಹೇಮಂತ್ ಸೊರೆನ್ ಸ್ಪಂದಿಸಿದ್ದು, ಕ್ರೀಡಾ ಇಲಾಖೆಗೆ ಕ್ರಮದ ಸೂಚನೆ ನೀಡಿದ್ದಾರೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

‘ವಿಧಾನಸಭೆ ವಿಸರ್ಜಿಸಿ ಚುನಾವಣೆ ಎದುರಿಸಿ’ – ಸಿಎಂ ಡಿಕೆಶಿಗೆ ವಿಜಯೇಂದ್ರ ಸವಾಲು : ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮ ಪ್ರಕರಣ ಸೇರಿದಂತೆ ದಲಿತರು ಮತ್ತು ಹಿಂದುಳಿದ ವರ್ಗಗಳಿಗೆ ಆಗಿರುವ ಅನ್ಯಾಯವನ್ನು ಖಂಡಿಸಿ ಬಿಜೆಪಿ ನಡೆಸುತ್ತಿರುವ ‘ಬಳ್ಳಾರಿ ಚಲೋ’ ಪಾದಯಾತ್ರೆ ಮುಂದುವರಿದಿದೆ. ರಾಯಚೂರು ಜಿಲ್ಲೆಯ ಲಿಂಗಸೂಗೂರಿನಿಂದ ಬಳ್ಳಾರಿಯತ್ತ ಸಾಗುತ್ತಿರುವ ಪಾದಯಾತ್ರೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ವಿಧಾನಸಭೆ ವಿಸರ್ಜಿಸಿ ಸಾರ್ವತ್ರಿಕ ಚುನಾವಣೆ ಎದುರಿಸುವಂತೆ ಸವಾಲು ಹಾಕಿದ್ದಾರೆ. ಪಾದಯಾತ್ರೆಯಲ್ಲಿ ಮಾತನಾಡಿದ ವಿಜಯೇಂದ್ರ, ಹೋರಾಟದ ಮೊದಲ ದಿನವೇ ಸರ್ಕಾರಕ್ಕೆ ಪ್ರತಿಭಟನೆಯ ಬಿಸಿ ತಟ್ಟಿದೆ ಎಂದು ಹೇಳಿದರು. ಬಿಜೆಪಿ ಹೋರಾಟದಿಂದಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಎಸಿ ಕೊಠಡಿಗಳನ್ನು ಬಿಟ್ಟು ಬರ ಪರಿಸ್ಥಿತಿ ಪರಿಶೀಲನೆಗೆ ಕ್ಷೇತ್ರ ಪ್ರವಾಸ ಕೈಗೊಂಡಿದ್ದಾರೆ ಎಂದು ಟೀಕಿಸಿದರು. ವಾಲ್ಮೀಕಿ ನಿಗಮದ ಅಕ್ರಮ ಪ್ರಕರಣದಲ್ಲಿ ನಾಗೇಂದ್ರ ಅವರ ರಾಜೀನಾಮೆ ಪಡೆಯುವ ಮೂಲಕ ಸರ್ಕಾರದ ಬುಡಕ್ಕೆ ಬಿಸಿ ತಟ್ಟಿದೆ ಎಂದು ಹೇಳಿದ ಅವರು, ಇದನ್ನು ತಮ್ಮ ಹೋರಾಟದ ಎರಡನೇ ಜಯ ಎಂದು ಬಣ್ಣಿಸಿದರು. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ಬಾಯಿ ಮಾತಿನ ಪ್ರಚಾರಕ್ಕೆ ಭರ್ಜರಿ ಗೆಲುವು – ₹2 ಕೋಟಿ ಚಿತ್ರಕ್ಕೆ ₹50 ಕೋಟಿಗೂ ಹೆಚ್ಚು ಕಲೆಕ್ಷನ್ : ಕೇವಲ ₹2 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾದ ಆಧ್ಯಾತ್ಮಿಕ ಗುರು ನೀಮ್ ಕರೋಲಿ ಬಾಬಾ ಅವರ ಜೀವನ ಆಧಾರಿತ ʼಹನುಮಾನ್ ಅಂಶʼ ಸಿನಿಮಾ ನಾಲ್ಕನೇ ವಾರಕ್ಕೆ ಭಾರತದಲ್ಲಿ ₹50 ಕೋಟಿ ನಿವ್ವಳ ಕಲೆಕ್ಷನ್ ದಾಟಿದೆ. ₹100 ಕೋಟಿ ಗಳಿಕೆಯ ನಿರೀಕ್ಷೆ ಮೂಡಿಸಿದೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Vi ಲೋಗೋದಲ್ಲಿ ಮಹತ್ವದ ಬದಲಾವಣೆ – ಶಾರುಖ್ ಖಾನ್ ಜೊತೆ Vi ಹೊಸ ಅಭಿಯಾನ : ಟೆಲಿಕಾಂ ಕ್ಷೇತ್ರದ ಪ್ರಮುಖ ಸಂಸ್ಥೆ ವೊಡಾಫೋನ್ ಐಡಿಯಾ (Vi) ತನ್ನ ಬ್ರ್ಯಾಂಡ್ ಗುರುತಿನಲ್ಲಿ ಮಹತ್ವದ ಬದಲಾವಣೆ ಮಾಡಿದ್ದು, ಹೊಸ ಅಭಿಯಾನದ ಮುಖವಾಗಿ ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಅವರನ್ನು ಆಯ್ಕೆ ಮಾಡಿಕೊಂಡಿದೆ. ಇದು ಕೇವಲ ಲೋಗೋ ಬದಲಾವಣೆಯಲ್ಲ, ಗ್ರಾಹಕರಿಗೆ ಇನ್ನಷ್ಟು ಉತ್ತಮ ಅನುಭವ ಹಾಗೂ ಹೆಚ್ಚಿನ ಸಾಧ್ಯತೆಗಳನ್ನು ಒದಗಿಸುವ ಉದ್ದೇಶದೊಂದಿಗೆ ಸಂಸ್ಥೆಯ ಬ್ರ್ಯಾಂಡ್‌ನಲ್ಲಿ ನಡೆಯುತ್ತಿರುವ ವಿಕಾಸದ ಮೊದಲ ಹೆಜ್ಜೆಯಾಗಿದೆ ಎಂದು Vi CEO ಅಭಿಜಿತ್ ಕಿಶೋರ್ ಹೇಳಿದ್ದಾರೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ಕಾಡಿನಿಂದ ನಾಡಿಗೆ ಚಿರತೆಗಳ ಹೆಜ್ಜೆ : ದಾಂಡೇಲಿ ಸುತ್ತಮುತ್ತಲಿನ ಕಾಡಂಚಿನ ಗ್ರಾಮ ಹಾಗೂ ನಗರ ಪ್ರದೇಶಗಳಲ್ಲಿ ರಾತ್ರಿವೇಳೆ ಚಿರತೆಗಳ ಓಡಾಟ ಸಾಮಾನ್ಯವಾಗಿದ್ದು, ಇದುವರೆಗೆ ಮನುಷ್ಯರ ಮೇಲೆ ದಾಳಿ ನಡೆಸಿದ ವರದಿಗಳಿಲ್ಲ. ಸುಲಭ ಬೇಟೆಗಾಗಿ ಚಿರತೆಗಳು ಕಾಡಂಚಿನ ಪ್ರದೇಶಗಳಿಗೆ ಬಂದು ನಾಯಿಗಳನ್ನು ಬೇಟೆಯಾಡಿ ಕಾಡಿನತ್ತ ಮರಳುತ್ತಿವೆ ಎನ್ನಲಾಗಿದೆ. ಹೀಗಾಗಿ ಚಿರತೆಗಳ ಓಡಾಟವನ್ನು ತಡೆಯುವುದಕ್ಕಿಂತ ಮಾನವ–ವನ್ಯಜೀವಿ ಸಂಘರ್ಷಕ್ಕೆ ಅವಕಾಶವಾಗದಂತೆ ಮುನ್ನೆಚ್ಚರಿಕೆ ವಹಿಸುವುದು ಅಗತ್ಯವಾಗಿದೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ಇಂದಿನಿಂದ ಜಾಗತಿಕ ಮಾರುಕಟ್ಟೆಗೆ JioHotstar ಎಂಟ್ರಿ : JioHotstar ಸೆಪ್ಟೆಂಬರ್ 2ರಿಂದ UK, ಕೆನಡಾ ಮತ್ತು ಸಿಂಗಾಪುರದಲ್ಲಿ Hotstar ಆ್ಯಪ್‌ ಬದಲಿಗೆ ಸೇವೆ ಆರಂಭಿಸಿದೆ. 1.6 ಲಕ್ಷ ಗಂಟೆಗಳ ಕಂಟೆಂಟ್, Bigg Boss 24/7 ಲೈವ್ ಸ್ಟ್ರೀಮ್ ಸೇರಿದಂತೆ ಹಲವು ಸೌಲಭ್ಯಗಳು ಲಭ್ಯ. ಜನಪ್ರಿಯ ‘ಬಿಗ್ ಬಾಸ್’ ಕಾರ್ಯಕ್ರಮದ 24/7 ಲೈವ್ ಸ್ಟ್ರೀಮ್ ಕೂಡ ಪ್ರಮುಖ ಆಕರ್ಷಣೆಯಾಗಲಿದೆ. ವೀಕ್ಷಕರು ಕಾರ್ಯಕ್ರಮದ ಸಂದರ್ಭದಲ್ಲಿ ಲೈವ್ ಮತದಾನದಲ್ಲೂ ಭಾಗವಹಿಸುವ ಅವಕಾಶವನ್ನು ಪಡೆಯಲಿದ್ದಾರೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ಸುದೀಪ್ ಬರ್ತ್‌ಡೇಗೆ ಭರ್ಜರಿ ಗಿಫ್ಟ್ – ‘ಬಿಲ್ಲ ರಂಗ ಬಾಷಾ’ ಫಸ್ಟ್ ಲುಕ್ ವೈರಲ್ : ಕನ್ನಡದ ಬಹುಮುಖ ಪ್ರತಿಭೆಯ ನಟ ಕಿಚ್ಚ ಸುದೀಪ್ ಇಂದು 53ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ವಿಶೇಷ ದಿನದಂದು ಅವರ ಬಹುನಿರೀಕ್ಷಿತ ಸಿನಿಮಾ ‘ಬಿಲ್ಲ ರಂಗ ಬಾಷಾ’ ಚಿತ್ರದ ಭರ್ಜರಿ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದೆ. ಕಾರಣಾಂತರಗಳಿಂದ ವಿಳಂಬವಾಗಿದ್ದ ಈ ಬಿಗ್ ಬಜೆಟ್ ಆಕ್ಷನ್ ಎಂಟರ್‌ಟೈನರ್ ಸಿನಿಮಾದ ಚಿತ್ರೀಕರಣ ಜೂನ್‌ನಲ್ಲಿ ಮತ್ತೆ ಆರಂಭವಾಗಿತ್ತು. ಇದೀಗ ಬಿಡುಗಡೆಯಾಗಿರುವ ಫಸ್ಟ್ ಲುಕ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳಲ್ಲಿ ಸಿನಿಮಾದ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಿಸಿದೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರತಿ ಹೊಸ ಅಪ್‌ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿರಿ 👉 ಇಂದಿನ ಪ್ರಮುಖ ಲೈವ್ ಅಪ್‌ಡೇಟ್‌ಗಳನ್ನು ‘ಸಂಯುಕ್ತ ಕರ್ನಾಟಕ’ ಜಾಲತಾಣದಲ್ಲಿ ನಿರಂತರವಾಗಿ ಓದಿರಿ.