ಬರದ ಭೀತಿ ನಡುವೆ ರಾಜ್ಯದಲ್ಲಿ ‘ಆಪರೇಷನ್ ಮಳೆ’: ರಾಜ್ಯದಲ್ಲಿ ಮಳೆ ಕೊರತೆ ಹಾಗೂ ಮುಂದಿನ ದಿನಗಳಲ್ಲಿ ಎದುರಾಗಬಹುದಾದ ಜಲಕ್ಷಾಮದ ಆತಂಕದ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಮೋಡ ಬಿತ್ತನೆ (Cloud Seeding) ಯೋಜನೆಗೆ ಶುಕ್ರವಾರ ಅಧಿಕೃತ ಚಾಲನೆ ನೀಡಲಾಗಿದೆ. ಬೆಂಗಳೂರಿನ ಎಚ್ಎಎಲ್ ವಿಮಾನ ನಿಲ್ದಾಣದಲ್ಲಿ ಜಲಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ ಅವರು ವಿಶೇಷವಾಗಿ ಸಿದ್ಧಪಡಿಸಲಾದ ಲಘು ವಿಮಾನಕ್ಕೆ ರಾಷ್ಟ್ರಧ್ವಜ ಹಾಗೂ ನಾಡಧ್ವಜ ತೋರಿಸುವ ಮೂಲಕ ಕಾರ್ಯಾಚರಣೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾಜಿ ಸಚಿವ ಎಚ್.ಕೆ. ಪಾಟೀಲ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
ಅಣ್ಣ ಫ್ರಮ್ ಮೆಕ್ಸಿಕೋ’ ಪುಟ್ಟಮಲ್ಲಿ ಹಾಡಿನ ಹವಾ : ಡಾಲಿ ಧನಂಜಯ್ ಅಭಿನಯದ ಬಹುನಿರೀಕ್ಷಿತ‘ಅಣ್ಣ ಫ್ರಮ್ ಮೆಕ್ಸಿಕೋ’ ಸಿನಿಮಾದ ಹೊಸ ಹಾಡು‘ಪುಟ್ಟಮಲ್ಲಿ’ ಬಿಡುಗಡೆಯಾಗಿದ್ದು, ಸ್ಯಾಂಡಲ್ವುಡ್ನಲ್ಲಿ ಸದ್ಯ ಗಮನ ಸೆಳೆಯುತ್ತಿರುವ ಹಾಡುಗಳಲ್ಲಿ ಒಂದಾಗಿದೆ. ‘ಪುಟ್ಟಮಲ್ಲಿ’ ಹಾಡಿನಲ್ಲಿ ಡಾಲಿ ಧನಂಜಯ್ ಅವರ ವಿಭಿನ್ನ ಲುಕ್, ಎನರ್ಜಿಟಿಕ್ ಮ್ಯಾನರಿಸಂ ಮತ್ತು ನಾಯಕಿ ರೇಷ್ಮಾ ನಾಣಯ್ಯ ಅವರೊಂದಿಗೆ ಕಾಣಿಸಿಕೊಳ್ಳುವ ದೃಶ್ಯಗಳು ಗಮನ ಸೆಳೆಯುತ್ತವೆ. ಹಾಡಿನ ಜಾನಪದ ಸೊಗಡಿಗೆ ಆಧುನಿಕ ಪಾಪ್ ಸ್ಪರ್ಶ ನೀಡಿರುವ ಸಂಗೀತವು ಹಾಡಿಗೆ ವಿಭಿನ್ನ ಮೆರುಗು ನೀಡಿದೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
ಜನ್ಮಾಷ್ಟಮಿಯಂದು ಗೋಪೂಜೆ – ಸಿಂಧನೂರಿನಿಂದ ಮುಂದುವರಿದ ‘ಬಳ್ಳಾರಿ ಚಲೋ’ : ಕಾಂಗ್ರೆಸ್ ಸರ್ಕಾರದ ವಿರುದ್ಧ ವಿವಿಧ ಆರೋಪಗಳನ್ನು ಮುಂದಿಟ್ಟು ಕರ್ನಾಟಕ ಬಿಜೆಪಿ ಹಮ್ಮಿಕೊಂಡಿರುವ ‘ಬಳ್ಳಾರಿ ಚಲೋ’ ಪಾದಯಾತ್ರೆ ಶುಕ್ರವಾರ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ನಡೆಯುತ್ತಿರುವ ಪಾದಯಾತ್ರೆ ಇಂದು ರಾಯಚೂರು ಜಿಲ್ಲೆಯ ಸಿಂಧನೂರಿನಿಂದ ಕೊಪ್ಪಳ ಜಿಲ್ಲೆಯ ಕಾರಟಗಿ ಕಡೆಗೆ ಮುಂದುವರಿಯಿತು. ಇಂದಿನ ಹಂತದಲ್ಲಿ ಸುಮಾರು 22ರಿಂದ 26 ಕಿ.ಮೀ. ಪಾದಯಾತ್ರೆ ನಡೆಯಲಿದೆ ಎಂದು ವರದಿಯಾಗಿದೆ. ಶ್ರೀಕೃಷ್ಣ ಜನ್ಮಾಷ್ಟಮಿಯ ಹಿನ್ನೆಲೆಯಲ್ಲಿ ಪಾದಯಾತ್ರೆ ಆರಂಭಕ್ಕೂ ಮುನ್ನ ಗೋಪೂಜೆ ನೆರವೇರಿಸಲಾಯಿತು. ಅಧರ್ಮವನ್ನು ಅಳಿಸಿ ಧರ್ಮವನ್ನು ಸ್ಥಾಪಿಸಲು ಯುಗಯುಗದಲ್ಲಿ ಅವತರಿಸುವ ಶ್ರೀಕೃಷ್ಣನನ್ನು ಸ್ಮರಿಸಿ, ಗೋಪಾಲಕನಾದ ಶ್ರೀಕೃಷ್ಣನ ಪ್ರೀತ್ಯರ್ಥವಾಗಿ ಗೋಪೂಜೆ ನಡೆಸಲಾಯಿತು. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
OpenAI GPT-6 Astra ಬಿಡುಗಡೆ – ಸಂಶೋಧನೆ, ಕೋಡಿಂಗ್ನಿಂದ ಫಾರ್ಮ್ ಭರ್ತಿವರೆಗೆ ಹೊಸ ಸಾಮರ್ಥ್ಯ : ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಮಹತ್ವದ ಬೆಳವಣಿಗೆಯಾಗಿ OpenAI ತನ್ನ ಹೊಸ ತಲೆಮಾರಿನ GPT-6 Astra ಮಾದರಿಯನ್ನು ಬಿಡುಗಡೆ ಮಾಡಿದೆ. ಇತ್ತಿಚೆಗೆ ಪರಿಚಯಿಸಲಾದ ಈ ಮಾದರಿ ಕಂಪ್ಯೂಟರ್ ಬಳಕೆ, ವೆಬ್ ಬ್ರೌಸಿಂಗ್, ಸಾಫ್ಟ್ವೇರ್ ಎಂಜಿನಿಯರಿಂಗ್, ವಿಜ್ಞಾನ, ಸೈಬರ್ಸುರಕ್ಷತೆ ಹಾಗೂ ವೃತ್ತಿಪರ ಕೆಲಸಗಳಲ್ಲಿ ಹೆಚ್ಚಿನ ಸಾಮರ್ಥ್ಯ ಹೊಂದಿದೆ ಎಂದು OpenAI ತಿಳಿಸಿದೆ. GPT-6 Astraಯ ಪ್ರಮುಖ ವಿಶೇಷತೆಯೆಂದರೆ ಇದು ಕೇವಲ ಪ್ರಶ್ನೆಗಳಿಗೆ ಉತ್ತರ ನೀಡುವ AI ಆಗಿರದೆ, ಹಲವು ಹಂತಗಳ ಕೆಲಸವನ್ನು ಸ್ವತಃ ನಿರ್ವಹಿಸುವ ಸಾಮರ್ಥ್ಯ ಹೊಂದಿದೆ. ದಾಖಲೆಗಳು, ಸ್ಪ್ರೆಡ್ಶೀಟ್ಗಳು ಮತ್ತು ಪ್ರೆಸೆಂಟೇಶನ್ಗಳನ್ನು ಸಿದ್ಧಪಡಿಸುವುದು, ವೆಬ್ನಲ್ಲಿ ಸಂಶೋಧನೆ ನಡೆಸುವುದು, ಸಾಫ್ಟ್ವೇರ್ ಸ್ಥಾಪಿಸಿ ಪರೀಕ್ಷಿಸುವುದು ಹಾಗೂ ಕಂಪ್ಯೂಟರ್ನಲ್ಲಿ ಕಾಣುವ ಸಮಸ್ಯೆಗಳನ್ನು ಗುರುತಿಸಿ ಪರಿಹರಿಸುವಂತಹ ಕೆಲಸಗಳನ್ನು ನಿರ್ವಹಿಸಲು ಇದನ್ನು ವಿನ್ಯಾಸಗೊಳಿಸಲಾಗಿದೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
‘ಸಿಟಿಲೈಟ್ಸ್’ನಲ್ಲಿ ಆಧ್ಯಾತ್ಮಿಕ ಜಾನಪದದ ಸೊಗಡು : ವಿನಯ್ ರಾಜ್ಕುಮಾರ್ ಹಾಗೂ ಮೋನಿಷಾ ವಿಜಯ್ಕುಮಾರ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಬಹುನಿರೀಕ್ಷಿತ ಕನ್ನಡ ಸಿನಿಮಾ ‘ಸಿಟಿಲೈಟ್ಸ್’ ಚಿತ್ರದ ಹೊಸ ಲಿರಿಕಲ್ ವಿಡಿಯೋ ಸಾಂಗ್ ‘ಅಲಕ್ ನಿರಂಜನ್’ ಬಿಡುಗಡೆಯಾಗಿದೆ. ಆಧ್ಯಾತ್ಮಿಕ ಜಾನಪದ ಸೊಗಡು ಹಾಗೂ ಆಧುನಿಕ ರ್ಯಾಪ್ ಶೈಲಿಯ ವಿಭಿನ್ನ ಸಂಯೋಜನೆಯಿಂದ ಮೂಡಿಬಂದಿರುವ ಈ ಹಾಡು ಇದೀಗ ಸಿನಿಪ್ರೇಮಿಗಳ ಗಮನ ಸೆಳೆಯುತ್ತಿದೆ. ದುನಿಯಾ ವಿಜಯ್ ನಿರ್ದೇಶನದ ‘ಸಿಟಿಲೈಟ್ಸ್’ ಚಿತ್ರಕ್ಕೆ ಸಂಗೀತ ನಿರ್ದೇಶಕ ಚರಣ್ ರಾಜ್ ಎಂ.ಆರ್. ಸಂಗೀತ ಸಂಯೋಜನೆ ಮತ್ತು ಅರೇಂಜ್ಮೆಂಟ್ ಮಾಡಿದ್ದಾರೆ. ‘ಅಲಕ್ ನಿರಂಜನ್’ ಹಾಡಿನಲ್ಲಿ ಮಾಲವಳ್ಳಿ ಎಂ. ಮಹದೇವಸ್ವಾಮಿ, ವಿಜಯಕುಮಾರ್ ಅವರ ಧ್ವನಿಯೊಂದಿಗೆ ಪಾಷಾ ಭಾಯ್ ಅವರ ರ್ಯಾಪ್ ಹಾಗೂ ಕೀರ್ತನ್ ಹೊಳ್ಳ ಅವರ ಶಾಸ್ತ್ರೀಯ ಗಾಯನವನ್ನು ಬಳಸಿಕೊಳ್ಳಲಾಗಿದೆ. ಸಾಂಪ್ರದಾಯಿಕ ಜಾನಪದ ಗೀತೆಯಿಂದ ಸಾಹಿತ್ಯವನ್ನು ಅಳವಡಿಸಿಕೊಳ್ಳಲಾಗಿದ್ದು, ರ್ಯಾಪ್ ಭಾಗದ ಸಾಹಿತ್ಯವನ್ನು ಪಾಷಾ ಭಾಯ್ ಬರೆದಿದ್ದಾರೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
‘ಬಿಜೆಪಿಯವರು ಅಭಿವೃದ್ಧಿ ವಿರೋಧಿಗಳು’—ಪಾರ್ಕ್ ಮಸೂದೆ ವಿವಾದದಲ್ಲಿ ಡಿಕೆಶಿ ತಿರುಗೇಟು: ವಿವಾದಕ್ಕೆ ಕಾರಣವಾಗಿದ್ದ ‘ಕರ್ನಾಟಕ ಸರ್ಕಾರಿ ಉದ್ಯಾನವನಗಳ ಸಂರಕ್ಷಣೆ (ತಿದ್ದುಪಡಿ) ಮಸೂದೆ-2026’ ಅನ್ನು ಸಚಿವ ಸಂಪುಟ ವಾಪಸ್ ಪಡೆದ ಬೆನ್ನಲ್ಲೇ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯಿಸಿದ್ದು, ಲಾಲ್ಬಾಗ್ನ ಸೌಂದರ್ಯಕ್ಕೆ ಯಾವುದೇ ರೀತಿಯ ಧಕ್ಕೆ ತರುವ ಉದ್ದೇಶ ಸರ್ಕಾರಕ್ಕಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇಂದು ಬಾಗಲಕೋಟೆ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಯ ಬರಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆಯನ್ನು ನಡೆಸಿದ ಅವರು. ಬರಪೀಡಿತ ಪ್ರದೇಶಗಳ ವಾಸ್ತವ ಸ್ಥಿತಿಗತಿಗಳನ್ನು ಅವಲೋಕಿಸಿ, ರೈತರು ಹಾಗೂ ಸಾರ್ವಜನಿಕರು ಎದುರಿಸುತ್ತಿರುವ ಸಂಕಷ್ಟಗಳಿಗೆ ಸ್ಪಂದಿಸಲು ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
ಸೋನಿಯಾ ಗಾಂಧಿ ಆತ್ಮಚರಿತ್ರೆ ಭಾರತದಲ್ಲಿ ಪ್ರಕಟಿಸಲು HarperCollins ಸಜ್ಜು : ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಬಹುನಿರೀಕ್ಷಿತ ಆತ್ಮಚರಿತ್ರೆ ‘Belonging: A Journey of Love’ ಇದೀಗ ಭಾರತದಲ್ಲಿ HarperCollins India ಮೂಲಕ ಪ್ರಕಟವಾಗಲಿದೆ. ಸೆಪ್ಟೆಂಬರ್ 4ರಂದು ಪ್ರಕಾಶನ ಸಂಸ್ಥೆ ಅಧಿಕೃತವಾಗಿ ಈ ಘೋಷಣೆ ಮಾಡಿದ್ದು, ಪುಸ್ತಕವು 2026ರ ನವೆಂಬರ್ 10ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
ಇಟಲಿಯಲ್ಲಿ ಮೆಲೋನಿ ಹೊಸ ದಾಖಲೆ – ಮೋದಿ ಅಭಿನಂದನೆ : ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರು ದೇಶದ ಯುದ್ಧೋತ್ತರ ಇತಿಹಾಸದಲ್ಲಿ ಅತಿ ದೀರ್ಘ ಕಾಲ ನಿರಂತರವಾಗಿ ಪ್ರಧಾನಿಯಾಗಿ ಸೇವೆ ಸಲ್ಲಿಸಿದ ನಾಯಕಿ ಎಂಬ ಐತಿಹಾಸಿಕ ದಾಖಲೆ ನಿರ್ಮಿಸಿದ್ದಾರೆ. ಈ ಮಹತ್ವದ ಮೈಲಿಗಲ್ಲಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಅಭಿನಂದನೆ ಸಲ್ಲಿಸಿದ್ದಾರೆ. ಮೆಲೋನಿ ಅವರು 2022ರ ಅಕ್ಟೋಬರ್ 22ರಂದು ಇಟಲಿಯ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಮೆಲೋನಿ ಅವರ ಸರ್ಕಾರವು 1,413 ದಿನಗಳ ಕಾಲ ನಿರಂತರವಾಗಿ ಅಧಿಕಾರದಲ್ಲಿದ್ದು, ಈ ಮೂಲಕ ಈ ಹಿಂದೆ ಸಿಲ್ವಿಯೊ ಬೆರ್ಲುಸ್ಕೋನಿ ಅವರ ಸರ್ಕಾರ ಹೊಂದಿದ್ದ 1,412 ದಿನಗಳ ದಾಖಲೆಯನ್ನು ಹಿಂದಿಕ್ಕಿದೆ. ರಾಜಕೀಯವಾಗಿ ಆಗಾಗ್ಗೆ ಸರ್ಕಾರ ಬದಲಾವಣೆಗಳನ್ನು ಕಂಡಿರುವ ಇಟಲಿಯಲ್ಲಿ ಈ ಸಾಧನೆ ವಿಶೇಷ ಮಹತ್ವ ಪಡೆದಿದೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
ಸಿಎಂ ಸಾಗುವ ರಸ್ತೆಗೆ ಮಾತ್ರ ತೇಪೆ -ಬಾಗಲಕೋಟೆಯಲ್ಲಿ ವ್ಯವಸ್ಥೆಯ ವಿರುದ್ಧ ಟೀಕೆ : ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬರ ಪರಿಸ್ಥಿತಿ ವೀಕ್ಷಣೆಗೆ ಬಾಗಲಕೋಟೆ ಜಿಲ್ಲೆಗೆ ಶುಕ್ರವಾರ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ, ಅವರು ಸಂಚರಿಸುವ ಮಾರ್ಗದಲ್ಲಿನ ರಸ್ತೆ ಗುಂಡಿಗಳನ್ನು ತರಾತುರಿಯಲ್ಲಿ ಮುಚ್ಚಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಸಿಎಂ ಸಂಚರಿಸುವ ಮಾರ್ಗದ ಒಂದು ಬದಿಯ ರಸ್ತೆ ಗುಂಡಿಗಳಿಗೆ ಮಾತ್ರ ತೇಪೆ ಹಾಕಲಾಗುತ್ತಿದ್ದು, ಇನ್ನೊಂದು ಬದಿಯ ಗುಂಡಿಗಳನ್ನು ಹಾಗೆಯೇ ಬಿಡಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ. ಸಿಎಂ ಭೇಟಿ ಹಿನ್ನೆಲೆಯಲ್ಲಿ ಕೆಲವೇ ಗಂಟೆಗಳ ಮುನ್ನ ದುರಸ್ತಿ ಕಾರ್ಯ ನಡೆಯುತ್ತಿರುವುದು ಸಾರ್ವಜನಿಕರ ಚರ್ಚೆಗೆ ಕಾರಣವಾಗಿದೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Gmailನಲ್ಲೇ ಮಾಹಿತಿ ಹುಡುಕಬೇಕಾ? Geminiಗೆ ಹೇಳಿದರೆ ಸಾಕು! : Google ತನ್ನ Gemini AIಗೆ ಮತ್ತೊಂದು ಪ್ರಮುಖ ಧ್ವನಿ ಆಧಾರಿತ ಸಾಮರ್ಥ್ಯವನ್ನು ಪರಿಚಯಿಸಿದ್ದು, ಇದೀಗ ಬಳಕೆದಾರರು Gmail, Google Docs ಮತ್ತು Google Keepನಲ್ಲಿ ಹಲವು ಕೆಲಸಗಳನ್ನು ಕೇವಲ ಮಾತನಾಡುವ ಮೂಲಕವೇ ನಿರ್ವಹಿಸಬಹುದಾಗಿದೆ. Google Workspaceನಲ್ಲಿ Gemini 3.5 Live ಇಂಟಿಗ್ರೇಷನ್ ಆಧಾರಿತ ಈ ಹೊಸ Voice ಫೀಚರ್ಗಳು ಸೆಪ್ಟೆಂಬರ್ 3ರಿಂದ ಆಯ್ದ Google AI ಚಂದಾದಾರರು ಹಾಗೂ ಕೆಲವು Workspace ಗ್ರಾಹಕರಿಗೆ ಹಂತ ಹಂತವಾಗಿ ಬಿಡುಗಡೆಯಾಗುತ್ತಿವೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
ವಿಶ್ವವಿಖ್ಯಾತ ಮೈಸೂರು ದಸರಾ 2026ರ ಜಂಬೂಸವಾರಿಯಲ್ಲಿ ಹಲವು ವರ್ಷಗಳ ಕಾಲ ಚಿನ್ನದ ಅಂಬಾರಿಯನ್ನು ಹೊತ್ತು ನಾಡಿನ ಜನರ ಮನಗೆದ್ದ ಗಜರಾಜ ಅಭಿಮನ್ಯುವಿಗೆ ವಿಶೇಷ ಗೌರವ ದೊರೆಯಲಿದೆ. 2026ರ ಜಂಬೂಸವಾರಿಯಲ್ಲಿ ‘ನಿಶಾನೆ ಆನೆ’ಯಾಗಿ ಮುನ್ನಡೆಯುವ ಮೂಲಕ ದಸರಾ ಇತಿಹಾಸದಲ್ಲಿ ತನ್ನದೇ ಆದ ವಿಶೇಷ ಸ್ಥಾನವನ್ನು ಮತ್ತೊಮ್ಮೆ ಪಡೆಯಲಿದ್ದಾನೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
ಭಾರತೀಯ ಚಿತ್ರರಂಗದಲ್ಲೇ ಅಪರೂಪದ ಪ್ರಯತ್ನ – ‘ಜಾಕಿ 42’ಗೆ ಸೆನ್ಸಾರ್ ಅನುಮತಿ : ಕಿರಣ್ ರಾಜ್ ನಾಯಕನಾಗಿ ನಟಿಸಿರುವ ಬಹುನಿರೀಕ್ಷಿತ ಕನ್ನಡ ಸಿನಿಮಾ ‘ಜಾಕಿ 42’ ಇದೀಗ ಬಿಡುಗಡೆಗೆ ಮತ್ತಷ್ಟು ಹತ್ತಿರವಾಗಿದೆ. ಗುರುತೇಜ್ ಶೆಟ್ಟಿ ನಿರ್ದೇಶನದ ಈ ಚಿತ್ರಕ್ಕೆ ಸೆನ್ಸಾರ್ ಮಂಡಳಿ U/A ಪ್ರಮಾಣಪತ್ರ ನೀಡಿದ್ದು, ಚಿತ್ರದ ಬಿಡುಗಡೆಗೆ ಇದ್ದ ಪ್ರಮುಖ ಹಂತವೊಂದು ಪೂರ್ಣಗೊಂಡಿದೆ. ಚಿತ್ರವು ಸದ್ಯ ಪೋಸ್ಟ್ ಪ್ರೊಡಕ್ಷನ್ನ ಅಂತಿಮ ಹಂತದಲ್ಲಿದ್ದು, U/A ಪ್ರಮಾಣಪತ್ರ ಪಡೆದಿರುವ ಹಿನ್ನೆಲೆಯಲ್ಲಿ ಶೀಘ್ರದಲ್ಲೇ ಬಿಡುಗಡೆಯ ದಿನಾಂಕ ಘೋಷಣೆಯಾಗುವ ನಿರೀಕ್ಷೆಯಿದೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
ವೆಬ್ಸೀರಿಸ್ ಬಳಿಕ ಬೆಳ್ಳಿತೆರೆಗೆ ‘ಮಿರ್ಜಾಪುರ’ – ಮೊದಲ ದಿನವೇ ಸದ್ದು : ಜನಪ್ರಿಯ ಕ್ರೈಂ ವೆಬ್ಸೀರಿಸ್ ಮಿರ್ಜಾಪುರ ಇದೀಗ ಸಿನಿಮಾವಾಗಿ ಚಿತ್ರಮಂದಿರಕ್ಕೆ ಎಂಟ್ರಿ ಕೊಟ್ಟಿದೆ. ಸೆಪ್ಟೆಂಬರ್ 4ರಂದು ‘Mirzapur: The Movie’ ಹಿಂದಿ ಹಾಗೂ ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಿದ್ದು, ಸರಣಿಯ ಜನಪ್ರಿಯ ಪಾತ್ರಗಳಾದ ಕಾಲೀನ್ ಭಯ್ಯಾ, ಗುಡ್ಡು ಪಂಡಿತ್ ಹಾಗೂ ಮುನ್ನಾ ತ್ರಿಪಾಠಿ ಮತ್ತೊಮ್ಮೆ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಈ ಸಿನಿಮಾಗೆ ಆರಂಭಿಕ ಪ್ರತಿಕ್ರಿಯೆ ಉತ್ತಮವಾಗಿದೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
ಇಸ್ರೋ ಸೃಷ್ಟಿಸಿದ ಹೊಸ ಇತಿಹಾಸ – ಭಾರತದ ಮೊದಲ ಜಿಯೋಸಿಂಕ್ರೋನಸ್ ಇಮೇಜಿಂಗ್ ಉಪಗ್ರಹ ಕಕ್ಷೆಗೆ : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಮತ್ತೊಂದು ಮಹತ್ವದ ಸಾಧನೆ ಮಾಡಿದೆ. ಶುಕ್ರವಾರ ಸೆಪ್ಟೆಂಬರ್ 4ರಂದು ಮುಂಜಾನೆ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಗೊಂಡ GSLV-F17 ರಾಕೆಟ್ 2,367 ಕೆ.ಜಿ. ತೂಕದ EOS-05 ಭೂ-ವೀಕ್ಷಣಾ ಉಪಗ್ರಹವನ್ನು ನಿಗದಿತ Sub-Geosynchronous Transfer Orbit (Sub-GTO)ಗೆ ಯಶಸ್ವಿಯಾಗಿ ಸೇರಿದ್ದು. ಇಸ್ರೋ ಅಧಿಕೃತವಾಗಿ ಮಿಷನ್ ಯಶಸ್ವಿಯಾಗಿದೆ ಎಂದು ಘೋಷಿಸಿದೆ. EOS-05 ಭಾರತದ ಜಿಯೋಸಿಂಕ್ರೋನಸ್ ಕಕ್ಷೆಯಿಂದ ಭೂಮಿಯ ಚಿತ್ರಣ ಮಾಡುವ ಮೊದಲ ಉಪಗ್ರಹವಾಗಿದ್ದು, ಭೂಮಿಯಿಂದ ಸುಮಾರು 36,000 ಕಿ.ಮೀ ಎತ್ತರದಲ್ಲಿ ಕಾರ್ಯನಿರ್ವಹಿಸುವಂತೆ ವಿನ್ಯಾಸಗೊಳಿಸಲಾಗಿದೆ. ಈ ಸ್ಥಾನದಿಂದ ಭಾರತ ಮತ್ತು ಸುತ್ತಮುತ್ತಲಿನ ಪ್ರದೇಶಗಳ ನಿರಂತರ ಹಾಗೂ ಪುನರಾವರ್ತಿತ ವೀಕ್ಷಣೆಗೆ ಹೆಚ್ಚಿನ ಸಾಮರ್ಥ್ಯ ದೊರೆಯಲಿದೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
(ಮಾಹಿತಿ ಅಪ್ಡೇಟ್ ಆಗಲಿದೆ)
ಪ್ರತಿ ಹೊಸ ಅಪ್ಡೇಟ್ಗಾಗಿ ಇಲ್ಲಿ ಕ್ಲಿಕ್ ಮಾಡಿರಿ 👉 ಇಂದಿನ ಪ್ರಮುಖ ಲೈವ್ ಅಪ್ಡೇಟ್ಗಳನ್ನು ‘ಸಂಯುಕ್ತ ಕರ್ನಾಟಕ’ ಜಾಲತಾಣದಲ್ಲಿ ನಿರಂತರವಾಗಿ ಓದಿರಿ.






















