ದಕ್ಷಿಣ ಭಾರತದಲ್ಲಿ ಬಿಗ್ ಬಾಸ್ ಧಮಾಕಾ; ಕಿರುತೆರೆ ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿರುವ ‘ಬಿಗ್ ಬಾಸ್’ ಹೊಸ ಸೀಸನ್‌ಗಳ ಕೌಂಟ್‌ಡೌನ್ ಆರಂಭವಾಗಿದೆ. ಈ ಬಾರಿ ದಕ್ಷಿಣ ಭಾರತದ ನಾಲ್ಕು ಭಾಷೆಗಳಾದ ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂ ಆವೃತ್ತಿಗಳು ಒಂದೇ ದಿನ, ಅಂದರೆ ಸೆಪ್ಟೆಂಬರ್ 6ರಂದು ಪ್ರೇಕ್ಷಕರ ಮುಂದೆ ಬರಲಿವೆ. ಇದರ ನಡುವೆ ನಾಲ್ಕು ಭಾಷೆಗಳ ಬಿಗ್ ಬಾಸ್ ಶೋಗಳ ನಿರೂಪಕರಾದ ವಿಜಯ್ ಸೇತುಪತಿ, ನಾಗಾರ್ಜುನ, ಕಿಚ್ಚ ಸುದೀಪ್ ಹಾಗೂ ಮೋಹನ್‌ಲಾಲ್ ಒಟ್ಟಿಗೆ ಕಾಣಿಸಿಕೊಂಡಿರುವ ವಿಶೇಷ ಪ್ರೋಮೋ ಅಭಿಮಾನಿಗಳ ಗಮನ ಸೆಳೆದಿದೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
ಇನ್ಮುಂದೆ ದೇಶದ ಅಧಿಕೃತ ಸಮಯ ಒಂದೇ; ಭಾರತೀಯ ಪ್ರಮಾಣಿತ ಸಮಯಕ್ಕೆ ಹೊಸ ನಿಯಮ: ಭಾರತೀಯ ಪ್ರಮಾಣಿತ ಸಮಯ (IST) ಬಳಕೆಗೆ ಕೇಂದ್ರದ ಹೊಸ ನಿಯಮ. ‘ಒಂದು ರಾಷ್ಟ್ರ, ಒಂದು ಕಾಲ’ ಉಪಕ್ರಮದಡಿ ಬ್ಯಾಂಕಿಂಗ್, ರೈಲ್ವೆ, ದೂರಸಂಪರ್ಕ, ವಿದ್ಯುತ್ ಮತ್ತು ಡಿಜಿಟಲ್ ವ್ಯವಸ್ಥೆಗಳಲ್ಲಿ ಏಕರೂಪ ಸಮಯ ಉಲ್ಲೇಖಕ್ಕೆ ಒತ್ತು. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
ಬಾಗಲಕೋಟೆ ಜಿಲ್ಲೆಯಲ್ಲಿ ಬೆಂಕಿಯ ಕೆನ್ನಾಲಿಗೆ; 25ಕ್ಕೂ ಅಧಿಕ ಶೆಡ್‌ಗಳು ಭಸ್ಮ: ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಇದ್ದಲಗಿ ಗ್ರಾಮದಲ್ಲಿ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿ 25ಕ್ಕೂ ಅಧಿಕ ಶೆಡ್‌ಗಳು ಸುಟ್ಟು ಭಸ್ಮವಾಗಿವೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
‘ಮೈಸೂರು ಎಕ್ಸ್‌ಪ್ರೆಸ್’ ಜಾವಗಲ್ ಶ್ರೀನಾಥ್ ಅವರಿಗೆ ೫೭ನೇ ಜನ್ಮದಿನದ ಸಂಭ್ರಮ : ಬೆಂಗಳೂರು: ಭಾರತೀಯ ಕ್ರಿಕೆಟ್‌ನ ಸಾರ್ವಕಾಲಿಕ ಶ್ರೇಷ್ಠ ವೇಗದ ಬೌಲರ್, ಹೆಮ್ಮೆಯ ಕನ್ನಡಿಗ ಜಾವಗಲ್ ಶ್ರೀನಾಥ್ ಇಂದು (ಆಗಸ್ಟ್ 31) ತಮ್ಮ 57ನೇ ವಯಸ್ಸಿಗೆ ಕಾಲಿಟ್ಟಿದ್ದಾರೆ. 90ರ ದಶಕದಲ್ಲಿ ಭಾರತೀಯ ಬೌಲಿಂಗ್ ವಿಭಾಗದ ಬೆನ್ನೆಲುಬಾಗಿದ್ದ ‘ಮೈಸೂರು ಎಕ್ಸ್‌ಪ್ರೆಸ್’ ಖ್ಯಾತಿಯ ಶ್ರೀನಾಥ್, ಟೆಸ್ಟ್‌ನಲ್ಲಿ 236 ಹಾಗೂ ಏಕದಿನ ಕ್ರಿಕೆಟ್‌ನಲ್ಲಿ 315 ವಿಕೆಟ್ ಪಡೆದ ಅಪರೂಪದ ಸಾಧಕ. ಏಕದಿನ ಮಾದರಿಯಲ್ಲಿ 300ಕ್ಕೂ ಹೆಚ್ಚು ವಿಕೆಟ್ ಕಲೆಹಾಕಿದ ಭಾರತದ ಏಕೈಕ ವೇಗಿ ಎಂಬ ದಾಖಲೆ ಇವರ ಹೆಸರಲ್ಲಿದೆ. 2003ರ ವಿಶ್ವಕಪ್ ಬೆನ್ನಲ್ಲೇ ನಿವೃತ್ತರಾದ ಇವರು, ಪ್ರಸ್ತುತ ಐಸಿಸಿ (ICC) ಪಂದ್ಯದ ರೆಫರಿಯಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇಂದು ದೇಶಾದ್ಯಂತ ಕ್ರಿಕೆಟ್ ಅಭಿಮಾನಿಗಳು ಹಾಗೂ ಗಣ್ಯರು ಶ್ರೀನಾಥ್ ಅವರಿಗೆ ಜನ್ಮದಿನದ ಶುಭಾಶಯಗಳನ್ನು ಕೋರುತ್ತಿದ್ದಾರೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರತಿ ಹೊಸ ಅಪ್‌ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿರಿ 👉 ಇಂದಿನ ಪ್ರಮುಖ ಲೈವ್ ಅಪ್‌ಡೇಟ್‌ಗಳನ್ನು ‘ಸಂಯುಕ್ತ ಕರ್ನಾಟಕ’ ಜಾಲತಾಣದಲ್ಲಿ ನಿರಂತರವಾಗಿ ಓದಿರಿ.






















