SK Home Ad
Home ನಮ್ಮ ಜಿಲ್ಲೆ ಧಾರವಾಡ ಹುಬ್ಬಳ್ಳಿ-ರಾಮೇಶ್ವರಂ ವಿಶೇಷ ರೈಲು ಸೇವೆ ವಿಸ್ತರಣೆ

ಹುಬ್ಬಳ್ಳಿ-ರಾಮೇಶ್ವರಂ ವಿಶೇಷ ರೈಲು ಸೇವೆ ವಿಸ್ತರಣೆ

0
99

ಹುಬ್ಬಳ್ಳಿ: ಪ್ರಯಾಣಿಕರ ದಟ್ಟಣೆ ಹಿನ್ನೆಲೆಯಲ್ಲಿ ಹುಬ್ಬಳ್ಳಿ-ರಾಮೇಶ್ವರಂ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ಸೇವೆಯನ್ನು ವಿಸ್ತರಿಸಲಾಗಿದೆ.

ಹುಬ್ಬಳ್ಳಿಯಿಂದ ರಾಮೇಶ್ವರಂಗೆ ಹೊರಡುವ ರೈಲು (ರೈಲು ಸಂಖ್ಯೆ- 07355) ಸೆಪ್ಟೆಂಬರ್ 6 ರಿಂದ 27 ರವರೆಗೆ ಹಾಗೂ ರಾಮೇಶ್ವರಂನಿಂದ ಹುಬ್ಬಳ್ಳಿಗೆ ಬರುವ ರೈಲು (ರೈಲು ಸಂಖ್ಯೆ- 07356) ಸೆಪ್ಟೆಂಬರ್ 7 ರಿಂದ 28 ರವರೆಗೆ ಹೆಚ್ಚುವರಿ 4 ಟ್ರಿಪ್ ಸಂಚರಿಸಲಿವೆ.

ಈ ಮೊದಲು ಈ ರೈಲುಗಳು ಆಗಸ್ಟ್ 30 ಮತ್ತು 31 ರವರೆಗೆ ಮಾತ್ರ ಸಂಚರಿಸಬೇಕಿತ್ತು. ವಿಸ್ತರಣೆ ಅವಧಿಯಲ್ಲಿ ಹಳೆಯ ವೇಳಾಪಟ್ಟಿ, ನಿಲ್ದಾಣ ಮತ್ತು ಬೋಗಿಗಳ ಸಂಯೋಜನೆಯಲ್ಲೇ ರೈಲು ಸಂಚರಿಸಲಿದೆ ಎಂದು ನೈಋತ್ಯ ರೈಲ್ವೆ ವಲಯ ಪ್ರಕಟಣೆ ತಿಳಿಸಿದೆ.