SK Home Ad
Home ಸಿನಿ ಮಿಲ್ಸ್ ‘ಬಿಗ್ ಬಾಸ್ ಅಗ್ನಿಪರೀಕ್ಷೆ’ಯಲ್ಲಿ ವಯಸ್ಸಿಗೆ ಮಿತಿ ಇಲ್ಲ; 72 ವರ್ಷದ ರತ್ನ ಹಾಗೂ 20 ವರ್ಷದ...

‘ಬಿಗ್ ಬಾಸ್ ಅಗ್ನಿಪರೀಕ್ಷೆ’ಯಲ್ಲಿ ವಯಸ್ಸಿಗೆ ಮಿತಿ ಇಲ್ಲ; 72 ವರ್ಷದ ರತ್ನ ಹಾಗೂ 20 ವರ್ಷದ ಕುಮಾರಿ ಆಯ್ಕೆ

0
60

ಬಿಗ್‌ ಬಾಸ್-13: ಈ ಬಾರಿ ‘ಬಿಗ್ ಬಾಸ್ ಸೀಸನ್‌-13 ಅಗ್ನಿಪರೀಕ್ಷೆ’ಯ ವಿಶೇಷತೆ ಎಂದರೆ, ಜನಸಾಮಾನ್ಯರನ್ನ ಆಯ್ಕೆ ಮಾಡು್ವ ಪ್ರಕ್ರಿಯೆ. ಲಕ್ಷಾಂತರ ಮಂದಿ ಆಡಿಷನ್‌ನಲ್ಲಿ ಭಾಗವಹಿಸಿದ್ದು, ಅವರಲ್ಲಿ 60 ಮಂದಿಯನ್ನು ಶಾರ್ಟ್‌ಲಿಸ್ಟ್ ಮಾಡಿ, ಮುಂದಿನ ಹಂತದ ಅಗ್ನಿಪರೀಕ್ಷೆಗೆ ಆಯ್ಕೆ ಮಾಡಲಾಗಿದೆ. ವಿಭಿನ್ನ ಪ್ರತಿಭೆ, ವ್ಯಕ್ತಿತ್ವ ಮತ್ತು ಆಸಕ್ತಿಯುಳ್ಳ ಸ್ಪರ್ಧಿಗಳನ್ನು ಗುರುತಿಸುವ ಮೂಲಕ ಈ ಪ್ರಕ್ರಿಯೆ ಕುತೂಹಲ ಮೂಡಿಸಿದೆ.

ಈ ವಿಶೇಷ ಆಯ್ಕೆ ಪ್ರಕ್ರಿಯೆಯಲ್ಲಿ ಇದೀಗ ಇಬ್ಬರು ಗಮನ ಸೆಳೆಯುವ ಸ್ಪರ್ಧಿಗಳು ಆಯ್ಕೆಯಾಗಿದ್ದಾರೆ. ಕೋಲಾರ ಜಿಲ್ಲೆಯ ಬಂಗಾರಪೇಟೆಯ 72 ವರ್ಷದ ರತ್ನ ಹಾಗೂ 20 ವರ್ಷದ ಕುಮಾರಿ ‘ಬಿಗ್ ಬಾಸ್’ನ ‘ಸ್ಟಾರ್ ಕಂಟೆಸ್ಟಂಟ್’ಗಳಾಗಿ ಆಯ್ಕೆಯಾಗಿದ್ದಾರೆ.

72 ವರ್ಷದ ರತ್ನ ಅವರು ತಮ್ಮ ವಯಸ್ಸಿನಲ್ಲೂ ತೋರುತ್ತಿರುವ ಉತ್ಸಾಹ ಮತ್ತು ಚೈತನ್ಯದಿಂದ ಗಮನ ಸೆಳೆದಿದ್ದಾರೆ. ಅವರ ಉತ್ಸಾಹವನ್ನು ಮೆಚ್ಚಿದ ನಟ ಹಾಗೂ ಮಾಜಿ ಬಿಗ್ ಬಾಸ್ ಸ್ಪರ್ಧಿ ವಿನಯ್ ಗೌಡ ಅವರು ಅವರಿಗೆ ‘ಬಂಗಾರಪೇಟೆ ಆನೆ’ ಎಂಬ ಬಿರುದನ್ನೂ ನೀಡಿದ್ದಾರೆ.

ಮತ್ತೊಂದೆಡೆ, 20 ವರ್ಷದ ಕುಮಾರಿ ಅವರು Gen Z ವಿಭಾಗದಲ್ಲಿ ಆಯ್ಕೆಯಾಗಿದ್ದು, ಅವರ ಮುಗ್ಧತೆ ಮತ್ತು ಸಹಜ ವ್ಯಕ್ತಿತ್ವವೇ ಅವರ ವಿಶೇಷತೆಯಾಗಿ ಗುರುತಿಸಲ್ಪಟ್ಟಿದೆ.

‘ಅಗ್ನಿಪರೀಕ್ಷೆ’ಯ ಮತ್ತೊಂದು ವಿಶೇಷ ಸಂದೇಶವೆಂದರೆ ವಯಸ್ಸು ಯಾವುದೇ ಮಿತಿಯಲ್ಲ ಎಂಬುದು. ಅನುಭವದೊಂದಿಗೆ ಬಂದಿರುವ 72 ವರ್ಷದ ರತ್ನ ಅವರ ಉತ್ಸಾಹ ಹಾಗೂ ಯುವ ಪೀಳಿಗೆಯನ್ನು ಪ್ರತಿನಿಧಿಸುವ 20 ವರ್ಷದ ಕುಮಾರಿ ಅವರ ಮುಗ್ಧತೆ ಮತ್ತು ಚೈತನ್ಯ, ‘ಬಿಗ್ ಬಾಸ್’ ವೇದಿಕೆಯಲ್ಲಿ ವಿಭಿನ್ನ ವಯೋಮಾನದ ಜನರಿಗೂ ಅವಕಾಶವಿದೆ ಎಂಬುದನ್ನು ತೋರಿಸುತ್ತಿದೆ.

‘ಬಿಗ್ ಬಾಸ್ ಕನ್ನಡ ಸೀಸನ್ 13’ರ ‘ಅಗ್ನಿಪರೀಕ್ಷೆ’ ಹಂತವು ಸಾಮಾನ್ಯ ಜನರ ಪ್ರತಿಭೆ, ವ್ಯಕ್ತಿತ್ವ ಹಾಗೂ ವಿಭಿನ್ನ ಹಿನ್ನೆಲೆಗಳಿಗೆ ವೇದಿಕೆ ಕಲ್ಪಿಸುವ ಮೂಲಕ ಈಗಾಗಲೇ ಕುತೂಹಲ ಮೂಡಿಸಿದೆ. ಮುಂದಿನ ಹಂತಗಳಲ್ಲಿ ಇನ್ನಷ್ಟು ವೈವಿಧ್ಯಮಯ ಸ್ಪರ್ಧಿಗಳು ಹೊರಹೊಮ್ಮುವ ನಿರೀಕ್ಷೆಯಿದೆ.