SK Home Ad
Home ನಮ್ಮ ಜಿಲ್ಲೆ ಕೋಲಾರ ಜೆಡಿಎಸ್ ಉಳಿವಿಗಾಗಿ ಬಿಡದಿ ಹೋರಾಟ: ಡಿಕೆಶಿ ವ್ಯಂಗ್ಯ

ಜೆಡಿಎಸ್ ಉಳಿವಿಗಾಗಿ ಬಿಡದಿ ಹೋರಾಟ: ಡಿಕೆಶಿ ವ್ಯಂಗ್ಯ

0
76

ಕೋಲಾರ: ಜಾತ್ಯತೀತ ಜನತಾದಳದವರು ತಮ್ಮ ಉಳಿವಿಗಾಗಿ ಬಿಡದಿ ಹೋರಾಟ ನಡೆಸುತ್ತಿದ್ದಾರೆ, ಪಾಪ ಮಾಡಲಿ ಬಿಡಿ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವ್ಯಂಗ್ಯ ಮಾಡಿದರು.

ಸೋಮವಾರ ಮಾಲೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ಹಿಂದೆ ಬಿಡದಿ ಮತ್ತು ನೈಸ್ ಯೋಜನೆಗಳನ್ನು ಅವರೇ ಸಹಿ ಹಾಕಿ ರೂಪಿಸಿದರು. ಬಿಡದಿಯಲ್ಲಿ ಎಕರೆಗೆ 25 ಲಕ್ಷ ನಿಗದಿ ಮಾಡಿದ್ದರು, ನಾವೀಗ ಎರಡೂವರೆ ಮೂರು ಕೋಟಿ ರೂ. ಕೊಡುತ್ತಿದ್ದೇವೆ. ರಾಜಕೀಯ ಅಸ್ತಿತ್ವಕ್ಕಾಗಿ ಅವರು ಇದೀಗ ಹೋರಾಟ ಆರಂಭಿಸಿದ್ದಾರೆ ಎಂದು ವಿವರಿಸಿದರು.

ನೈಸ್ ರಸ್ತೆ ನಿರ್ಮಾಣದ ಮೂಲಕ ಒಳ್ಳೆಯ ಕೆಲಸ ಮಾಡಿದ್ದಾರೆ. ಅದರಿಂದಾಗಿ ಬೆಂಗಳೂರು ಉಳಿದಿದೆ. ಆದರೆ ಆ ಯೋಜನೆಯ ಹಿಂದೆ ಕೆಲವು ಸ್ವಾರ್ಥ ಇದೆ ಅದರ ಬಗ್ಗೆ ಚರ್ಚೆ ಮಾಡಬೇಕಾಗಿದೆ ಎಂದರು.

ರಾಜ್ಯ ಸಚಿವ ಸಂಪುಟದಲ್ಲಿ ಖಾಲಿ ಇರುವ ಮಹಿಳಾ ಸ್ಥಾನವನ್ನು ವಿಧಾನಮಂಡಲ ಅಧಿವೇಶನದ ನಂತರ ಭರ್ತಿ ಮಾಡಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.