SK Home Ad
Home ನಮ್ಮ ಜಿಲ್ಲೆ ಧಾರವಾಡ ಬಳ್ಳಾರಿ ರೈಲ್ವೆ ನಿಲ್ದಾಣದಲ್ಲಿ 29.845 ಕೆ.ಜಿ ಗಾಂಜಾ ವಶ: ₹14,92,250 ಮೌಲ್ಯದ ಮಾದಕ ವಸ್ತು ಪತ್ತೆ

ಬಳ್ಳಾರಿ ರೈಲ್ವೆ ನಿಲ್ದಾಣದಲ್ಲಿ 29.845 ಕೆ.ಜಿ ಗಾಂಜಾ ವಶ: ₹14,92,250 ಮೌಲ್ಯದ ಮಾದಕ ವಸ್ತು ಪತ್ತೆ

0
96

ಹುಬ್ಬಳ್ಳಿ : ಶಾಲಿಮಾರ್‌ನಿಂದ ವಾಸ್ಕೋಗೆ ತೆರಳುತ್ತಿದ್ದ ( ರೈಲು ಸಂಖ್ಯೆ – 18047) ಅಮರಾವತಿ ಎಕ್ಸ್‌ಪ್ರೆಸ್ ರೈಲಿನಲ್ಲಿ ರೈಲ್ವೆ ಸುರಕ್ಷಾ ದಳ ಮತ್ತು ಸರ್ಕಾರಿ ರೈಲ್ವೆ ಪೊಲೀಸ್ ( ಆರ್‌ಪಿಎಫ್ ಮತ್ತು ಜಿಆರ್‌ಪಿ ) ಜಂಟಿ ತಂಡ ನಡೆಸಿದ ದಿಢೀರ್ ತಪಾಸಣೆಯಲ್ಲಿ 29.845 ಕೆ.ಜಿ ಒಣ ಗಾಂಜಾ ವಶಪಡಿಸಿಕೊಳ್ಳಲಾಗಿದೆ.

ವಶಪಡಿಸಿಕೊಂಡ ಗಾಂಜಾ ಮೌಲ್ಯ 14,92,250 ಲಕ್ಷ ರೂ ಎಂದು ಅಂದಾಜಿಸಲಾಗಿದೆ ಎಂದು ನೈಋತ್ಯ ರೈಲ್ವೆ ವಲಯ ಆರ್ ಪಿಎಫ್ ಅಧಿಕಾರಿಗಳು ತಿಳಿಸಿದ್ದಾರೆ.

ಬಳ್ಳಾರಿ ರೈಲ್ವೆ ನಿಲ್ದಾಣದ ಪ್ಲಾಟ್‌ಫಾರ್ಮ್ ನಂ.1 ರಲ್ಲಿ ನಡೆದ ತಪಾಸಣೆಯ ವೇಳೆ ಸಾಮಾನ್ಯ ಬೋಗಿಯ ಪ್ರಯಾಣಿಕರ ಆಸನದ ಕೆಳಗೆ ಎರಡು ಉಪೇಕ್ಷಿತ ಟ್ರಾಲಿ ಬ್ಯಾಗ್‌ಗಳು ಪತ್ತೆಯಾಗಿದ್ದವು. ಬ್ಯಾಗ್‌ಗಳನ್ನು ತೆರೆದು ನೋಡಿದಾಗ ಪ್ರತ್ಯೇಕ ಪ್ಯಾಕೆಟ್‌ಗಳಲ್ಲಿ ಗಾಂಜಾ ಇರುವುದು ಕಂಡುಬಂದಿದೆ ಎಂದು ತಿಳಿಸಿದ್ದಾರೆ.

ಈ ಸಂಬಂಧ ಬಳ್ಳಾರಿ ಜಿಆರ್‌ಪಿಯಲ್ಲಿ ( ಅಪರಾಧ ಸಂಖ್ಯೆ 17/2026 ರಂತೆ ಎನ್‌ಡಿಪಿಎಸ್ ಕಾಯ್ದೆ 1985 ರ ಸೆಕ್ಷನ್ 20(ಬಿ)) ಪ್ರಕರಣ ದಾಖಲಿಸಲಾಗಿದೆ.

ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಜಿಆರ್‌ಪಿ ಬಳ್ಳಾರಿ ನಡೆಸುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.