SK Home Ad
Home ಸಿನಿ ಮಿಲ್ಸ್ ಹಾಲಿವುಡ್‌ಗೂ ಗೊತ್ತು ಕನ್ನಡಿಗನ ಗತ್ತು; ಸ್ಪೈಡರ್‌ ಮ್ಯಾನ್‌ಗೆ ಬೇಕಾಯ್ತು ರೀ ನಮ್ಮ ರಿಷಬ್‌ ಶೆಟ್ಟಿಯ ಸಾಥ್!

ಹಾಲಿವುಡ್‌ಗೂ ಗೊತ್ತು ಕನ್ನಡಿಗನ ಗತ್ತು; ಸ್ಪೈಡರ್‌ ಮ್ಯಾನ್‌ಗೆ ಬೇಕಾಯ್ತು ರೀ ನಮ್ಮ ರಿಷಬ್‌ ಶೆಟ್ಟಿಯ ಸಾಥ್!

0
55

ಕಾಂತಾರ ಖ್ಯಾತಿಯ ರಿಷಬ್‌ ಶೆಟ್ಟಿ ಇದೀಗ ಹಾಲಿವುಡ್ ಸಿನಿಮಾದ ಪ್ರಚಾರಕ್ಕೆ ಆಯ್ಕೆಯಾಗಿದ್ದಾರೆ.
ಹಾಲಿವುಡ್‌ನ ಖ್ಯಾತ ಸಂಸ್ಥೆಯಾದ ಸೋನಿ ಪಿಕ್ಚರ್ಸ್ ಮುಂಬರುವ ‘ಸ್ಪೈಡರ್ ಮ್ಯಾನ್: ಬ್ರಾಂಡ್ ನ್ಯೂ ಡೇ’ ಸಿನಿಮಾದ ವಿಶೇಷ ಪ್ರಚಾರಕ್ಕಾಗಿ ರಿಷಬ್ ಶೆಟ್ಟಿ ಅವರೊಂದಿಗೆ ಕೈಜೋಡಿಸಿದೆ. ಈ ಮೂಲಕ ಹಾಲಿವುಡ್ ಚಿತ್ರವೊಂದರ ಪ್ರಚಾರದ ಪ್ರಮುಖ ಭಾಗವಾಗಿ ಆಯ್ಕೆಯಾದ ಭಾರತದ ಮೊದಲ ನಟ ಎಂಬ ಐತಿಹಾಸಿಕ ಹೆಗ್ಗಳಿಕೆಗೆ ರಿಷಬ್ ಶೆಟ್ಟಿ ಪಾತ್ರರಾಗಿದ್ದಾರೆ. ಇದರಿಂದ ರಿಷಬ್‌ ಶೆಟ್ಟಿ ಕನ್ನಡ ಚಿತ್ರರಂಗದಲ್ಲಿ ಅಲ್ಲದೇ ಜಾಗತಿಕ ಮಟ್ಟದಲ್ಲೂ ಖ್ಯಾತಿ ಪಡೆಯಲಿದ್ದು ಇವರು ಕನ್ನಡ ಚಿತ್ರರಂಗದ ಹೆಮ್ಮೆಗೆ ಪಾತ್ರರಾಗಿದ್ದಾರೆ.

ಸೋನಿ ಪಿಕ್ಚರ್ಸ್ ಎಂಟರ್‌ಟೈನ್ಮೆಂಟ್ ತನ್ನ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಪ್ರಚಾರದ ಪ್ರೋಮೋವನ್ನು ಹಂಚಿಕೊಂಡಿದ್ದು, ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿದೆ.

ಸ್ಪೈಡರ್ ಮ್ಯಾನ್ : ನೋ ವೇ ಹೋಮ್‌ ಅಂತ್ಯದಲ್ಲಿ ಪೀಟರ್‌ ಪಾರ್ಕರ್ ತನ್ನ ನೆನಪನ್ನು ಜಗತ್ತೇ ಮರೆಯುವಂತೆ ಮಾಡುವ ಸನ್ನಿವೇಶ, ಆತನ ಒಂಟಿತನ ಮತ್ತು ಸೂಪರ್‌ ಹಿರೋಯಿಸಂ‌ ಪರಿಕಲ್ಪನೆಯನ್ನು ರಿಷಬ್‌ ಶೆಟ್ಟಿ ಪ್ರೋಮೋದಲ್ಲಿ ವಿವರಿಸಿದ್ದಾರೆ.

ರಿಷಬ್‌ ಶೆಟ್ಟಿ ಪ್ರಚಾರ ಮಾಡಿರುವ ಈ ಸಿನಿಮಾವು ಇದೇ ತಿಂಗಳ (ಜುಲೈ) 30ರಂದು ವಿಶ್ವದಾದ್ಯಂತ ಇಂಗ್ಲೀಷ್‌, ಕನ್ನಡ, ಹಿಂದಿ, ತಮಿಳು, ತೆಲುಗು ಮತ್ತು ಮಲೆಯಾಳಂ ಸೇರಿದಂತೆ ಹಲವಾರು ಭಾಷೆಗಳಲ್ಲಿ ತೆರೆ ಕಾಣಲಿದೆ.