SK Home Ad
Home ಸಿನಿ ಮಿಲ್ಸ್ ‘ಅದಕ್ಕೆ ಸಬ್‌ಟೈಟಲ್ಸ್ ಬೇಕು!’: ಕಾಫಿ ವಿತ್ ಕರಣ್‌ನಲ್ಲಿ ರಶ್ಮಿಕಾ ಜೊತೆಗಿನ ಟ್ರೋಲ್‌ಗೆ ವಿಜಯ್ ದೇವರಕೊಂಡ ಹೇಳಿದ್ದೇನು?

‘ಅದಕ್ಕೆ ಸಬ್‌ಟೈಟಲ್ಸ್ ಬೇಕು!’: ಕಾಫಿ ವಿತ್ ಕರಣ್‌ನಲ್ಲಿ ರಶ್ಮಿಕಾ ಜೊತೆಗಿನ ಟ್ರೋಲ್‌ಗೆ ವಿಜಯ್ ದೇವರಕೊಂಡ ಹೇಳಿದ್ದೇನು?

0
27

ಜನಪ್ರಿಯ ಟಾಕ್ ಶೋ ‘ಕಾಫಿ ವಿತ್ ಕರಣ್ 9’ರಲ್ಲಿ ಪತ್ನಿ ರಶ್ಮಿಕಾ ಮಂದಣ್ಣ ಜೊತೆ ಭಾಗವಹಿಸಿದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟ್ರೋಲ್‌ಗೆ ಒಳಗಾಗಿದ್ದ ನಟ ವಿಜಯ್ ದೇವರಕೊಂಡ, ಇದೀಗ ಟ್ರೋಲಿಗರಿಗೆ ತಮ್ಮದೇ ಆದ ವ್ಯಂಗ್ಯಭರಿತ ಶೈಲಿಯಲ್ಲಿ ಖಡಕ್ ಪ್ರತ್ಯುತ್ತರ ನೀಡಿದ್ದಾರೆ.

ಸೆಲೆಬ್ರಿಟಿಗಳ ಪ್ರತಿಯೊಂದು ಸಣ್ಣ ನಡೆಯನ್ನೂ ಭೂತಗನ್ನಡಿ ಹಿಡಿದು ನೋಡಿ ‘ರೆಡ್ ಫ್ಲಾಗ್’ ಪಟ್ಟ ಕಟ್ಟುವ ನೆಟ್ಟಿಗರ ಹುಚ್ಚಾಟವನ್ನು ವಿಜಯ್ ಹಾಸ್ಯಮಯವಾಗಿ ಅಣಕಿಸಿದ್ದಾರೆ. ಈ ಕುರಿತು ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿರುವ ವಿಜಯ್,

“ಇದಕ್ಕೆ ಪ್ರಾದೇಶಿಕ ಭಾಷೆಗಳಲ್ಲಿ ಸಬ್‌ಟೈಟಲ್ಸ್ ಬೇಕು” ಎಂದು ವ್ಯಂಗ್ಯವಾಡಿದ್ದಾರೆ. ಕಂಟೆಂಟ್ ಕ್ರಿಯೇಟರ್‌ಗಳು ಮಾಡಿದ್ದ ಆ ವಿಡಂಬನಾತ್ಮಕ ವಿಡಿಯೋದಲ್ಲಿ, “ಶೋನಲ್ಲಿ ವಿಜಯ್ ಸೋಫಾದ ಬಲಗಡೆ ಕುಳಿತಿದ್ದಾರೆ, ಅಂದರೆ ಅವರೇ ಯಾವಾಗಲೂ ಸರಿ ಎಂದು ತೋರಿಸಿಕೊಳ್ಳುವ ರೆಡ್ ಫ್ಲಾಗ್ ಹುಡುಗ ಅವರು; ಹುಡುಗಿಯರೇ ಇವರಿಂದ ದೂರವಿರಿ” ಎಂದು ಕಾಲೆಳೆಯಲಾಗಿತ್ತು.

ರಶ್ಮಿಕಾ ಮದುವೆಗಾಗಿ 100 ಬಾರಿ ಕೇಳಿಕೊಂಡ ಬಳಿಕವೇ ವಿಜಯ್ ಒಪ್ಪಿಕೊಂಡಿದ್ದರು ಎಂಬ ಸಂಭಾಷಣೆ ಭಾರಿ ಚರ್ಚೆಗೆ ಗ್ರಾಸವಾಗಿತ್ತು. 2026ರ ಫೆಬ್ರವರಿಯಲ್ಲಿ ಇಬ್ಬರೂ ವಿವಾಹವಾಗಿದ್ದು, ಸಾಮಾನ್ಯ ತಮಾಷೆಯ ಕ್ಷಣಗಳನ್ನು ನೆಟ್ಟಿಗರು ವಿಪರೀತ ವಿಶ್ಲೇಷಣೆ ಮಾಡುತ್ತಿರುವುದಕ್ಕೆ ವಿಜಯ್ ಈ ಮೂಲಕ ಚಾಟಿ ಬೀಸಿದ್ದಾರೆ.

ಇತ್ತೀಚೆಗಷ್ಟೇ ರಾಹುಲ್ ಸಂಕೃತ್ಯನ್ ನಿರ್ದೇಶನದ ಐತಿಹಾಸಿಕ ಆಕ್ಷನ್ ಡ್ರಾಮಾ ಚಿತ್ರ ‘ರಣಬಲಿ’ಯಲ್ಲಿ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಒಟ್ಟಾಗಿ ನಟಿಸಿ ತೆರೆಹಂಚಿಕೊಂಡಿದ್ದರು. ತೆರೆಯ ಮೇಲಿನ ಕೆಮಿಸ್ಟ್ರಿ ಜೊತೆಗೆ ನೈಜ ಜೀವನದ ಬಾಂಧವ್ಯದ ಬಗ್ಗೆಯೂ ಅನಗತ್ಯ ವಿವಾದ ಸೃಷ್ಟಿಸುತ್ತಿರುವವರಿಗೆ ಜೋಡಿ ನೇರ ಸಂದೇಶ ರವಾನಿಸಿದೆ.