SK Home Ad
Home ಸಿನಿ ಮಿಲ್ಸ್ ‘100 ಅಲ್ಲ, 1000 ಸಲ ಬೇಕಾದ್ರೂ ಕೇಳ್ತೀನಿ!’: ವಿಜಯ್ ಜೊತೆಗಿನ ಡಿವೋರ್ಸ್ ವದಂತಿಗೆ ರಶ್ಮಿಕಾ ಮಂದಣ್ಣ...

‘100 ಅಲ್ಲ, 1000 ಸಲ ಬೇಕಾದ್ರೂ ಕೇಳ್ತೀನಿ!’: ವಿಜಯ್ ಜೊತೆಗಿನ ಡಿವೋರ್ಸ್ ವದಂತಿಗೆ ರಶ್ಮಿಕಾ ಮಂದಣ್ಣ ಖಡಕ್ ತಿರುಗೇಟು!

0
43

‘ಕಾಫಿ ವಿತ್ ಕರಣ್ 9’ ಶೋನಲ್ಲಿ ಪತಿ ವಿಜಯ್ ದೇವರಕೊಂಡ ಜೊತೆ ಭಾಗವಹಿಸಿದ ಬಳಿಕ ಶುರುವಾದ ವಿವಾಹ ವಿವಾದ ಹಾಗೂ ಡಿವೋರ್ಸ್ ವದಂತಿಗಳಿಗೆ ನಟಿ ರಶ್ಮಿಕಾ ಮಂದಣ್ಣ ಕೊನೆಗೂ ದೀರ್ಘ ಹೇಳಿಕೆಯ ಮೂಲಕ ತಕ್ಕ ಪ್ರತ್ಯುತ್ತರ ನೀಡಿದ್ದಾರೆ. ವಿಜಯ್ ಮದುವೆಗೆ ಒಪ್ಪಿಕೊಳ್ಳಲು ಒಂದು ವರ್ಷ ಕಾದು 100 ಬಾರಿ ಕೇಳಿಕೊಂಡೆ ಎಂದಿದ್ದ ಮಾತನ್ನು ಹಿಡಿದು ‘ರೆಡ್ ಫ್ಲಾಗ್’ ಪಟ್ಟ ಕಟ್ಟುತ್ತಿದ್ದ ಟ್ರೋಲಿಗರು ಮತ್ತು ಉಚಿತ ಸಲಹೆ ನೀಡುತ್ತಿದ್ದವರ ಬಾಯಿ ಮುಚ್ಚಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರಹಾಕಿರುವ ರಶ್ಮಿಕಾ, “ನನ್ನ ಗಂಡನ ಮೇಲೆ ನನಗೆ ಅತಿಯಾದ ಪ್ರೀತಿ  ಇದೆ. ಅದರಲ್ಲಿ ತಪ್ಪೇನಿದೆ? ನಾನು ಪ್ರೀತಿಸುವ ವ್ಯಕ್ತಿಯನ್ನು ಮದುವೆಯಾಗಲು 100 ಅಲ್ಲ, 1000 ಬಾರಿ ಬೇಕಾದರೂ ಪ್ರಪೋಸ್ ಮಾಡುತ್ತೇನೆ. ಮದುವೆ ಎಂದರೆ ಕೇವಲ ಮೊಣಕಾಲೂರಿ ಉಂಗುರ ತೊಡಿಸುವುದಲ್ಲ, ಭವಿಷ್ಯ ಕಟ್ಟಿಕೊಳ್ಳುವುದು. ನಾನು ಭಾವನಾತ್ಮಕ ವ್ಯಕ್ತಿ, ವಿಜಯ್ ಪ್ರಾಯೋಗಿಕವಾಗಿ ಯೋಚಿಸುವ ವ್ಯಕ್ತಿ; ಇಬ್ಬರ ನಡುವೆ ಈ ಹೊಂದಾಣಿಕೆ ಇರಲೇಬೇಕು” ಎಂದು ಸ್ಪಷ್ಟಪಡಿಸಿದ್ದಾರೆ.

ಮಹಿಳಾ ಕಾಳಜಿಯ ಹೆಸರಿನಲ್ಲಿ ರೀಲ್ಸ್ ಮಾಡಿ ‘ಅವನಿಂದ ಓಡಿಹೋಗು’ ಎಂದು ಸಲಹೆ ನೀಡುತ್ತಿದ್ದ ಯುವತಿಯರಿಗೂ ತಿರುಗೇಟು ನೀಡಿದ ಅವರು, “ಕಳೆದ ಕೆಲವು ವರ್ಷಗಳಲ್ಲಿ ನಾನು ಅತ್ಯಂತ ಕಠಿಣ ಪರಿಸ್ಥಿತಿ ಎದುರಿಸಿದಾಗ, ಆತಂಕದಿಂದ ನಡುಗಿದಾಗ, ಹೊಟ್ಟೆ ನೋವು ಬಂದಾಗ ನೀವ್ಯಾರೂ ನನ್ನ ಜೊತೆ ಇರಲಿಲ್ಲ; ವಿಜಯ್ ನನ್ನ ಜೊತೆಗಿದ್ದರು. ನನ್ನ ಜೀವನದಲ್ಲೇ ನಾನೀಗ ಅತ್ಯಂತ ಸಂತೋಷವಾಗಿದ್ದೇನೆ” ಎಂದಿದ್ದಾರೆ. ಅಲ್ಲದೆ, ಫೆಮಿನಿಸಂ ಹೆಸರಿನಲ್ಲಿ ಕುಟುಂಬವನ್ನು ಎಳೆದು ತಂದು ನಿಂದಿಸುವುದು ದೌರ್ಜನ್ಯ ಎಂದು ಕಿಡಿಕಾರಿದ್ದಾರೆ.

ಇದೇ ವೇಳೆ ಕನ್ನಡಿಗರನ್ನು ಉಲ್ಲೇಖಿಸಿ, “10 ವರ್ಷಗಳಾದರೂ ನನ್ನನ್ನು ನಿಮ್ಮ ಹೃದಯದಲ್ಲಿ ನೆನಪಿಟ್ಟುಕೊಂಡಿರುವುದಕ್ಕೆ ಧನ್ಯವಾದಗಳು, ನಾನು ನಿಜಕ್ಕೂ ಧನ್ಯ” ಎಂದು ಬರೆದುಕೊಂಡಿದ್ದಾರೆ.