ಸುದೀಪ್ ಅಭಿನಯದ ಬಿಲ್ಲ ರಂಗ ಬಾಷಾ ಚಿತ್ರದ ಚಿತ್ರೀಕರಣ ಮತ್ತೆ ಶುರುವಾಗಿದೆ ಎಂಬ ಸುಳಿವು ಚಿತ್ರತಂಡದಿಂದಲೇ ದೊರಕಿತ್ತು. ನಿರ್ದೇಶಕ ಅನುಪ್ ಭಂಡಾರಿ ‘ಬಿಹೈಂಡ್ ದಿ ಸೀನ್ಸ್’ ಎಂಬ ಕ್ಯಾಪ್ಶನ್ ಅಡಿ ಸಾಮಾಜಿಕ ಜಾಲತಾಣದಲ್ಲಿ ಫೋಟೋವೊಂದನ್ನು ಹಂಚಿಕೊಂಡು ಅಭಿಮಾನಿಗಳ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದ್ದರು. ಇದೀಗ ಮತ್ತೊಂದು ಸುದ್ದಿ ಹರಿದಾಡುತ್ತಿದ್ದು, ಈ ಚಿತ್ರದಲ್ಲಿ ಮಾಲಾಶ್ರೀ ಪ್ರಮುಖ ಪಾತ್ರವೊಂದಕ್ಕೆ ಬಣ್ಣ ಹಚ್ಚಲಿದ್ದಾರೆ ಎನ್ನಲಾಗಿದೆ.
ಯಾವ ಪಾತ್ರ..? ಎಷ್ಟು ಹೊತ್ತು ಇರಲಿದೆ… ಇತ್ಯಾದಿ ಮಾಹಿತಿಗಳನ್ನು ಈಗಲೇ ಬಿಟ್ಟುಕೊಡದ ಚಿತ್ರತಂಡ, ಮಾಲಾಶ್ರೀ ಪಾತ್ರ ಚಿತ್ರದ ಪ್ರಮುಖ ಪಾತ್ರಗಳಲ್ಲೊಂದಾಗಿದೆ ಎಂಬ ವಿಷಯ ಬಲ್ಲ ಮೂಲಗಳಿಂದ ತಿಳಿದುಬಂದಿದೆ.
ಸದ್ಯ ಶುರುವಾಗಿರುವ ಶೂಟಿಂಗ್‌ಗಾಗಿ ಭವ್ಯ ಸೆಟ್ ನಿರ್ಮಿಸಲಾಗಿದೆ. ಇದೊಂದು ಫ್ಯಾಂಟಸಿ ಸಿನಿಮಾವಾಗಿದ್ದು, ಚಿತ್ರದಲ್ಲಿ ತಂತ್ರ, ಯುದ್ಧ ಮತ್ತು ಫ್ಯಾಂಟಸಿ ಅಂಶಗಳು ಪ್ರಮುಖವಾಗಿರಲಿದೆ ಎಂಬುದು ಇತ್ತೀಚೆಗೆ ಹರಿಬಿಟ್ಟ ಫೋಟೋದಲ್ಲಿ ಗೋಚರವಾಗಿತ್ತು.
ಈ ಹಿಂದೆ ಬಿಡುಗಡೆಯಾಗಿದ್ದ ಝಲಕ್‌ನಲ್ಲಿ ಮರುಭೂಮಿ ಪ್ರದೇಶ, ವೈವಿಧ್ಯಮಯ ಸೆಟ್‌ಗಳು, ವಿಶಿಷ್ಟ ಲಾಂಛನಗಳು ಹಾಗೂ ಅತ್ಯಾಧುನಿಕ ಕ್ಯಾಮೆರಾಗಳ ತಾಂತ್ರಿಕತೆ ಬಳಕೆ ಗಮನ ಸೆಳೆದಿತ್ತು. ಹೀಗಾಗಿ ಟೀಸರ್ ಸಹ ದೃಶ್ಯ ವೈಭವದೊಂದಿಗೆ ಗಮನ ಸೆಳೆದಿತ್ತು. ಈ ಚಿತ್ರವನ್ನು ಪ್ರೈಮ್ ಶೋ ಎಂಟರ್‌ಟೈನ್‌ಮೆಂಟ್ ಬ್ಯಾನರ್ ಅಡಿಯಲ್ಲಿ ನಿರ್ಮಿಸುತ್ತಿದ್ದು, ಎಲ್ಲಾ ಅಂದುಕೊಂಡಂತೆ ಆದರೆ ಮುಂದಿನ ವರ್ಷ ಸಿನಿಮಾ ತೆರೆ ಕಾಣಲಿದೆ.
ಸೆಪ್ಟೆಂಬರ್ ೨ಕ್ಕೆ ಟೀಸರ್?: ೨೦೨೪ರ ಸೆಪ್ಟೆಂಬರ್ ೨ರಂದು ಚಿತ್ರದ ಅಧಿಕೃತ ಘೋಷಣೆ ನಡೆದಿತ್ತು. ಸದ್ಯದಲ್ಲೇ ಅದರ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಇದೇ ದಿನ ಟೀಸರ್ ಬಿಡುಗಡೆಯಾಗಬಹುದು ಎಂಬ ನಿರೀಕ್ಷೆ ಅಭಿಮಾನಿಗಳಲ್ಲಿ ಹೆಚ್ಚಾಗಿದೆ. ಆದರೆ ಚಿತ್ರದ ನಿರ್ಮಾಪಕರು ಅಥವಾ ನಿರ್ದೇಶಕರು ಇದುವರೆಗೆ ಟೀಸರ್ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಘೋಷಿಸಿಲ್ಲ.
ವಿಳಂಬದ ಬಳಿಕ ಮತ್ತೆ ಚಿತ್ರೀಕರಣ ಆರಂಭ : ಕೆಲವು ಕಾರಣಗಳಿಂದ ತಾತ್ಕಾಲಿಕವಾಗಿ ವಿಳಂಬವಾಗಿದ್ದ ಚಿತ್ರದ ಚಿತ್ರೀಕರಣ ಈಗ ಪುನರಾರಂಭಗೊಂಡಿದೆ. ನಿರ್ದೇಶಕ ಅನುಪ್ ಭಂಡಾರಿ ಯೋಜಿತ ವೇಳಾಪಟ್ಟಿಯಂತೆ ಶೂಟಿಂಗ್ ಮುಂದುವರಿಸುತ್ತಿದ್ದು, ಪ್ರಮುಖ ದೃಶ್ಯಗಳ ಚಿತ್ರೀಕರಣ ಭರದಿಂದ ಸಾಗುತ್ತಿದೆ.
ಬಹುತಾರಾಗಣದ ಚಿತ್ರ : ಬಿಲ್ಲ ರಂಗ ಬಾಷಾ ಚಿತ್ರದಲ್ಲಿ ಕಿಚ್ಚ ಸುದೀಪ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು, ಕುಬ್ರಾ ಸೇಠ್, ರಾಹುಲ್ ದೇವ್, ಸಾಯಿ ಕುಮಾರ್ ಸೇರಿದಂತೆ ಹಲವು ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
- AI ಕಿಕ್ ರೆಟ್ರೋ ಲುಕ್: ಹಳೇ ನೆನಪುಗಳೊಂದಿಗೆ ಮರುಕಳಿಸಿದ ಆ ದಿನಗಳು!
- ವೈಯಕ್ತಿಕ ದ್ವೇಷದಿಂದ ರಾಜಣ್ಣಗೆ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನ ತಪ್ಪಿಸಲಾಗಿದೆ: ಜೋಶಿ
- ಬೆಂಗಳೂರಿಗರಿಗೆ ಗುಡ್ನ್ಯೂಸ್: BMTC 2.0 ಆ್ಯಪ್ ಲೋಕಾರ್ಪಣೆ, ಪ್ರಯಾಣ ಇನ್ನಷ್ಟು ಸ್ಮಾರ್ಟ್
- ರಾಜ್ಯಪಾಲರನ್ನು ಭೇಟಿಯಾದ ಶ್ರೀ ಅಮರನಾಥೇಶ್ವರ ಮಠದ ಪೀಠಾಧಿಪತಿ
- ಸಚಿವರ ಕುರ್ಚಿಗಿಂತ ಕಾರ್ಮಿಕರ ಸಾಲೇ ದೊಡ್ಡದು! : ಸಚಿವ ಬಸವಂತಪ್ಪ





















