ಶಿವಮೊಗ್ಗ: ಜಾತಿ, ಧರ್ಮದ ಮೇಲೆ ಮತ ತಗೊಂಡು ಕಳ್ಳರು ಯಾರು ಅಂತಾ ಹುಡುಕುತಿದ್ದಾರೆ. ಬಹಳ ಸಾಚಾ ಎನ್ನುವವರು ದೇವರ ಹುಂಡಿಗೆ ಕೈ ಹಾಕಿದ್ದಾರೆ. ರಾಮನ ಹೆಸರಲ್ಲಿ ಕೊಳ್ಳೆ ಹೊಡಿಯುತ್ತಾರಲ್ಲ. ಬಿಜೆಪಿಯವರಿಗೆ ನಾಚಿಕೆ ಆಗಲ್ವಾ, ಎಂದು ಮಾಜಿ ಸಚಿವ ಮಧು ಬಂಗಾರಪ್ಪ ಪ್ರಶ್ನೆ ಮಾಡಿದರು.
ಸುದ್ದಿಗಾರರ ಜತೆ ಮಾತನಾಡಿದ ಅವರು, ನಾನು ಮಾತನಾಡಿದ್ರೆ ಹಿಂದೂ ವಿರೋಧಿಯಾಗುತ್ತೇನೆ. ನಾನು ಹಿಂದೂವಾಗೇ ಹುಟ್ಟಿದೆ. ಎಲ್ಲರನ್ನೂ ಪ್ರೀತಿ ಮಾಡೋಕೆ ತಂದೆ-ತಾಯಿ ಹೇಳಿಕೊಟ್ಟಿದ್ದಾರೆ. ರಾಮ ಮಂದಿರದ ವಿಚಾರ ಹೆಚ್ಚು ಮಾತನಾಡುವುದಿಲ್ಲ ಎಂದರು.
10-15 ದಿನದಲ್ಲಿ ಸಂಪುಟ ವಿಸ್ತರಣೆ ಆಗುತ್ತದೆ. ರಾಹುಲ್ ಗಾಂಧಿ ಅವರು ವಿದೇಶ ಪ್ರವಾಸದಲ್ಲಿ ಇದ್ದಾರೆ. ಹೈಕಮಾಂಡ್ ಕರೆದಾಗ ಮುಖಂಡರು ಹೋಗಿ ಬಂದು, ವಿಸ್ತರಣೆ ಮಾಡ್ತಾರೆ. ಲಾಬಿ ಮಾಡೋದು ತಪ್ಪೇನೂ ಅಲ್ಲ. ಅವರ ಹಕ್ಕು ಎಂದ ಅವರು, ಸಂಪುಟದಲ್ಲಿ ಸ್ಥಾನ ನೀಡುವುದು ಹೈಕಮಾಂಡ್‌ಗೆ ಬಿಟ್ಟ ವಿಚಾರ ಎಂದರು.






















