SK Home Ad
Home ಕ್ರೀಡೆ IND vs AFG Test: ಫಾಲೋ ಆನ್‌ ಭೀತಿಯಲ್ಲಿ ಅಫ್ಘಾನಿಸ್ತಾನ್

IND vs AFG Test: ಫಾಲೋ ಆನ್‌ ಭೀತಿಯಲ್ಲಿ ಅಫ್ಘಾನಿಸ್ತಾನ್

0
86

ಚಂಡೀಗಢ: ಅಫ್ಘಾನಿಸ್ತಾನ್ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಲ್ಲಿ ಟೀಮ್‌ ಇಂಡಿಯಾ ಬಿಗಿ ಹಿಡಿತವನ್ನು ಸಾಧಿಸಿದೆ. ಅಫ್ಘಾನಿಸ್ತಾನ್ ಫಾಲೋ ಆನ್‌ ಭೀತಿಯನ್ನು ಎದುರಿಸುವಂತಾಗಿದೆ.

ಮುಲ್ಲನ್​ಪುರ್​ನ ಮಹಾರಾಜ ಯಾದವೀಂದ್ರ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ದುಕೊಂಡ ನಾಯಕ ಶುಭಮನ್‌ ಗಿಲ್‌ ನೇತೃತ್ವದ ಭಾರತ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 8 ವಿಕೆಟ್‌ಗಳಿಗೆ 564 ರನ್‌ ಗಳಿಸಿ ಡಿಕ್ಲೇರ್‌ ಮಾಡಿಕೊಂಡಿತು.

ಬಳಿಕ ತನ್ನ ಮೊದಲ ಇನ್ನಿಂಗ್ಸ್‌ ಆರಂಭಿಸಿದ ಅಫ್ಘಾನಿಸ್ತಾನ್‌ ಎರಡನೇ ದಿನದಾಟದ ಅಂತ್ಯಕ್ಕೆ 39.5 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 113 ರನ್‌ಗಳನ್ನು ಗಳಿಸಿ ಫಾಲೋ ಆನ್‌ ಭೀತಿಯನ್ನು ಎದುರಿಸುತ್ತಿದೆ.

ಅಫ್ಘಾನಿಸ್ತಾನ್‌ ಪರ ರಹಮತ್ ಶಾ ಅಜೇಯ 43 ರನ್‌ಗಳಿಸಿ ಸೋಮವಾರ ಬ್ಯಾಟಿಂಗ್‌ ಮುಂದುವರಿಸಲಿದ್ದಾರೆ. ರಹಮತ್‌ ಹೊರತುಪಡಿಸಿದರೆ ಯಾವೊಬ್ಬ ಆಟಗಾರನೂ 20 ರನ್‌ಗಳ ಗಡಿ ದಾಟದಿರುವುದು ಹಿನ್ನಡೆಗೆ ಪ್ರಮುಖ ಕಾರಣವಾಯಿತು.

ಪಾದರ್ಪಣೆ ಪಂದ್ಯದಲ್ಲಿಯೇ ಭಾರತದ ಮಾನವ್ ಸುತಾರ್ ಭರ್ಜರಿ ಬೌಲಿಂಗ್‌ ದಾಳಿ ನಡೆಸಿದರು. ಕೇವಲ 21 ರನ್‌ಗಳಿಗೆ ಅಫ್ಘಾನಿಸ್ತಾನ್‌ದ ಪ್ರಮುಖ ಮೂರು ವಿಕೆಟ್‌ಗಳನ್ನು ಕಬಳಿಸುವ ಮೂಲಕ ಮಿಂಚಿದರು.

ಇನ್ನು ಪ್ರಸಿದ್ಧ ಕೃಷ್ಣ 27 ರನ್‌ಗಳಿಗೆ 2 ವಿಕೆಟ್‌ ಪಡೆದರು. ಒಟ್ಟಾರೆ ಭಾರತದ ಅತ್ಯುತ್ತಮ ಬೌಲಿಂಗ್‌ ದಾಳಿಗೆ ಅಫ್ಘಾನ್‌ ಬ್ಯಾಟ್ಸ್‌ಮನ್‌ಗಳು ರನ್‌ ಗಳಿಸಲು ಪರದಾಡುವಂತಾಯಿತು.

ಇದಕ್ಕೂ ಮುನ್ನ ಶನಿವಾರ 103 ರನ್‌ಗಳಿಸಿ ಅಜೇಯರಾಗಿ ಉಳಿದಿದ್ದ ಶುಭಮನ್‌ ಗಿಲ್‌ ಭಾನುವಾರ 23 ರನ್‌ಗಳಿಸಿ ವಿಕೆಟ್‌ ಒಪ್ಪಿಸಿದರು. ರಿಷಭ್‌ ಪಂತ್‌ ಕೂಡ ಇಂದು 31 ರನ್‌ಗಳು ಸೇರಿದಂತೆ ಒಟ್ಟು 81 ರನ್‌ಗಳಿಸಿ ಹೊರನಡೆದರು.

ವಾಷಿಂಗ್ಟನ್‌ ಸುಂದರ್‌ (52) ಅರ್ಧಶತಕ ಗಳಿಸಿ ಔಟಾದರು. ಉಳಿದಂತೆ ಧ್ರುವ್ ಜುರೆಲ್ (19), ಮಾನವ್ ಸುತಾರ್ (28) ಉಪಯುಕ್ತ ರನ್‌ ಕಾಣಿಕೆ ನೀಡಿದರು. ಕೊನೆಯಲ್ಲಿ ಮೊಹಮ್ಮದ್‌ ಸಿರಾಜ್‌ 22 ರನ್‌ಗಳಿಸಿ ಔಟಾಗುತ್ತಿದ್ದಂತೆ ನಾಯಕ ಗಿಲ್‌ ಇನ್ನಿಂಗ್ಸ್‌ ಡಿಕ್ಲೇರ್‌ ಮಾಡಿಕೊಂಡರು.

ಅಫ್ಘಾನಿಸ್ತಾನ ಪರ ಮೊಹಮ್ಮದ್ ಸಲೀಮ್ ಸಫಿ 6 ವಿಕೆಟ್‌ ಉರುಳಿಸುವ ಮೂಲಕ ಭಾರತದ ರನ್‌ ವೇಗಕ್ಕೆ ಕಡಿವಾಣ ಹಾಕಿದ್ದು, ಬ್ಯಾಟ್ಸ್‌ಮನ್‌ಗಳಿಗೆ ಪೆವಿಲಿಯನ್‌ ತೋರಿಸುವಲ್ಲಿ ಯಶಸ್ಸು ಕಂಡರು.