ಹೈದರಾಬಾದ್: ಟ್ರಾವಿಸ್ ಹೆಡ್ ಅರ್ಧಶತಕದ ಮಧ್ಯೆಯೂ ಕೋಲ್ಕತ್ತಾ ಬೌಲರ್‌ಗಳ ಸಂಘಟಿತ ಪ್ರದರ್ಶನದಿಂದಾಗಿ ಸನ್‌ರೈಸರ್ಸ್ ಹೈದರಾಬಾದ್ ತಂಡ 165 ರನ್‌ಗಳಿಗೆ ಆಲೌಟ್ ಆಯಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಸನ್‌ರೈಸರ್ಸ್ ಹೈದರಾಬಾದ್ ಕೇವಲ 19 ಓವರ್‌ಗಳಲ್ಲಿಯೇ ತನ್ನೆಲ್ಲ ವಿಕೆಟ್ ಕಳೆದುಕೊಳ್ಳುವ ಮೂಲಕ ಕೆಕೆಆರ್‌ಗೆ 166 ರನ್ ಗೆಲುವಿನ ಗುರಿ ನೀಡಿದೆ.
ಹೈದರಾಬಾದ್ ಸ್ಫೋಟಕ ಆರಂಭವನ್ನೇ ಮಾಡಿತಾದರೂ ಬಹುಬೇಗನೆ ಅಭಿಷೇಕ್ ಶರ್ಮಾ (15) ವಿಕೆಟ್ ಕಳೆದುಕೊಂಡಿತು. ಕೇವಲ 8.5 ಓವರ್‌ಗಳಲ್ಲಿಯೇ 105 ರನ್‌ಗಳಿಸಿ ಬೃಹತ್ ಮೊತ್ತ ಪೇರಿಸುವ ಲೆಕ್ಕಾಚಾರದಲ್ಲಿದ್ದ ಹೈದರಾಬಾದ್ ತಂಡಕ್ಕೆ ವರುಣ ಚಕ್ರವರ್ತಿ ಅಡ್ಡಿಯಾದರು.
ಟ್ರಾವಿಸ್ ಹೆಡ್ ಕೇವಲ 28 ಎಸೆತದಲ್ಲಿ 9 ಬೌಂಡರಿ, 3 ಸಿಕ್ಸರ್‌ಗಳ ನೆರವಿನಿಂದ 61 ರನ್‌ಗಳಿಸಿ ವರುಣ ಚಕ್ರವರ್ತಿ ಎಸೆತದಲ್ಲಿ ಕ್ಯಾಮರೂನ್ ಗ್ರೀನ್‌ಗೆ ಕ್ಯಾಚ್ ನೀಡಿ ಔಟಾದರು.
ಹೆಡ್ ಹೊರನಡೆಯುತ್ತಿದ್ದಂತೆ ಒಬ್ಬರ ಹಿಂದೆ ಒಬ್ಬರಂತೆ ಹೈದರಾಬಾದ್ ಆಟಗಾರರು ಪೆವಿಲಿಯನ್ ಪರೇಡ್ ನಡೆಸ ತೊಡಗಿದರು. ಇದರ ಮೊದಲ ವಿಕೆಟ್ ಬಳಿಕ ಕ್ರಿಸ್‌ಗೆ ಬಂದಿದ್ದ ಇಶಾನ್ ಕಿಶಾನ್ 29 ಎಸೆತದಲ್ಲಿ 4 ಬೌಂಡರಿ, 2 ಸಿಕ್ಸರ್ ಸೇರಿದಂತೆ 42 ರನ್‌ಗಳಿಸಿ 7ನೇಯವರಾಗಿ ಔಟಾದರು.
ಸನ್‌ರೈಸರ್ಸ್ ತಂಡದ ಆರು ಆಟಗಾರರನ್ನು ಒಂದಂಕಿಯ ಮೊತ್ತವನ್ನೂ ದಾಟದಂತೆ ತಡೆದರೆ, ಹೆನ್ರಿಕ್ ಕ್ಲಾಸೆನ್ (11), ಪ್ಯಾಟ್ ಕಮ್ಮಿನ್ಸ್ (10) ಅವರನ್ನು ಬಹುಬೇಗನೆ ಔಟ್ ಮಾಡುವಲ್ಲಿ ಕೆಕೆಆರ್ ಬೌಲರ್‌ಗಳು ಯಶಸ್ವಿಯಾದರು.
ಕೋಲ್ಕತ್ತಾ ನೈಟ್ ರೈಡರ್ಸ್ ಪರ ವರುಣ್ ಚಕ್ರವರ್ತಿ 36ಕ್ಕೆ 3 ವಿಕೆಟ್ ಪಡೆದರೆ, ಕಾರ್ತಿಕ್ ತ್ಯಾಗಿ ಮತ್ತು ಸುನಿಲ್ ನರೈನ್ ತಲಾ 2 ವಿಕೆಟ್, ಹಾಗೂ ಅನುಕೂಲ್ ರಾಯ್, ವೈಭವ್ ಅರೋರಾ, ಕ್ಯಾಮರೂನ್ ಗ್ರೀನ್ ತಲಾ 1 ವಿಕೆಟ್ ಪಡೆದರು.























