ಭಾರತೀಯ ಅಥ್ಲೆಟಿಕ್ಸ್‌ಗೆ ಹೊಸ ರತ್ನ; ಪೂಜಾ ಅಮೋಘ ಸಾಧನೆ
U20 ಏಷ್ಯನ್ ಅಥ್ಲೆಟಿಕ್ಸ್‌ನಲ್ಲಿ ಭಾರತದ ಯುವ ಅಥ್ಲೀಟ್ ಪೂಜಾ ಸಿಂಗ್ ಮತ್ತೊಮ್ಮೆ ಅದ್ಭುತ ಸಾಧನೆ ಮಾಡಿ ದೇಶದ ಗಮನ ಸೆಳೆದಿದ್ದಾರೆ. ಮಹಿಳೆಯರ ಹೈಜಂಪ್ ಫೈನಲ್‌ನಲ್ಲಿ 1.91 ಮೀಟರ್ ಎತ್ತರವನ್ನು ಯಶಸ್ವಿಯಾಗಿ ದಾಟುವ ಮೂಲಕ ಅವರು ತಮ್ಮದೇ ಆದ U20 ರಾಷ್ಟ್ರೀಯ ದಾಖಲೆಯನ್ನು ಮತ್ತಷ್ಟು ಸುಧಾರಿಸಿಕೊಂಡಿದ್ದಾರೆ.
ಈ ಸಾಧನೆಯೊಂದಿಗೆ ಪೂಜಾ ಭಾರತೀಯ ಅಥ್ಲೆಟಿಕ್ಸ್ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆದಿದ್ದಾರೆ. ಕೇವಲ U20 ವಿಭಾಗದಲ್ಲೇ ಸ್ಪರ್ಧಿಸುತ್ತಿರುವ ಅವರು, ಹಿರಿಯರನ್ನು ಸೇರಿಸಿ ಎಲ್ಲಾ ವಯೋಮಾನದ ವಿಭಾಗಗಳಲ್ಲಿ ಭಾರತದ ಸಾರ್ವಕಾಲಿಕ ಎರಡನೇ ಶ್ರೇಷ್ಠ ಮಹಿಳಾ ಹೈಜಂಪರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಇದನ್ನೂ ಓದಿ: ವಿಶ್ವಕಪ್‌ಗೂ ಮುನ್ನ: ಚೊಚ್ಚಲ ಪಂದ್ಯದಲ್ಲೇ ಮಿಂಚಿದ ನಂದಿನಿ
ಪೂಜಾ ದಾಖಲಿಸಿದ 1.91 ಮೀಟರ್ ಜಿಗಿತವು ಭಾರತದ ಹಿರಿಯ ರಾಷ್ಟ್ರೀಯ ದಾಖಲೆಯಿಂದ ಕೇವಲ 1 ಸೆಂ.ಮೀ ಕಡಿಮೆ ಎನ್ನುವುದು ಮತ್ತಷ್ಟು ವಿಶೇಷವಾಗಿದೆ. ಈ ಸಾಧನೆ ಭಾರತೀಯ ಅಥ್ಲೆಟಿಕ್ಸ್ ವಲಯದಲ್ಲಿ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ.
ಹೈಜಂಪ್ ಸ್ಪರ್ಧೆಯಲ್ಲಿ ಆತ್ಮವಿಶ್ವಾಸದೊಂದಿಗೆ ಕಣಕ್ಕಿಳಿದ ಪೂಜಾ, ಆರಂಭದಿಂದಲೇ ಉತ್ತಮ ಲಯದಲ್ಲಿ ಕಾಣಿಸಿಕೊಂಡರು. ಪ್ರತಿ ಹಂತದಲ್ಲೂ ಒತ್ತಡವನ್ನು ಸಮರ್ಥವಾಗಿ ನಿಭಾಯಿಸಿದ ಅವರು ಅಂತಿಮವಾಗಿ 1.91 ಮೀಟರ್ ಎತ್ತರ ದಾಟಿ ಹೊಸ ಇತಿಹಾಸ ನಿರ್ಮಿಸಿದರು.
ಇದನ್ನೂ ಓದಿ: IPLನಲ್ಲಿ ಸ್ಮಾರ್ಟ್ ಸನ್‌ಗ್ಲಾಸ್ ನಿಷೇಧಿಸಿದ BCCI
ಕ್ರೀಡಾ ತಜ್ಞರ ಪ್ರಕಾರ, ಇಷ್ಟು ಚಿಕ್ಕ ವಯಸ್ಸಿನಲ್ಲೇ ಪೂಜಾ ಸಾಧಿಸಿರುವ ಮಟ್ಟ ಅತ್ಯಂತ ಅಪರೂಪದ ಸಂಗತಿ. ಭಾರತದ ಪರ ಕೆಲವೇ ಕೆಲವು ಮಹಿಳಾ ಹೈಜಂಪರ್‌ಗಳು ಮಾತ್ರ ಈ ಮಟ್ಟದ ಸಾಧನೆ ಮಾಡಿರುವ ಹಿನ್ನೆಲೆ, ಪೂಜಾ ಭವಿಷ್ಯದ ದೊಡ್ಡ ತಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಈ ಸಾಧನೆಯೊಂದಿಗೆ ಇದೀಗ ಎಲ್ಲರ ದೃಷ್ಟಿ ಭಾರತದ ಹಿರಿಯ ರಾಷ್ಟ್ರೀಯ ದಾಖಲೆಯತ್ತ ನೆಟ್ಟಿದೆ. ಪೂಜಾ ಅವರ ಇತ್ತೀಚಿನ ಫಾರ್ಮ್ ಗಮನಿಸಿದರೆ ಆ ದಾಖಲೆಯೂ ಶೀಘ್ರದಲ್ಲೇ ಮುರಿಯುವ ಸಾಧ್ಯತೆ ಇದೆ ಎಂದು ಕ್ರೀಡಾ ವಲಯದಲ್ಲಿ ವಿಶ್ಲೇಷಣೆ ನಡೆಯುತ್ತಿದೆ.
ಇದನ್ನೂ ಓದಿ: ವಿಶ್ವಕಪ್‌ಗೂ ಮುನ್ನ: ಚೊಚ್ಚಲ ಪಂದ್ಯದಲ್ಲೇ ಮಿಂಚಿದ ನಂದಿನಿ
ಭಾರತೀಯ ಅಥ್ಲೆಟಿಕ್ಸ್‌ಗೆ ಹೊಸ ಭರವಸೆಯಾಗಿ ಹೊರಹೊಮ್ಮಿರುವ ಪೂಜಾ, ತಮ್ಮ ನಿರಂತರ ಸಾಧನೆಗಳ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲೂ ಭಾರತದ ಕೀರ್ತಿಯನ್ನು ಎತ್ತಿಹಿಡಿಯುತ್ತಿದ್ದಾರೆ.






















