SK Home Ad
Home ನಮ್ಮ ಜಿಲ್ಲೆ ಬೆಳಗಾವಿ ಪತಿಯನ್ನು ಉಳಿಸಲು ಹೋದ ಪತ್ನಿಯೂ ಬಲಿ: ವಿದ್ಯುತ್ ಅವಘಡಕ್ಕೆ ವೃದ್ಧ ದಂಪತಿ ಸಾವು

ಪತಿಯನ್ನು ಉಳಿಸಲು ಹೋದ ಪತ್ನಿಯೂ ಬಲಿ: ವಿದ್ಯುತ್ ಅವಘಡಕ್ಕೆ ವೃದ್ಧ ದಂಪತಿ ಸಾವು

0
40

ಬೆಳಗಾವಿ: ಮನೆಯ ಮುಂದಿನ ತೋಟದಲ್ಲಿನ ತೆಂಗಿನಕಾಯಿ ಕೊಯ್ಯುವಾಗ ಕಬ್ಬಿಣದ ಪೈಪ್ ಹೈವೋಲ್ವೇಜ್ ವಿದ್ಯುತ್ ತಂತಿಗೆ ತಗುಲಿದ ವೇಳೆ ಪತಿಯನ್ನು ಉಳಿಸಲು ಹೋದಾಗ ಪತಿ, ಪತ್ನಿ ಇಬ್ಬರೂ ಅಸುನೀಗುವ ಮೂಲಕ ಸಾವಿನಲ್ಲೂ ವೃದ್ಧ ದಂಪತಿ ಒಂದಾದ ಘಟನೆ ಜಿಲ್ಲೆಯ ಖಾನಾಪುರ ತಾಲೂಕಿನ ಸಂಗರಗಾಳಿ ಗ್ರಾಮದಲ್ಲಿ ಶನಿವಾರ ನಡೆದಿದೆ.

ತೋಟದಲ್ಲಿ ತೆಂಗಿನಕಾಯಿ ಕೊಯ್ಯುವಾಗ ಕಬ್ಬಿಣದ ಪೈಪ್ ಹೈವೋಲ್ವೇಜ್ ವಿದ್ಯುತ್ ತಂತಿಗೆ ತಗುಲಿದ ಪರಿಣಾಮ ಪತಿ-ಪತ್ನಿ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಶನಿವಾರ ಮಧ್ಯಾಹ್ನ 12.30ರ ಸುಮಾರಿಗೆ ನಡೆದಿದೆ.

ಈ ದುರ್ಘಟನೆಯಲ್ಲಿ ಶಾಹು ಸಾವೇರ ಮಸ್ಕರಿನ್ (70) ಹಾಗೂ ಅವರ ಪತ್ನಿ ಮಿಲಾಗ್ರಾನ್ ಶಾಹು ಮಸ್ಕರಿನ್ (65) ಮೃತಪಟ್ಟ ದುರ್ಧೈವಿಗಳಾಗಿದ್ದಾರೆ. ಲಭ್ಯ ಮಾಹಿತಿ ಪ್ರಕಾರ, ಪತಿ ಶಾಲು ಮಸ್ಕರಿನ್ ಅವರು ತೆಂಗಿನಕಾಯಿಯನ್ನು ಕೊಯ್ಯುವಾಗ ಆಯತಪ್ಪಿ ಅವರ ಕೈಯಲ್ಲಿದ್ದ ಕಬ್ಬಿಣದ ಪೈಪ್ ಮರದ ಸಮೀಪ ಹಾದು ಹೋಗಿದ್ದ ಹೆಸ್ಕಾಂನ 11 ಸಾವಿರ ವೋಲ್ಟ್ ಹೈವೋಲ್ವೇಜ್ ವಿದ್ಯುತ್ ತಂತಿಗೆ ತಗುಲಿದೆ. ಇದರಿಂದ ಅವರಿಗೆ ತೀವ್ರ ವಿದ್ಯುತ್ ಶಾಕ್ ತಗುಲಿ ಸ್ಥಳದಲ್ಲೇ ಮೃತರಾದರು.

ಪತಿಗೆ ವಿದ್ಯುತ್ ಶಾಕ್ ತಗುಲಿರುವುದನ್ನು ಕಂಡ ಅವರ ಪತ್ನಿ ತಕ್ಷಣವೇ ಅವರನ್ನು ರಕ್ಷಿಸಲು ಮುಂದಾಗಿದ್ದಾರೆ. ಆದರೆ, ಈ ವೇಳೆ ಅವರಿಗೂ ವಿದ್ಯುತ್ ಶಾಕ್ ತಗುಲಿದೆ, ದುರದೃಷ್ಟವಶಾತ್ ಇಬ್ಬರೂ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.