ಬೆಂಗಳೂರು: ವಿರಾಟ್ ಕೊಹ್ಲಿ ಮತ್ತು ದೇವದತ್ತ ಪಡಿಕ್ಕಲ್ ಅವರ ಅತ್ಯುತ್ತಮ ಬ್ಯಾಟಿಂಗ್‌ನಿಂದಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗುಜರಾತ್ ವಿರುದ್ಧ ಭರ್ಜರಿ ಜಯ ಸಾಧಿಸಿದೆ.
ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಗುಜರಾತ್ ನೀಡಿದ್ದ 206 ರನ್‌ಗಳ ಗುರಿಯನ್ನು 7 ಎಸೆತಗಳು ಬಾಕಿ ಇರುವಂತಯೇ ಆರ್ ಸಿಬಿ 5 ವಿಕೆಟ್‌ಗಳ ಜಯ ಸಾಧಿಸಿದೆ.
ಮೂರನೇ ಓವರ್‌ನ ಕೊನೆಯ ಎಸೆತದಲ್ಲಿ ಜೋಕೊಬ್ ಬೆಥೆಲ್ (14) ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಬೆಂಗಳೂರು ತಂಡಕ್ಕೆ ವಿರಾಟ್ ಕೊಹ್ಲಿ (81), ದೇವದತ್ತ ಪಡಿಕ್ಕಲ್ (55) ಜೋಡಿ 117 ರನ್‌ಗಳ ಜತೆಯಾಟ ನಡೆಸಿ ತಂಡವನ್ನು ಗಲುವಿನತ್ತ ಕೊಂಡೊಯ್ದರು.
ಕೊನೆಯಲ್ಲಿ ಕೃನಾಲ್ ಪಾಂಡ್ಯ ಕೇವಲ 12 ಎಸೆತದಲ್ಲಿ 3 ಬೌಂಡರಿ, 1 ಸಿಕ್ಸರ್ ಸೇರಿದಂತೆ ಅಜೇಯ 23 ರನ್ ಸಿಡಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.
ಇದಕ್ಕೂ ಮುನ್ನ ಗುಜರಾತ್‌ಗೆ ಆರಂಭದಲ್ಲಿಯೇ ಉತ್ತಮ ಅಡಿಪಾಯ ಹಾಕಿದ ಆರಂಭಿಕ ಜೋಡಿ ಸಾಯಿ ಸುದರ್ಶನ ಮತ್ತು ಶುಭಮನ್ ಗಿಲ್ 12.4 ಓವರ್‌ಗಳಲ್ಲಿ 128 ರನ್ ಜತೆಯಾಟ ನಡೆಸಿತು.
ಸುಯಶ್ ಶರ್ಮಾ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಮುಂದಾಗಿ ಶುಭಮನ್ ಗಿಲ್ (32) ಔಟಾದರು. ಸಾಯಿ ಸುದರ್ಶನ ಕೇವಲ 58 ಎಸೆತದಲ್ಲಿ 11 ಬೌಂಡರಿ, 5 ಸಿಕ್ಸರ್ ನೆರವಿನಿಂದ 100 ರನ್ ಹೊಡೆದು ಹ್ಯಾಜಲ್‌ವುಡ್ ಎಸೆತದಲ್ಲಿ ಅವರಿಗೆ ಕ್ಯಾಚ್ ನೀಡಿ ಹೊರನಡೆದರು.
ಜೋಸ್ ಬಟ್ಲರ್ ಕೇವಲ 25 ರನ್ ಗಳಿಸಿ ಔಟಾದರು. ವಾಷಿಂಗ್ಟನ್ ಸುಂದರ್ ಅಜೇಯ 19 ಮತ್ತು ಜೇಸನ್ ಹೋಲ್ಡರ್ ಅಜೇಯ 23 ರನ್‌ಗಳ ಉಪಯುಕ್ತ ಕಾಣಿಕೆ ನೀಡಿ ತಂಡದ ಮೊತ್ತವನ್ನು ಹೆಚ್ಚಿಸಿದರು.
ಆರ್‌ಸಿಬಿ ಪರ ಭುವನೇಶ್ವರ್ ಕುಮಾರ್ 31ಕ್ಕೆ 1, ಸುಯಶ್ ಶರ್ಮಾ 36ಕ್ಕೆ 1 ಮತ್ತು ಜೋಶ್ ಹ್ಯಾಜಲ್‌ವುಡ್ 40ಕ್ಕೆ 1 ವಿಕೆಟ್ ಪಡೆದರು.























