SK Home Ad
Home ಕ್ರೀಡೆ IPL 2026: ಎಲಿಮಿನೇಟರ್ ಪಂದ್ಯ, ಟಾಸ್‌ ಗೆದ್ದ ಹೈದರಾಬಾದ್‌

IPL 2026: ಎಲಿಮಿನೇಟರ್ ಪಂದ್ಯ, ಟಾಸ್‌ ಗೆದ್ದ ಹೈದರಾಬಾದ್‌

0
6

ಮುಲ್ಲನ್‌ಪುರ: ಇಂಡಿಯನ್ ಪ್ರೀಮಿಯರ್ ಲೀಗ್ 2026ರ ಪಂದ್ಯಾವಳಿಯ ಎಲಿಮಿನೇಟರ್ ಪಂದ್ಯದಲ್ಲಿಂದು ಸನ್‌ರೈಸರ್ಸ್‌ ಹೈದರಾಬಾದ್‌ ತಂಡ ರಾಜಸ್ಥಾನ ರಾಯಲ್ಸ್‌ ವಿರುದ್ಧ ಟಾಸ್‌ನಲ್ಲಿ ಗೆಲುವು ಸಾಧಿಸಿದೆ.

ಮುಲ್ಲನ್‌ಪುರದ ಮಹಾರಾಜ ಯಾದವೀಂದ್ರ ಸಿಂಗ್ ಕ್ರೀಡಾಂಗಣದಲ್ಲಿ ಈ ಹೈವೋಲ್ಟೇಜ್ ಪಂದ್ಯದಲ್ಲಿ ಸನ್‌ರೈಸರ್ಸ್‌ ಟಾಸ್‌ ಗೆದ್ದು ಮೊದಲು ಫೀಲ್ಡಿಂಗ್‌ ಆಯ್ದುಕೊಂಡಿದೆ.

ಅಂಕಪಟ್ಟಿಯಲ್ಲಿ 18 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿರುವ ಹೈದರಾಬಾದ್‌ಗೆ 16 ಅಂಕಗಳೊಂದಿಗೆ ನಾಲ್ಕನೇ ಸ್ಥಾನ ಪಡೆದಿರುವ ರಾಯಲ್ಸ್‌ ಸವಾಲು ಹಾಕಲಿದೆ.

ಪ್ಯಾಟ್ ಕಮಿನ್ಸ್ ನೇತೃತ್ವದ ಹೈದ್ರಾಬಾದ್, ಅಭಿಷೇಕ್ ಶರ್ಮಾ ಮತ್ತು ಹೆನ್ರಿಚ್ ಕ್ಲಾಸೆನ್ ಅವರ ಸ್ಫೋಟಕ ಬ್ಯಾಟಿಂಗ್ ಬಲ ನಂಬಿದೆ. ಇತ್ತ ರಿಯಾನ್ ಪರಾಗ್ ಸಾರಥ್ಯದ ರಾಜಸ್ಥಾನ್ ತಂಡಕ್ಕೆ ಯಶಸ್ವಿ ಜೈಸ್ವಾಲ್ ಹಾಗೂ ಜೋಫ್ರಾ ಆರ್ಚರ್ ಅವರ ಬೌಲಿಂಗ್ ಪ್ರಮುಖ ಅಸ್ತ್ರವಾಗಿದೆ.

ಇತ್ತಂಡಗಳಿಗೂ ಮುಂದಿನ ಹಂತಕ್ಕೆ ಹೋಗಲು ಗೆಲುವು ಅನಿವಾರ್ಯವಾಗಿದ್ದು, ಈ ಪಂದ್ಯದಲ್ಲಿ ಸೋತ ತಂಡ ಟೂರ್ನಿಯಿಂದಲೇ ಹೊರಬೀಳಲಿದೆ. ಗೆದ್ದ ತಂಡ ಕ್ವಾಲಿಫೈಯರ್-2 ತಲುಪಲಿದೆ.