SK Home Ad
Home ಕ್ರೀಡೆ Asia Cup Rising Stars: ಒಂದು ಕಾಲದಲದಲ್ಲಿ ಭಾರತ U19 ತಂಡದ ಉಪನಾಯಕ ಇಂದು  ಭಾರತ...

Asia Cup Rising Stars: ಒಂದು ಕಾಲದಲದಲ್ಲಿ ಭಾರತ U19 ತಂಡದ ಉಪನಾಯಕ ಇಂದು  ಭಾರತ ‘ಎ’ ವಿರುದ್ಧವೇ ಸೆಂಚುರಿ, ಭಾವುಕನಾದ ಆಟಗಾರ

0
25

Asia Cup Rising Stars:  ದೋಹಾದಲ್ಲಿ ನಡೆಯುತ್ತಿರುವ ‘ರೈಸಿಂಗ್ ಸ್ಟಾರ್ಸ್ ಏಷ್ಯಾ ಕಪ್’ 2026ರ ಮಹತ್ವದ ಪಂದ್ಯದಲ್ಲಿ ತಿಲಕ್ ವರ್ಮಾ ನೇತೃತ್ವದ ಭಾರತ ‘ಎ’ ತಂಡದ ವಿರುದ್ಧ ಯುನೈಟೆಡ್ ಅರಬ್ ಎಮಿರೇಟ್ಸ್ (UAE) ತಂಡದ ಅನುಭವಿ ಬ್ಯಾಟರ್ ಹರ್‌ಪ್ರೀತ್ ಸಿಂಗ್ ಭಾಟಿಯಾ ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ.

ಮಂಗಳವಾರ ನಡೆದ ಈ ಪಂದ್ಯದಲ್ಲಿ ಆರಂಭಿಕ ಆಘಾತಕ್ಕೆ ಒಳಗಾಗಿದ್ದ ಯುಎಇ ತಂಡಕ್ಕೆ ಆಸರೆಯಾದ 35 ವರ್ಷದ ಹರ್‌ಪ್ರೀತ್, 40ನೇ ಓವರ್‌ನಲ್ಲಿ ಭಾರತದ ವೇಗಿ ಹರ್ಷಿತ್ ರಾಣಾ ಬೌಲಿಂಗ್‌ನಲ್ಲಿ ಭರ್ಜರಿ ಸಿಕ್ಸರ್ ಸಿಡಿಸುವ ಮೂಲಕ 120 ಎಸೆತಗಳಲ್ಲಿ ತಮ್ಮ ಶತಕ ಪೂರೈಸಿದರು. ಬಳಿಕ 130 ರನ್ ಗಳಿಸಿ ಔಟಾದ ಅವರ ಇನಿಂಗ್ಸ್ ನೆರವಿನಿಂದ ಯುಎಇ 249 ರನ್‌ಗಳ ಸವಾಲಿನ ಮೊತ್ತ ಕಲೆಹಾಕಿತು.

ಭಾರತೀಯ ಕ್ರಿಕೆಟ್‌ನಿಂದ ಯುಎಇ ತಂಡದವರೆಗೆ ರೋಚಕ ಪಯಣ: ಭಾರತದಲ್ಲೇ ಹುಟ್ಟಿ ಬೆಳೆದ ಹರ್‌ಪ್ರೀತ್ ಸಿಂಗ್ ಭಾಟಿಯಾ, 2009ರ ಆಸ್ಟ್ರೇಲಿಯಾ ಪ್ರವಾಸದಲ್ಲಿ ಭಾರತ ಅಂಡರ್-19 ತಂಡದ ಉಪನಾಯಕರಾಗಿ ಕಾರ್ಯನಿರ್ವಹಿಸಿದ್ದರು. 2010ರ ಅಂಡರ್-19 ವಿಶ್ವಕಪ್‌ನಲ್ಲಿ ಕೆ.ಎಲ್. ರಾಹುಲ್ ಮತ್ತು ಮಯಾಂಕ್ ಅಗರ್ವಾಲ್ ಅವರೊಂದಿಗೆ ಭಾರತ ತಂಡವನ್ನು ಪ್ರತಿನಿಧಿಸಿದ್ದರು.

 ದೇಶೀಯ ಕ್ರಿಕೆಟ್‌ನಲ್ಲಿ ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢ ಪರ ಸಾವಿರಾರು ರನ್ ಕಲೆಹಾಕಿದ್ದ ಹರ್‌ಪ್ರೀತ್, ಐಪಿಎಲ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್, ಪುಣೆ ವಾರಿಯರ್ಸ್ ಹಾಗೂ 2023-24ರಲ್ಲಿ ಪಂಜಾಬ್ ಕಿಂಗ್ಸ್ ಪರ ಆಡಿದ್ದರು.

ಭಾರತ ರಾಷ್ಟ್ರೀಯ ತಂಡದಲ್ಲಿ ಅವಕಾಶ ಸಿಗದ ಕಾರಣ 2026ರಲ್ಲಿ ಯುಎಇ ಪೌರತ್ವ ಪಡೆದ ಅವರು, ಏಪ್ರಿಲ್‌ನಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಇದೀಗ ತಾವು ಪ್ರತಿನಿಧಿಸಿದ್ದ ದೇಶದ ತಂಡದ ವಿರುದ್ಧವೇ ಶತಕ ಸಿಡಿಸಿ ಹೆಲ್ಮೆಟ್ ತೆಗೆದು ಸಂಭ್ರಮಿಸಿದ ಕ್ಷಣ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆದಿದೆ.