Home Advertisement
Home ಕ್ರೀಡೆ ಬಿಸಿಸಿಐ 2026-270 ಸಾಲಿನ ರಣಜಿ ಟ್ರೋಫಿ ಸೇರಿದಂತೆ ದೇಶಿ ಕ್ರಿಕೆಟ್ ವೇಳಾಪಟ್ಟಿ ಪ್ರಕಟ‌

ಬಿಸಿಸಿಐ 2026-270 ಸಾಲಿನ ರಣಜಿ ಟ್ರೋಫಿ ಸೇರಿದಂತೆ ದೇಶಿ ಕ್ರಿಕೆಟ್ ವೇಳಾಪಟ್ಟಿ ಪ್ರಕಟ‌

0
3

ನವದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಮುಂಬರುವ 2026-27ರ ಸಾಲಿನ ದೇಶೀಯ ಕ್ರಿಕೆಟ್ ಋತುವಿನ ಸಮಗ್ರ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಬಾರಿಯ ಕ್ರಿಕೆಟ್ ಸಂಭ್ರಮವು ಆಗಸ್ಟ್ 23 ರಿಂದ ‘ದುಲೀಪ್ ಟ್ರೋಫಿ’ಯೊಂದಿಗೆ ಅದ್ಧೂರಿಯಾಗಿ ಚಾಲನೆ ಪಡೆಯಲಿದೆ.

ಪುರುಷರ ವಿಭಾಗ: ಪ್ರತಿಷ್ಠಿತ ರಣಜಿ ಟ್ರೋಫಿ (ಎಲೈಟ್ ಮತ್ತು ಪ್ಲೇಟ್) ಪಂದ್ಯಾವಳಿಯು ಅಕ್ಟೋಬರ್ 11 ರಿಂದ ಪ್ರಾರಂಭವಾಗಲಿದ್ದು, ಮಾರ್ಚ್ 2027ರವರೆಗೆ ನಡೆಯಲಿದೆ. ಇದಕ್ಕೂ ಮುನ್ನ ಅಕ್ಟೋಬರ್ 1 ರಂದು ‘ಇರಾನಿ ಕಪ್’ ಪಂದ್ಯ ಜರುಗಲಿದೆ. ಇನ್ನು ಸೀಮಿತ ಓವರ್‌ಗಳ ಪಂದ್ಯಾವಳಿಗಳಾದ ಸೈಯದ್ ಮುಸ್ತಾಕ್ ಅಲಿ ಟ್ರೋಫಿ (ಖಿ20) ನವೆಂಬರ್ 14 ರಿಂದ ಮತ್ತು ವಿಜಯ್ ಹಜಾರೆ ಟ್ರೋಫಿ (ಏಕದಿನ) ಡಿಸೆಂಬರ್ 14 ರಿಂದ ಆರಂಭವಾಗಲಿವೆ.

ಮಹಿಳಾ ಮತ್ತು ಯುವ ಕ್ರಿಕೆಟ್: ಮಹಿಳಾ ಕ್ರಿಕೆಟಿಗರಿಗೂ ಈ ಬಾರಿ ಬಿಡುವಿಲ್ಲದ ಚಾಲನೆ ವೇಳಾಪಟ್ಟಿ ಸಿದ್ಧವಾಗಿದ್ದು, ಸೀನಿಯರ್ ಮಹಿಳಾ ಟಿ20 ಟ್ರೋಫಿ ಅಕ್ಟೋಬರ್ 26 ರಿಂದ ಶುರುವಾಗಲಿದೆ. ಇದರೊಂದಿಗೆ ಅಂಡರ್-23, ಅಂಡರ್-19 ಮತ್ತು ಅಂಡರ್-15 ವಿಭಾಗಗಳಲ್ಲಿ ವಿವಿಧ ಟ್ರೋಫಿಗಳನ್ನು ಆಯೋಜಿಸಲಾಗಿದೆ. ಯುವ ಪ್ರತಿಭೆಗಳಿಗಾಗಿ ಕೂಚ್ ಬೆರ್ಹಾ ಮತ್ತು ವಿನೂ ಮಂಕಡ್ ಟ್ರೋಫಿಗಳು ಅಕ್ಟೋಬರ್‌ನಿಂದಲೇ ಪಡೆಯಲಿವೆ.

ಹೊಸ ನಿಯಮಗಳು: ಈ ಬಾರಿಯೂ: ತಂಡಗಳನ್ನು ಎಲೈಟ್ ಮತ್ತು ಪ್ಲೇಟ್ ಗುಂಪುಗಳಾಗಿ ವಿಂಗಡಿಸಲಾಗಿದೆ. ರಣಜಿ ಟ್ರೋಫಿಯ ಎಲೈಟ್ ವಿಭಾಗದಲ್ಲಿ 32 ತಂಡಗಳು 4 ಗುಂಪುಗಳಲ್ಲಿ ಸೆಣಸಲಿವೆ. ಪ್ಲೇಟ್ ವಿಭಾಗದ ವಿಜೇತ ತಂಡವು ಮುಂದಿನ ಸೀಸನ್‌ಗೆ ಎಲೈಟ್ ಗುಂಪಿಗೆ ಬಡ್ತಿ ಪಡೆಯಲಿದೆ. ಈ ಬಾರಿಯ ದೇಶೀಯ ಋತುವಿನುದ್ದಕ್ಕೂ ಉದಯೋನ್ಮುಖ ಆಟಗಾರರಿಗೆ ರಾಷ್ಟ್ರೀಯ ತಂಡದ ಗಮನ ಸೆಳೆಯಲು ಉತ್ತಮ ಅವಕಾಶವಿದೆ.