SK Home Ad
Home ನಮ್ಮ ಜಿಲ್ಲೆ ಕೊಪ್ಪಳ ರಾಜ್ಯಪಾಲರನ್ನು ಭೇಟಿಯಾದ ಶ್ರೀ ಅಮರನಾಥೇಶ್ವರ ಮಠದ ಪೀಠಾಧಿಪತಿ

ರಾಜ್ಯಪಾಲರನ್ನು ಭೇಟಿಯಾದ ಶ್ರೀ ಅಮರನಾಥೇಶ್ವರ ಮಠದ ಪೀಠಾಧಿಪತಿ

0
48

ಸಂ.ಕ.ಸಮಾಚಾರ ಕುಷ್ಟಗಿ: ತಾಲೂಕಿನ ಮದಲಗಟ್ಟಿ ಗ್ರಾಮದ ಸಮೀಪದಲ್ಲಿರುವ ಶ್ರೀ ಅಮರನಾಥೇಶ್ವರ ಮಹಾದೇವ ಮಠದ ಪೀಠಾಧಿಪತಿ ಶ್ರೀ ಮಹಂತ ಸಹದೇವನಂದ ಗಿರಿ ಮಹಾರಾಜ ಅವರು ಬೆಂಗಳೂರಿನ ರಾಜಭವನದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಸೌಹಾರ್ದಯುತವಾಗಿ ಭೇಟಿಯಾಗಿ ಶ್ರೀ ಮಠದ ಅಭಿವೃದ್ಧಿ ಹಾಗೂ ವಿವಿಧ ವಿಷಯಗಳ ಕುರಿತು ಚರ್ಚೆ ನಡೆಸಿದರು.

ಈ ವೇಳೆಯಲ್ಲಿ ಅಸ್ಸಾಂ ರಾಜ್ಯದ ಗುವಾಹಟಿಯ ಪ್ರಸಿದ್ಧ ಶ್ರೀ ಕಾಮಾಕ್ಯ ಮಾತಾ ದೇವಿಯ ಪ್ರಸಾದವನ್ನು ರಾಜ್ಯಪಾಲರಿಗೆ ನೀಡಿ, ದೇವಿಯ ಆಶೀರ್ವಾದವನ್ನು ಕೋರಿದರು. ಬಳಿಕ ಶ್ರೀ ಅಮರನಾಥೇಶ್ವರ ಮಹಾದೇವ ಮಠದ ಧಾರ್ಮಿಕ ಚಟುವಟಿಕೆಗಳು, ಸಾಮಾಜಿಕ ಸೇವಾ ಕಾರ್ಯಗಳು ಹಾಗೂ ಮಠದ ಅಭಿವೃದ್ಧಿಗೆ ಸಂಬಂಧಿಸಿದಂತೆ ರಾಜ್ಯಪಾಲರೊಂದಿಗೆ ವಿವರವಾಗಿ ಚರ್ಚಿಸಿದರು.

ಮಠದ ಅಭಿವೃದ್ಧಿಗಾಗಿ ಕೈಗೊಳ್ಳಬೇಕಿರುವ ವಿವಿಧ ಕಾರ್ಯಗಳು ಹಾಗೂ ಮುಂದಿನ ಯೋಜನೆಗಳ ಕುರಿತು ಪೀಠಾಧಿಪತಿ ಶ್ರೀ ಮಹಂತ ಸಹದೇವನಂದ ಗಿರಿ ಮಹಾರಾಜ ಅವರು ರಾಜ್ಯಪಾಲರ ಗಮನಕ್ಕೆ ತಂದರು. ಮಠವು ಧಾರ್ಮಿಕ ಕ್ಷೇತ್ರವಾಗಿ ಮಾತ್ರವಲ್ಲದೆ ಸಮಾಜಮುಖಿ ಕಾರ್ಯಗಳ ಮೂಲಕವೂ ತನ್ನದೇ ಆದ ಸೇವೆಯನ್ನು ಸಲ್ಲಿಸುತ್ತಿರುವ ಕುರಿತು ಈ ಸಂದರ್ಭದಲ್ಲಿ ಮಾಹಿತಿ ನೀಡಿದರು.

ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಮಠದ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆದುಕೊಂಡು, ಮಠದ ಅಭಿವೃದ್ಧಿ ಕಾರ್ಯಗಳ ಕುರಿತು ಪೀಠಾಧಿಪತಿಗಳೊಂದಿಗೆ ಸೌಹಾರ್ದಯುತವಾಗಿ ಸಮಾಲೋಚನೆ ನಡೆಸಿದರು.ರಾಜಭವನದಲ್ಲಿ ನಡೆದ ಈ ಭೇಟಿ ಸಂದರ್ಭದಲ್ಲಿ ಧಾರ್ಮಿಕ ಕ್ಷೇತ್ರದ ಅಭಿವೃದ್ಧಿ ಹಾಗೂ ಸಮಾಜಮುಖಿ ಕಾರ್ಯಗಳ ಕುರಿತು ನಡೆದ ಚರ್ಚೆ ಗಮನ ಸೆಳೆಯಿತು.

ಪ್ರತಿ ಹೊಸ ಅಪ್‌ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿರಿ 👉 ಇಂದಿನ ಪ್ರಮುಖ ಲೈವ್ ಅಪ್‌ಡೇಟ್‌ಗಳನ್ನು ‘ಸಂಯುಕ್ತ ಕರ್ನಾಟಕ’ ಜಾಲತಾಣದಲ್ಲಿ ನಿರಂತರವಾಗಿ ಓದಿರಿ.