ಬೆಂಗಳೂರು: ರಾಜ್ಯದ ಜನರು ಎದುರು ನೋಡುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಕರಡು ಮತದಾರರ ಪಟ್ಟಿ ಇಂದು (ಆ.24) ಬಿಡುಗಡೆಯಾಗಲಿದೆ. ಕರಡು ಪಟ್ಟಿಯಲ್ಲಿ ತಮ್ಮ ಹೆಸರು ಇದೆಯೇ ಎಂಬುದನ್ನು ಮತದಾರರು ಪರಿಶೀಲಿಸಿಕೊಳ್ಳಬಹುದಾಗಿದೆ.
ಚುನಾವಣಾ ಆಯೋಗದ ಮಾಹಿತಿ ಪ್ರಕಾರ, ರಾಜ್ಯದಲ್ಲಿ ಒಟ್ಟು 5.55 ಕೋಟಿ ಎನಮ್ಯೂರೇಷನ್ ಫಾರಂ ವಿತರಿಸಲಾಗಿದ್ದು, ಪರಿಶೀಲನೆಯ ಬಳಿಕ ಸುಮಾರು 4.34 ಕೋಟಿ ಮತದಾರರ ಹೆಸರುಗಳು ಕರಡು ಪಟ್ಟಿಯಲ್ಲಿ ಪ್ರಕಟವಾಗಲಿವೆ. ಸುಮಾರು 1.07 ಕೋಟಿ ಮತದಾರರನ್ನು ASD/ASDDO ವರ್ಗದಲ್ಲಿ ಗುರುತಿಸಲಾಗಿದ್ದು, ಅವರ ಹೆಸರುಗಳು ಕರಡು ಪಟ್ಟಿಯಲ್ಲಿ ಪ್ರಕಟವಾಗುವುದಿಲ್ಲ.
ಇದೇ ವೇಳೆ ಮ್ಯಾಪಿಂಗ್ ಆಗದಿರುವ ಸುಮಾರು 43.84 ಲಕ್ಷ ಮತದಾರರಿಗೆ ನೋಟಿಸ್ ಜಾರಿ ಮಾಡಲಾಗುತ್ತದೆ. ಬೆಂಗಳೂರಿನಲ್ಲೇ ಸುಮಾರು 23 ಲಕ್ಷ ಮತದಾರರಿಗೆ ನೋಟಿಸ್ ನೀಡುವ ಸಾಧ್ಯತೆ ಇದೆ. ನೋಟಿಸ್ ಪಡೆದವರು ತಮ್ಮ ಮತದಾರರ ಅರ್ಹತೆಯನ್ನು ಸಾಬೀತುಪಡಿಸಲು ಸೂಚಿಸಲಾದ ದಾಖಲೆಗಳಲ್ಲಿ ಯಾವುದಾದರೂ ಒಂದು ದಾಖಲೆಯನ್ನು ಸಲ್ಲಿಸಬೇಕು.
ನೋಟಿಸ್ ಪಡೆದ ದಿನದಿಂದ 7 ದಿನಗಳೊಳಗೆ ಪ್ರತಿಕ್ರಿಯೆ ಸಲ್ಲಿಸುವ ಅವಕಾಶವಿದ್ದು, ಸೂಕ್ತ ದಾಖಲೆಗಳನ್ನು ಸಲ್ಲಿಸಿದ ಬಳಿಕ ಅರ್ಹತೆ ಸಾಬೀತಾದರೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾಗುವ ಸಾಧ್ಯತೆ ಇದೆ.
ಕರಡು ಪಟ್ಟಿ ಬಿಡುಗಡೆಯಾದ ಬಳಿಕ ಚುನಾವಣಾ ಆಯೋಗದ ವೆಬ್‌ಸೈಟ್, ಸಾಮಾಜಿಕ ಮಾಧ್ಯಮ ಹಾಗೂ ಬಿಎಲ್‌ಒ ಕಚೇರಿಗಳಲ್ಲಿ ಮತದಾರರು ತಮ್ಮ ಹೆಸರು ಪರಿಶೀಲಿಸಬಹುದು. ಹೆಸರು ಅಥವಾ ಇತರೆ ವಿವರಗಳಲ್ಲಿ ದೋಷಗಳಿದ್ದರೆ ಆಗಸ್ಟ್ 24ರಿಂದ ಸೆಪ್ಟೆಂಬರ್ 23ರವರೆಗೆ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಬಹುದು. ಅಂತಿಮ ಮತದಾರರ ಪಟ್ಟಿ ಅಕ್ಟೋಬರ್ 10ರಂದು ಪ್ರಕಟವಾಗಲಿದೆ. ಹೊಸ ಮತದಾರರು ಫಾರಂ-6 ಮೂಲಕ ಹೆಸರು ಸೇರ್ಪಡೆಗೆ ಅರ್ಜಿ ಸಲ್ಲಿಸಬಹುದಾಗಿದೆ.
- ತಾರಕ್ ಮೆಹ್ತಾ ಕಾ ಊಲ್ಟಾ ಚಶ್ಮಾ: ಆರಂಭದಿಂದ 18 ವರ್ಷಗಳ ಪಯಣ; ನಗುವಿನ ಮೂಲಕ ಸಮಾಜದ ಕನ್ನಡಿ ಹಿಡಿದ ಸೂಪರ್ ಹಿಟ್ ಸೀರಿಯಲ್
- ಉಡುಪಿ ಶೂಟೌಟ್: ತಪ್ಪಿಸಲೆತ್ನಿಸಿದ ಇನ್ನೋರ್ವ ಆರೋಪಿಗೆ ಗುಂಡೇಟು
- ಚಿತ್ರದುರ್ಗ: ಸಾಂಸಾರಿಕ ಜೀವನ ಪ್ರವೇಶಿಸಿದ ಕರುನಾಡ ಸ್ಪೈಡರ್ಮ್ಯಾನ್
- ಇಂದು SIR ಕರಡು ಪಟ್ಟಿ ಬಿಡುಗಡೆ, ನಿಮ್ಮ ಹೆಸರು ಚೆಕ್ ಮಾಡಿಕೊಳ್ಳಿ
- ಅಮರಾವತಿ ಆಸ್ಪತ್ರೆಯಲ್ಲಿ ಅಗ್ನಿ ದುರಂತ: 3 ನವಜಾತ ಶಿಶುಗಳು ಸಾವು




















