SK Home Ad
Home ಸುದ್ದಿ ರಾಜ್ಯ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಡಿ.ಕೆ. ಶಿವಕುಮಾರ್

ಪ್ರಧಾನಿ ಮೋದಿ ಭೇಟಿಯಾದ ಸಿಎಂ ಡಿ.ಕೆ. ಶಿವಕುಮಾರ್

0
44

ನವದೆಹಲಿ: ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಡಿ.ಕೆ. ಶಿವಕುಮಾರ್ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ನವದೆಹಲಿಯಲ್ಲಿ ಭೇಟಿಯಾಗಿದ್ದಾರೆ.

ಈ ವೇಳೆ ಪ್ರಧಾನಿಗೆ ಜಗದ್ಗುರು ಬಸವಣ್ಣನವರ ಪ್ರತಿಮೆಯನ್ನು ಉಡುಗೊರೆಯಾಗಿ ನೀಡಿ ಶುಭ ಕೋರಿದರು. ಭೇಟಿಯ ಬಗ್ಗೆ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪ್ರಧಾನಿಯವರೊಂದಿಗೆ ನಡೆಸಿರುವ ಸುದೀರ್ಘ ಚರ್ಚೆಯ ವಿವರಗಳನ್ನು ಬಿಚ್ಚಿಟ್ಟಿದ್ದಾರೆ.

ಮೋದಿ ಅವರನ್ನು ಮೊದಲ ಬಾರಿಗೆ ಭೇಟಿಯಾಗಿದ್ದೇನೆ. ಈ ಸಂದರ್ಭದಲ್ಲಿ ಕರ್ನಾಟಕದ ಅಭಿವೃದ್ಧಿಯ ಆದ್ಯತೆಗಳ ಕುರಿತು ನಾವು ಅತ್ಯಂತ ರಚನಾತ್ಮಕವಾದ ಚರ್ಚೆಯನ್ನು ನಡೆಸಿದ್ದೇವೆ. ರಾಜ್ಯದ ಪ್ರಗತಿಗೆ ಪೂರಕವಾದ ಮೂಲಸೌಕರ್ಯಗಳ ವೃದ್ಧಿಗೆ ಹೊಸ ಹೂಡಿಕೆಗಳನ್ನು ಆಕರ್ಷಿ ಸುವುದು, ನಗರ ಸಾರಿಗೆ ಮತ್ತು ಸಂಚಾರ ದಟ್ಟಣೆ ನಿಯಂತ್ರಣ, ನೀರಾವರಿ ಯೋಜನೆಗಳ ಅನುಷ್ಠಾನ, ಹಾಗೂ ಜನಸಾಮಾನ್ಯರ ಜೀವನದ ಮೇಲೆ ನೇರ ಪರಿಣಾಮ ಬೀರುವ ವಿವಿಧ ಕಲ್ಯಾಣ ಯೋಜನೆಗಳ ಕುರಿತು ಪ್ರಧಾನಿಯವರ ಗಮನಸೆಳೆದಿದ್ದೇನೆ ಎಂದಿದ್ದಾರೆ.

ಪ್ರಧಾನಿ ಮೋದಿ ಮುಂದೆ ಇಟ್ಟ ಬೇಡಿಕೆಗಳು
ಕಲ್ಯಾಣ ಕರ್ನಾಟಕಕ್ಕೆ 25 ಸಾವಿರ ಕೋಟಿ ಅನುದಾನ
ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆಗೆ ಮುಖ್ಯಮಂತ್ರಿ ಬೇಡಿಕೆ
ಬೆಂಗಳೂರಿಗೆ 25 ಸಾವಿರ ಕೋಟಿ ವಿಶೇಷ ಅನುದಾನ
ಮೇಕೆದಾಟು ಯೋಜನೆಗೆ ಶೀಘ್ರ ಅನುಮತಿಗೆ ಕೋರಿಕೆ
ಕೃಷ್ಣಾ ಮೇಲ್ದಂಡೆ ಯೋಜನೆಗೆ ತುರ್ತು ಗೆಜೆಟ್ ಅಧಿಸೂಚನೆ
ಭದ್ರಾಮೇಲ್ದಂಡೆ ಯೋಜನೆಗೆ ಘೋಷಿತ 5,300 ಕೋಟಿ ನೆರವು
ಕಳಸಾ ಬಂಡೂರಿ ಯೋಜನೆಗೆ ಪರಿಸರ ಇಲಾಖೆಗೆ ಅನುಮೋದನೆ
ನದಿ ಜೋಡಣೆ ಯೋಜನೆಯಡಿ ರಾಜ್ಯಕ್ಕೆ ನ್ಯಾಯಸಮ್ಮತ ಹಂಚಿಕೆ
15ನೇ ಹಣಕಾಸು ಆಯೋಗದಿಂದ ಗ್ರಾಪಂಗಳಿಗೆ 2,860 ಕೋಟಿ
ಬೆಂಗಳೂರು ಡಬ್ಬಲ್‌ಡೆಕ್ಕರ್ ಯೋಜನೆಗೆ 9,700 ಕೋಟಿ ನೆರವು
ಬಿಎಂಆರ್‌ಸಿಎಲ್ 3ನೇ ಹಂತಕ್ಕೆ 25,999 ಕೋಟಿ ಡಿಪಿಆರ್‌ಗೆ ಒಪ್ಪಿಗೆ
ಶರಾವತಿ ಪಂಪ್ಡ್ ಸ್ಟೋರೇಜ್‌ಗೆ ವನ್ಯಜೀವಿ ಇಲಾಖೆಯಿಂದ ಅನುಮತಿ