SK Home Ad
Home ನಮ್ಮ ಜಿಲ್ಲೆ ಬೆಂಗಳೂರು ನೆಹರು ಮಾಡಿರುವ ಅರ್ಧದಷ್ಟು ಕೆಲಸ ಮೋದಿ ಮಾಡಿದ್ದಾರೆಯೇ?

ನೆಹರು ಮಾಡಿರುವ ಅರ್ಧದಷ್ಟು ಕೆಲಸ ಮೋದಿ ಮಾಡಿದ್ದಾರೆಯೇ?

0
12

ಬೆಂಗಳೂರು: ಪ್ರಧಾನಿಯಾಗಿ ಮೋದಿ ಅವರು ನೆಹರು ಅಧಿಕಾರವಧಿಯ ದಿನಗಳ ದಾಖಲೆ ಮುರಿದರೆ ಸಾಲದು. ನೆಹರು ಅವರು ಮಾಡಿರುವ ಅರ್ಧದಷ್ಟು ಕೆಲಸ ಮೋದಿ ಮಾಡಿದ್ದಾರೆಯೇ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.

ಬುಧವಾರ ಸುದ್ದಿಗಾರರ ಜೊತೆ ಮಾತನಾಡಿ, ಇಷ್ಟು ವರ್ಷಗಳ ಆಡಳಿತಾವಧಿಯಲ್ಲಿ ಒಂದು ಇಸ್ರೋ ಸಂಸ್ಥೆ, ಒಂದು ಐಐಟಿ ಸಂಸ್ಥೆ ಕಟ್ಟಿದ್ದಾರೆಯೇ? ನೆಹರು ಅಧಿಕಾರ ವಹಿಸಿಕೊಂಡಾಗ ಆರ್ಥಿಕ ಪರಿಸ್ಥಿತಿಗಳು ಹೇಗಿತ್ತು. ಈಗ ಹೇಗಿದೆ ಸ್ವಲ್ಪ ತುಲನೆ ಮಾಡಲಿ ಎಂದರು.

ಪಬ್ ಹಾಗೂ ಬಾರ್‌ಗಳಿಗೆ ವಿದ್ಯಾರ್ಥಿಗಳು ಹೋಗುತ್ತಾರೆ ಎಂಬ ಬಗ್ಗೆ ಪೋಷಕರಿಂದ ಹಲವಾರು ದೂರು ಬಂದ ಹಿನ್ನೆಲೆಯಲ್ಲಿ ಪ್ರವೇಶಕ್ಕೆ ಗುರುತಿನ ಚೀಟಿ ಪರೀಕ್ಷಿಸುವುದನ್ನು ಕಡ್ಡಾಯ ಮಾಡಲಾಗಿದೆ. ಆಕಸ್ಮಾತ್ ನಿಯಂತ್ರಿಸದೇ ಇದ್ದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಬಿಟ್ ಕಾಯಿನ್ ಪ್ರಕರಣದಲ್ಲಿ ಉಪ್ಪು ತಿಂದವರು ನೀರು ಕುಡಿಯಲೇಬೇಕು. ಪ್ರಕರಣವನ್ನು ಪಾರದರ್ಶಕವಾಗಿ ತನಿಖೆ ಮಾಡಿದ್ದೇವೆ. ಹಿಂದಿನ ಮುಖ್ಯಮಂತ್ರಿ ಇರಬಹುದು ಅಥವಾ ಹಾಲಿ ಮುಖ್ಯಮಂತ್ರಿ ಇರಬಹುದು. ಯಾರೂ ಸಮರ್ಥನೆ ಮಾಡಿಕೊಳ್ಳುತ್ತಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.