SK Home Ad
Home ನಮ್ಮ ಜಿಲ್ಲೆ ಕೊಪ್ಪಳ ಮುಖ್ಯಮಂತ್ರಿಗಳಿಗೆ ಉತ್ತರ ಕರ್ನಾಟಕದ ಜಿಲ್ಲೆಗಳೇ ಗೊತ್ತಿಲ್ಲ…

ಮುಖ್ಯಮಂತ್ರಿಗಳಿಗೆ ಉತ್ತರ ಕರ್ನಾಟಕದ ಜಿಲ್ಲೆಗಳೇ ಗೊತ್ತಿಲ್ಲ…

0
52

ಕೊಪ್ಪಳ: ಮುಖ್ಯಮಂತ್ರಿಗಳಿಗೆ ಉತ್ತರ ಕರ್ನಾಟಕದ ಜಿಲ್ಲೆಗಳು ಯಾವವು ಗೊತ್ತಿಲ್ಲ, ಯಾದಗಿರಿ, ಗದಗ ಸೇರಿ ಯಾವ ಜಿಲ್ಲೆಗಳ ಬಗ್ಗೆ ಮಾಹಿತಿ ಗೊತ್ತಿಲ್ಲ. ಬೆಂಗಳೂರೇ ಇಡೀ ರಾಜ್ಯ ಎಂದು ತಿಳಿದುಕೊಂಡಂತಿದೆ ಎಂದು ವಿಜಯೇಂದ್ರ ಗಂಗಾವತಿಯ ಬಹಿರಂಗ ಸಮಾವೇಶದಲ್ಲಿ ಟೀಕಿಸಿದರು.

ರೈತರ ಸಂಕಷ್ಟಕ್ಕೆ ಒಂದೇ ಒಂದೂ ಯೋಜನೆ ನೆರವಾಗಲಿಲ್ಲ. ರೈತರಿಗೆ 10 ಗಂಟೆ ವಿದ್ಯುತ್ ನೀಡಲಾಗಲಿಲ್ಲ. ಬರಗಾಲದ ಸಮಯದಲ್ಲಿ ಯಾವೊಬ್ಬ ಸಚಿವರು ಜಿಲ್ಲೆಗಳಲ್ಲಿ ರೈತರು ಬದುಕಿದ್ದಾರಾ?, ಸತ್ತಿದ್ದಾರಾ? ಎಂಬುದನ್ನು ಕೇಳಲಿಲ್ಲ. ಯಡಿಯೂರಪ್ಪನವರು ರೈತರಿಗಾಗಿ ಪ್ರತ್ಯೇಕ ಬಜೆಟ್ ಮಂಡಿಸಿದರು. ಬಡ್ಡಿರಹಿತ ಸಾಲ, ಪಿಎಂ ಕಿಸಾನ್, ಉಚಿತ ವಿದ್ಯುತ್ ನೀಡಿದರು.

ನಿಮ್ಮ ಸರ್ಕಾರ ಬದುಕಿದ್ದರೂ ಸತ್ತಂತಾಗಿದೆ. ದುಡಿಯುವ ಕೈಗೆ ಕೆಲಸ, ಅಂಗವಿಕಲರಿಗೆ ಪಿಂಚಣಿ, ವೃದ್ಧಾಪ್ಯ ವೇತನ ನೀಡಲಿಲ್ಲ. ಮತ್ತೆ ನುಡಿದಂತೆ ನಡೆದ ಸರ್ಕಾರ ಎನ್ನುತ್ತೀರಿ. ಒದ್ದು ಅಧಿಕಾರ ಕಸಿದುಕೊಳ್ಳುವಂತೆ ಡಿಕೆಶಿಗೆ ಅವರ ಗುರುಗಳು ಹೇಳಿದ್ದಾರಂತೆ. ಸಿದ್ದರಾಮಯ್ಯಗೆ ಒದ್ದು ಅಧಿಕಾರ ಕಸಿದುಕೊಂಡರು ಎಂದರು.

ಯಡಿಯೂರಪ್ಪ ನವಲಿ ಸಮಾನಾಂತರ ಜಲಾಶಯಕ್ಕೆ 14 ಕೋಟಿ ರೂ. ನೀಡಿ ಡಿಪಿಆರ್ ಮಾಡಿದರು. ಕನಕಪುರದಲ್ಲಿ ವಿಮಾನ ನಿಲ್ದಾಣ ಮಾಡುವ ಬಯಕೆ ಹೊಂದಿದ ನೀವು, ನವಲಿ ಜಲಾಶಯ ಮುಂದುವರಿಸಲಿಲ್ಲ ಎಂದು ಕಿಡಿಕಾರಿದರು.