Home Advertisement
Home ಸುದ್ದಿ ವಿದೇಶ Donald Trump: ಟ್ರಂಪ್ ಮೇಲೆ ದಾಳಿ ಮಾಡಿದ್ದು ಯಾರು!

Donald Trump: ಟ್ರಂಪ್ ಮೇಲೆ ದಾಳಿ ಮಾಡಿದ್ದು ಯಾರು!

0
127

ವಾಷಿಂಗ್ಟನ್​: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹತ್ಯೆ ಮಾಡಲು ಯತ್ನಿಸಿದ್ದ ಆರೋಪಿಯನ್ನು ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ.

ವಾಷಿಂಗ್ಟನ್​ನ ಹಿಲ್ಟನ್​ ಹೋಟೆಲ್​ನಲ್ಲಿ ವೈಟ್​ ಹೌಸ್​ ಕರೆಸ್ಪಾಂಡೆಂಟ್ಸ್​​ ಡಿನ್ನರ್​ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅಧ್ಯಕ್ಷ ಡೊನಾಲ್ಡ್​ ಟ್ರಂಪ್​, ಪತ್ನಿ ಮೆಲಾನಿಯಾ ಕೂಡ ಭಾಗಿಯಾಗಿದ್ದ ಈ ಹೈ ಪ್ರೊಫೈಲ್ ಭೋಜನಕೂಟದ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಗುಂಡಿನ ಸದ್ದು ಕೇಳಿಬಂದಿತ್ತು.

ತಕ್ಷಣವೇ ಎಚೆತ್ತ ಭದ್ರತಾ ಸಿಬ್ಬಂದಿ ಟ್ರಂಪ್‌ ಕುಟುಂಬವನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿತ್ತು. ಸದ್ಯ ಭದ್ರತಾ ಸಿಬ್ಬಂದಿ ಆರೋಪಿಯನ್ನು ವಶಕ್ಕೆ ಪಡೆದಿದ್ದು ಆತನ ಕುರಿತಂತೆ ಕೆಲ ಮಾಹಿತಿಯನ್ನು ಹಂಚಿಕೊಂಡಿದೆ.

ಗುಂಡು ಹಾರಿಸಿದವ ಯಾರು?: 31 ವರ್ಷದ ಕೋಲ್ ಥಾಮಸ್ ಅಲೆನ್​ ಎಂಬಾತನೇ ಹತ್ಯೆ ನಡೆಸಲು ಸಂಚು ಹಾಕಿ ಬಂದಿದ್ದ, ಕ್ಯಾಲಿಫೋರ್ನೊಯಾದ ಟೊರೆನ್ಸ್ ನಿವಾಸಿಯಾಗಿರುವ ಅಲೆನ್‌ ಕಾರ್ಯಕ್ರಮಕ್ಕೂ ಮುನ್ನವೇ ಹಿಲ್ಟನ್​​ ಹೋಟೆಲ್​ನಲ್ಲಿ ಕೊಠಡಿಯೊಂದನ್ನು ಪಡೆದುಕೊಂಡಿದ್ದ. ಹೀಗಾಗಿ ಅವನಿಗೆ ಹೋಟೆಲ್‌ ಪ್ರವೇಶಕ್ಕೆ ಅಷ್ಟೇನೂ ಕಷ್ಟವಾಗಲಿಲ್ಲ ಎಂದು ಹೇಳಲಾಗಿದೆ.

1995ರಲ್ಲಿ ಜನಿಸಿರುವ ಕೋಲ್ ಥಾಮಸ್ ಅಲೆನ್ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ಪದವಿ ಪಡೆದಿದ್ದು, ಕಂಪ್ಯೂಟರ್ ಸೈನ್ಸ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡಿದ್ದಾನೆ. ಇಷ್ಟೇ ಅಲ್ಲದೇ ಲಾಸ್ ಏಂಜಲೀಸ್ ಕೌಂಟಿಯಲ್ಲಿ ‘ಟೀಚರ್ ಆಫ್ ದಿ ಮಂತ್’ ಪ್ರಶಸ್ತಿ ಕೂಡ ಪಡೆದಿರುವ ಇವನು, ಅತ್ಯುತ್ತಮ ಶಿಕ್ಷಕ ಎಂದು ಗುರುತಿಸಿಕೊಂಡಿದ್ದಾನೆ.

ಆರೋಪಿ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾನೆಯೇ ಎನ್ನುವ ಪ್ರಶ್ನೆ ಕೂಡಾ ಉಂಟಾಗಿದೆ. ಜತೆಗೆ, ಥಾಮಸ್ ಅಲೆನ್ ಡೆಮಾಕ್ರಟಿಕ್ ಪಕ್ಷದ ಸದಸ್ಯನಾಗಿದ್ದು, 2024ರ ಚುನಾವಣೆಯಲ್ಲಿ ಕಮಲಾ ಹ್ಯಾರಿಸ್ ಪರ ಪ್ರಚಾರ ನಡೆಸಿದ್ದಾನೆ ಎಂದು ಹೇಳಲಾಗುತ್ತಿದೆ.