ದುಬೈನಿಂದ ಇಸ್ರೇಲ್‌ನ ಟೆಲ್ ಅವೀವ್‌ಗೆ ಸುಮಾರು 180 ಪ್ರಯಾಣಿಕರನ್ನು ಹೊತ್ತು ಹಾರುತ್ತಿದ್ದ ‘ಫ್ಲೈದುಬೈ’ ವಿಮಾನದಲ್ಲಿ ಮಧ್ಯ-ಆಕಾಶದಲ್ಲೇ ಘೋರ ದುರಂತವೊಂದು ಕೂದಲೆಳೆಯ ಅಂತರದಲ್ಲಿ ತಪ್ಪಿದೆ. ಕಾಕ್‌ಪಿಟ್ ಒಳಗೆ ಸಹ-ಪೈಲಟ್ ಹಠಾತ್ ಕ್ಯಾಪ್ಟನ್ ಮೇಲೆ ಮಾರಣಾಂತಿಕ ಚಾಕು ಇರಿತ ನಡೆಸಿ, ನಿಯಂತ್ರಣ ಕಸಿದುಕೊಳ್ಳಲು ಯತ್ನಿಸಿದ ಆಘಾತಕಾರಿ ಘಟನೆ ನಡೆದಿದೆ.
ದಾಳಿಯ ಬೆನ್ನಲ್ಲೇ ವಿಮಾನವು ಕೇವಲ ಎರಡು ನಿಮಿಷಗಳಲ್ಲಿ ಬರೋಬ್ಬರಿ 17,400 ಅಡಿಗಳಷ್ಟು ಕೆಳಗೆ ಧುಮುಕಿತು. ಕೂಡಲೇ ಪೈಲಟ್‌ಗಳು ಹೈಜಾಕ್ ಸೂಚನೆಯಾದ ‘ಸ್ಕ್ವಾಕ್ ಕೋಡ್ 7500’ ಸಂದೇಶ ರವಾನಿಸಿದರು. ತಕ್ಷಣವೇ ಕಾರ್ಯಪ್ರವೃತ್ತವಾದ ಇಸ್ರೇಲ್ ವಾಯುಪಡೆ ಯುದ್ಧ ವಿಮಾನಗಳನ್ನು ರಕ್ಷಣೆಗೆ ಕಳುಹಿಸಿತು. ವಿಮಾನದಲ್ಲಿದ್ದ ಇತರ ಸಿವಿಲ್ ಪೈಲಟ್‌ಗಳು ಸಮಯಪ್ರಜ್ಞೆ ಮೆರೆದು ಪರಿಸ್ಥಿತಿ ನಿಯಂತ್ರಿಸಿ, ಸೌದಿ ಅರೇಬಿಯಾದ ತಬೂಕ್ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್ ಮಾಡಿಸಿದರು.
ಗಾಯಗೊಂಡ ಇಬ್ಬರೂ ಪೈಲಟ್‌ಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಯಾಣಿಕರೆಲ್ಲರೂ ಸುರಕ್ಷಿತವಾಗಿದ್ದಾರೆ. ಘಟನೆಯ ಹಿಂದೆ ಉಗ್ರ ಕೃತ್ಯದ ನಂಟು ಇರುವ ಶಂಕೆಯನ್ನು ಇಸ್ರೇಲ್ ತನಿಖಾ ಸಂಸ್ಥೆಗಳು ತಳ್ಳಿಹಾಕಿಲ್ಲ.




















