SK Home Ad
Home ಸುದ್ದಿ ದೇಶ ಇತಿಹಾಸ ತಿಳಿದಿತ್ತು, ಆದರೂ ಒಪ್ಪಂದ ಯಾಕೆ? : ಕೇಂದ್ರ ಸರ್ಕಾರಕ್ಕೆ ರಾಹುಲ್ ಪ್ರಶ್ನೆ

ಇತಿಹಾಸ ತಿಳಿದಿತ್ತು, ಆದರೂ ಒಪ್ಪಂದ ಯಾಕೆ? : ಕೇಂದ್ರ ಸರ್ಕಾರಕ್ಕೆ ರಾಹುಲ್ ಪ್ರಶ್ನೆ

0
65

‘ಇದು ತಪ್ಪಲ್ಲ, ಉದ್ದೇಶಪೂರ್ವಕ ಪಿತೂರಿ’; CBSE ವಿಚಾರದಲ್ಲಿ ಕೇಂದ್ರದ ವಿರುದ್ಧ ರಾಹುಲ್ ಆಕ್ರೋಶ

ನವದೆಹಲಿ: ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು CBSE ಪರೀಕ್ಷಾ ಫಲಿತಾಂಶಗಳಲ್ಲಿ ಭಾರಿ ಅಕ್ರಮ ನಡೆದಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡಿರುವ ಅವರು, ದೇಶಾದ್ಯಂತ ಲಕ್ಷಾಂತರ ವಿದ್ಯಾರ್ಥಿಗಳು ಮತ್ತು ಪೋಷಕರು ಆಘಾತಕ್ಕೊಳಗಾಗಿದ್ದಾರೆ ಎಂದು ಹೇಳಿದ್ದಾರೆ.

ಪರೀಕ್ಷಾ ಫಲಿತಾಂಶ ನಿರ್ವಹಣೆಗೆ ಸಂಬಂಧಿಸಿದಂತೆ CBSE ಕೈಗೊಂಡಿರುವ ಕ್ರಮಗಳನ್ನು ಪ್ರಶ್ನಿಸಿದ ರಾಹುಲ್ ಗಾಂಧಿ, COEMPT ಕಂಪನಿಗೆ ನೀಡಲಾದ ಒಪ್ಪಂದದ ಹಿನ್ನೆಲೆ ಕುರಿತು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

“ಇದು ತಪ್ಪಲ್ಲ, ಉದ್ದೇಶಪೂರ್ವಕ ಪಿತೂರಿ” : ರಾಹುಲ್ ಗಾಂಧಿ ತಮ್ಮ ಪೋಸ್ಟ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, “ಯಾವಾಗಲೂ ಹಾಗೆ – ಯಾವುದೇ ಉತ್ತರಗಳಿಲ್ಲ, ಹೊಣೆಗಾರಿಕೆ ಇಲ್ಲ, ನಾಚಿಕೆ ಇಲ್ಲ” ಎಂದು ಟೀಕಿಸಿದ್ದಾರೆ. ಫಲಿತಾಂಶ ನಿರ್ವಹಣೆಯ ಜವಾಬ್ದಾರಿ ವಹಿಸಿಕೊಂಡಿದ್ದ COEMPT ಕಂಪನಿ ಈಗಾಗಲೇ 2019ರಲ್ಲಿ ತೆಲಂಗಾಣದಲ್ಲಿ ‘ಗ್ಲೋಬರೇನಾ’ ಹೆಸರಿನಲ್ಲಿ ವಿವಾದಕ್ಕೀಡಾಗಿತ್ತು. ಕಂಪನಿಯ ಹಿಂದಿನ ದಾಖಲೆಗಳ ಬಗ್ಗೆ ಎಲ್ಲರಿಗೂ ಮಾಹಿತಿ ಇದ್ದರೂ, ಮತ್ತೆ ಅದೇ ಸಂಸ್ಥೆಗೆ ಒಪ್ಪಂದ ನೀಡಲಾಗಿದೆ ಎಂದು ಅವರು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಕೋಚಿಂಗ್ ಸೆಂಟರ್ ಜಾಲ ಬಯಲು?: NEET ಪ್ರಕರಣದಲ್ಲಿ CBI ಭರ್ಜರಿ ಆ್ಯಕ್ಷನ್

“1.85 ಮಿಲಿಯನ್ ಮಕ್ಕಳ ಭವಿಷ್ಯವನ್ನು ಅಂತಹ ಕಂಪನಿಗೆ ಹಸ್ತಾಂತರಿಸಲಾಯಿತು. ಇದು ಸಾಮಾನ್ಯ ತಪ್ಪಲ್ಲ, ಉದ್ದೇಶಪೂರ್ವಕ ಪಿತೂರಿ” ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ರಾಹುಲ್ ಗಾಂಧಿ ಎತ್ತಿದ ಪ್ರಶ್ನೆಗಳು: ಈ ವಿಚಾರದಲ್ಲಿ ರಾಹುಲ್ ಗಾಂಧಿ ಕೇಂದ್ರ ಸರ್ಕಾರ ಮತ್ತು CBSE ಮುಂದೆ ಹಲವು ಪ್ರಶ್ನೆಗಳನ್ನು ಇಟ್ಟಿದ್ದಾರೆ. CBSE ಒಪ್ಪಂದವನ್ನು COEMPT ಗೆ ಏಕೆ ನೀಡಲಾಯಿತು?, ಈ ಒಪ್ಪಂದ ನೀಡಲು ಯಾರ ಆದೇಶ ಇತ್ತು?, ಒಪ್ಪಂದ ಪ್ರಕ್ರಿಯೆಯಲ್ಲಿ ಯಾವ ನಿಯಮಗಳು ಮತ್ತು ಕಾರ್ಯವಿಧಾನಗಳನ್ನು ಉಲ್ಲಂಘಿಸಲಾಗಿದೆ?.

ಕಂಪನಿ ಈಗಾಗಲೇ ವಿವಾದಗಳಲ್ಲಿ ಸಿಲುಕಿದ್ದರೂ ಹಿನ್ನೆಲೆ ಪರಿಶೀಲನೆ ಯಾಕೆ ಮಾಡಲಾಗಲಿಲ್ಲ?, COEMPT ನಿರ್ವಹಣೆ ಮತ್ತು ಮೋದಿ ಸರ್ಕಾರದ ನಡುವಿನ ಸಂಬಂಧವೇನು? ಎಂಬ ಪ್ರಶ್ನೆಗಳನ್ನು ಅವರು ಸಾರ್ವಜನಿಕವಾಗಿ ಕೇಳಿದ್ದಾರೆ.

ನ್ಯಾಯಾಂಗ ತನಿಖೆ ಮತ್ತು ಎಸ್‌ಐಟಿ ಆಗ್ರಹ: ಪ್ರಕರಣದ ಸಂಪೂರ್ಣ ಸತ್ಯ ಹೊರಬರಬೇಕಾದರೆ ಸ್ವತಂತ್ರ ನ್ಯಾಯಾಂಗ ತನಿಖೆ ಮತ್ತು ವಿಶೇಷ ತನಿಖಾ ತಂಡ (SIT) ರಚನೆ ಅಗತ್ಯ ಎಂದು ಕಾಂಗ್ರೆಸ್ ನಾಯಕ ಒತ್ತಾಯಿಸಿದ್ದಾರೆ. “ಈ ಹಗರಣದ ನಿಜವಾದ ಅಪರಾಧಿಗಳನ್ನು ಬೆಳಕಿಗೆ ತರಬೇಕು. ಈ ಭ್ರಷ್ಟಾಚಾರವನ್ನು ಮೂಲೋತ್ಪಾಟನೆ ಮಾಡುತ್ತೇವೆ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಸಿದ್ದರಾಮಯ್ಯ ರಾಜೀನಾಮೆ ಪ್ರಶ್ನೆಯೇ ಇಲ್ಲ: ಸಚಿವ ಪಾಟೀಲ್ ಖಡಕ್ ಪ್ರತಿಕ್ರಿಯೆ

ವಿದ್ಯಾರ್ಥಿಗಳಿಗೆ ಭರವಸೆ : ಪರೀಕ್ಷಾ ಫಲಿತಾಂಶ ವಿವಾದದಿಂದ ಆತಂಕಕ್ಕೊಳಗಾಗಿರುವ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಲು ರಾಹುಲ್ ಗಾಂಧಿ ಪ್ರಯತ್ನಿಸಿದ್ದಾರೆ. “ನಿಮ್ಮ ಕಠಿಣ ಪರಿಶ್ರಮ ಮತ್ತು ನಿಮ್ಮ ಭವಿಷ್ಯವನ್ನು ಯಾರೂ ಕದಿಯಲು ಸಾಧ್ಯವಿಲ್ಲ” ಎಂದು ವಿದ್ಯಾರ್ಥಿಗಳಿಗೆ ಸಂದೇಶ ನೀಡಿದ್ದಾರೆ.