SK Home Ad
Home ನಮ್ಮ ಜಿಲ್ಲೆ AI ಲೋಕದಲ್ಲಿ ಹೊಸ ಸಂಚಲನ : GPT-6 Astra ಎಂಟ್ರಿ – AI ಸಾಮರ್ಥ್ಯಕ್ಕೆ ಹೊಸ...

AI ಲೋಕದಲ್ಲಿ ಹೊಸ ಸಂಚಲನ : GPT-6 Astra ಎಂಟ್ರಿ – AI ಸಾಮರ್ಥ್ಯಕ್ಕೆ ಹೊಸ ಶಕ್ತಿ

0
55
GPT-6 Astra ಎಂಟ್ರಿ: Codingನಿಂದ Cybersecurityವರೆಗೆ AI ಸಾಮರ್ಥ್ಯಕ್ಕೆ ಹೊಸ ಶಕ್ತಿ

OpenAI GPT-6 Astra ಬಿಡುಗಡೆ: ಸಂಶೋಧನೆ, ಕೋಡಿಂಗ್‌ನಿಂದ ಫಾರ್ಮ್ ಭರ್ತಿವರೆಗೆ ಹೊಸ ಸಾಮರ್ಥ್ಯ – Software Engineering, Science, Finance ಕ್ಷೇತ್ರಗಳಿಗೂ AI ನೆರವು

ನವದೆಹಲಿ: ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಮಹತ್ವದ ಬೆಳವಣಿಗೆಯಾಗಿ OpenAI ತನ್ನ ಹೊಸ ತಲೆಮಾರಿನ GPT-6 Astra ಮಾದರಿಯನ್ನು ಬಿಡುಗಡೆ ಮಾಡಿದೆ. ಇತ್ತಿಚೆಗೆ ಪರಿಚಯಿಸಲಾದ ಈ ಮಾದರಿ ಕಂಪ್ಯೂಟರ್ ಬಳಕೆ, ವೆಬ್ ಬ್ರೌಸಿಂಗ್, ಸಾಫ್ಟ್‌ವೇರ್ ಎಂಜಿನಿಯರಿಂಗ್, ವಿಜ್ಞಾನ, ಸೈಬರ್‌ಸುರಕ್ಷತೆ ಹಾಗೂ ವೃತ್ತಿಪರ ಕೆಲಸಗಳಲ್ಲಿ ಹೆಚ್ಚಿನ ಸಾಮರ್ಥ್ಯ ಹೊಂದಿದೆ ಎಂದು OpenAI ತಿಳಿಸಿದೆ.

GPT-6 Astraಯ ಪ್ರಮುಖ ವಿಶೇಷತೆಯೆಂದರೆ ಇದು ಕೇವಲ ಪ್ರಶ್ನೆಗಳಿಗೆ ಉತ್ತರ ನೀಡುವ AI ಆಗಿರದೆ, ಹಲವು ಹಂತಗಳ ಕೆಲಸವನ್ನು ಸ್ವತಃ ನಿರ್ವಹಿಸುವ ಸಾಮರ್ಥ್ಯ ಹೊಂದಿದೆ. ದಾಖಲೆಗಳು, ಸ್ಪ್ರೆಡ್‌ಶೀಟ್‌ಗಳು ಮತ್ತು ಪ್ರೆಸೆಂಟೇಶನ್‌ಗಳನ್ನು ಸಿದ್ಧಪಡಿಸುವುದು, ವೆಬ್‌ನಲ್ಲಿ ಸಂಶೋಧನೆ ನಡೆಸುವುದು, ಸಾಫ್ಟ್‌ವೇರ್ ಸ್ಥಾಪಿಸಿ ಪರೀಕ್ಷಿಸುವುದು ಹಾಗೂ ಕಂಪ್ಯೂಟರ್‌ನಲ್ಲಿ ಕಾಣುವ ಸಮಸ್ಯೆಗಳನ್ನು ಗುರುತಿಸಿ ಪರಿಹರಿಸುವಂತಹ ಕೆಲಸಗಳನ್ನು ನಿರ್ವಹಿಸಲು ಇದನ್ನು ವಿನ್ಯಾಸಗೊಳಿಸಲಾಗಿದೆ.

ಇದರ ಮೂಲಕ ಆನ್‌ಲೈನ್ ಫಾರ್ಮ್‌ಗಳನ್ನು ಭರ್ತಿ ಮಾಡುವುದು, CRMನಲ್ಲಿ ದಾಖಲೆಗಳನ್ನು ನವೀಕರಿಸುವುದು, ಕ್ಯಾಲೆಂಡರ್‌ಗಳನ್ನು ವ್ಯವಸ್ಥೆ ಮಾಡುವುದು ಸೇರಿದಂತೆ ಹಲವು ದಿನನಿತ್ಯದ ಡಿಜಿಟಲ್ ಕೆಲಸಗಳನ್ನು AI ಮೂಲಕ ನಿರ್ವಹಿಸಬಹುದು ಎಂದು OpenAI ಉದಾಹರಣೆ ನೀಡಿದೆ. ತೆರಿಗೆ ಸಂಬಂಧಿತ Form ಭರ್ತಿ ಮಾಡುವ ಸಾಮರ್ಥ್ಯವನ್ನೂ ಪ್ರದರ್ಶಿಸಲಾಗಿದೆ.

ಕಾರ್ಯಕ್ಷಮತೆಯ ದೃಷ್ಟಿಯಿಂದಲೂ GPT-6 Astra ಹಲವು ಪ್ರಮುಖ ಪರೀಕ್ಷೆಗಳಲ್ಲಿ ಹೆಚ್ಚಿನ ಫಲಿತಾಂಶ ಗಳಿಸಿದೆ ಎಂದು OpenAI ಹೇಳಿದೆ. FrontierMath Tier 4ನಲ್ಲಿ ಶೇ.98, ARC-AGI-3ನಲ್ಲಿ ಶೇ.99.9 ಮತ್ತು ExploitBenchನಲ್ಲಿ ಶೇ.100ರಷ್ಟು ಅಂಕಗಳನ್ನು ಪಡೆದಿದೆ ಎಂದು ಸಂಸ್ಥೆ ತಿಳಿಸಿದೆ.

ಆದರೆ GPT-6 Astraಯ ಲಭ್ಯತೆ ತಕ್ಷಣ ಎಲ್ಲರಿಗೂ ಸಿಗುವುದಿಲ್ಲ. ಆರಂಭದಲ್ಲಿ ಸೀಮಿತ ಸಂಸ್ಥೆಗಳಿಗೆ ನೀಡಲಾಗಿದ್ದು, ನಂತರ ChatGPT Plus, Pro, Business ಮತ್ತು Enterprise ಬಳಕೆದಾರರಿಗೆ ಹಂತ ಹಂತವಾಗಿ ಲಭ್ಯವಾಗಲಿದೆ ಎಂದು OpenAI ತಿಳಿಸಿದೆ. API ಮೂಲಕವೂ ಪ್ರವೇಶ ವಿಸ್ತರಿಸಲಾಗುತ್ತಿದೆ.

GPT-6 Astraಯ ಸಾಮರ್ಥ್ಯ ಹೆಚ್ಚಿರುವ ಹಿನ್ನೆಲೆಯಲ್ಲಿ OpenAI ಸೈಬರ್‌ಸುರಕ್ಷತೆ ಕ್ಷೇತ್ರದಲ್ಲಿ ಹೆಚ್ಚುವರಿ ಸುರಕ್ಷತಾ ಕ್ರಮಗಳನ್ನು ಜಾರಿಗೆ ತಂದಿದೆ. ಸಂಸ್ಥೆಯ ಪ್ರಕಾರ, ಇದು Critical ಮಟ್ಟದ ಸೈಬರ್‌ಸುರಕ್ಷತಾ ಸಾಮರ್ಥ್ಯವನ್ನು ತಲುಪಿದ ಮೊದಲ OpenAI ಮಾದರಿಯಾಗಿದೆ.

ಒಟ್ಟಿನಲ್ಲಿ, GPT-6 Astra ಕೇವಲ ಹೆಚ್ಚು ಬುದ್ಧಿವಂತ ಚಾಟ್‌ಬಾಟ್ ಆಗುವುದಕ್ಕಿಂತ ಮುಂದೆ ಹೋಗಿ, ಕಂಪ್ಯೂಟರ್ ಮತ್ತು ಸಾಫ್ಟ್‌ವೇರ್ ಪರಿಸರದಲ್ಲೇ ಕೆಲಸಗಳನ್ನು ಪೂರ್ಣಗೊಳಿಸುವ AI ಏಜೆಂಟ್‌ನತ್ತ ಪ್ರಮುಖ ಹೆಜ್ಜೆ ಎಂದು OpenAI ಪರಿಚಯಿಸಿದೆ.