SK Home Ad
Home ಅಪರಾಧ ತಾಯಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದಕ್ಕೆ ಅಜ್ಜನ ಬರ್ಬರ ಕೊಲೆ

ತಾಯಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದಕ್ಕೆ ಅಜ್ಜನ ಬರ್ಬರ ಕೊಲೆ

0
186

ಕಲಬುರಗಿ: ತಾಯಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದಕ್ಕೆ ಮೊಮ್ಮಗನೊಬ್ಬ ತಾತನಿಗೆ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ನಡೆದಿದೆ.
ಕಲಬುರಗಿ ಜಿಲ್ಲೆಯ ಜವಳಗಾ ಬಿ ಗ್ರಾಮದ ನಿವಾಸಿ ಸಿದ್ರಾಮಪ್ಪ(75) ತನ್ನ ಮೊಮ್ಮಗ ಆಕಾಶ್‌ನಿಂದಲೇ ಹತ್ಯೆಯಾದ ದುರ್ದೈವಿ. ಆಕಾಶ್ ಕಾಮನ್ ಕೊಲೆ ಆರೋಪಿ,
ಸೋಮವಾರ ಸಿದ್ರಾಮಪ್ಪ ಅವರ ಸಹೋದರಿ ಮೃತಪಟ್ಟ್‌ ಹಿನ್ನಲೆಯಲ್ಲಿ ಸಿದ್ರಾಮಪ್ಪ ಹಾಗೂ ಆಕಾಶ್‌ ತಾಯಿ ಸರೋಜಾ ಅವರು ಕಲಬುರಗಿ ತಾಲೂಕಿನ ಕುಮಿಸಿ ಗ್ರಾಮಕ್ಕೆ ತೆರಳಿದ್ದರು. ಸಿದ್ರಾಮಪಪ್ಪ ಕುಟುಂಬ ಮತ್ತು ಸರೋಜಾ ಕುಟುಂಬ ಸೇರಿಕೊಂಡು ಕ್ರೂಸರ್ ಜೀಪನಲ್ಲಿ ಹೋಗಿ ಬರುವಾಗ ಸರೋಜಾ, ಸಿದ್ರಾಮಪಪ್ಪನ ಗಾಡಿಯ ಮೇಲೆ ಕೂರುವಂತೆ ಹೇಳಿದ್ದರು. ವಯಸ್ಸಾದವನಿಗೆ ಗಾಡಿಯ ಮೇಲೆ ಕೂರುವಂತೆ ಹೇಳಿದಕ್ಕೆ ಸಿದ್ರಾಮಪಪ್ಪ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದರಂತೆ.
ಸರೋಜಾಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಹಿನ್ನಲೆ ಸರೋಜಾ ತನ್ನ ಮಗನಿಗೆ ಅಜ್ಜ ಬೈದಿರುವ ವಿಚಾರ ಹೇಳಿದ್ದರು, ತನ್ನ ಅಜ್ಜ ಹೆತ್ತ ತಾಯಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿರುವುದಕ್ಕೆ ಮೊಮ್ಮಗ ರೊಚ್ಚಿಗೆದ್ದು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಈ ಕುರಿತು ನರೋಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.