SK Home Ad
Home ತಾಜಾ ಸುದ್ದಿ ಗೂಳಿಗಳ ಕಾಳಗ: ಜನರು ಹೈರಾಣ

ಗೂಳಿಗಳ ಕಾಳಗ: ಜನರು ಹೈರಾಣ

0
162

ಇಳಕಲ್ : ಇಲ್ಲಿನ ತರಕಾರಿ ಮಾರುಕಟ್ಟೆಯಲ್ಲಿ ಎರಡು ಗೂಳಿಗಳು ಪರಸ್ಪರ ನಡೆಸಿದ ಕಾಳಗ ಸಾಮಾಜಿಕ ಜಾಲತಾಣದಲ್ಲಿ ಸಂಪೂರ್ಣವಾಗಿ ವೈರಲ್ ಆಗಿದೆ.
ನಗರದ ನೂರು ವರ್ಷದ ಇತಿಹಾಸ ಹೊಂದಿರುವ ತರಕಾರಿ ಮಾರುಕಟ್ಟೆಯಲ್ಲಿ ಈಗ ಗೂಳಿಗಳು ಬಿಡಾಡಿ ದನಗಳ ಹಾವಳಿಯೇ ಹೆಚ್ಚಾಗಿದೆ ತರಕಾರಿ ತರಲು ಮಾರುಕಟ್ಟೆಗೆ ಹೋಗಬೇಕು ಎಂದರೆ ಜೀವವನ್ನು ಕೈಯಲ್ಲಿ ಹಿಡಿದುಕೊಂಡೇ ಹೋಗಬೇಕು. ಇಲ್ಲದಿದ್ದರೆ ಬಿಡಾಡಿ ದನಗಳು ಎಲ್ಲಿ ,ಯಾವಾಗ ಹೇಗೆ ಬರುತ್ತಾವೆಯೋ ಗೊತ್ತೇ ಆಗುವದಿಲ್ಲ ,ತರಕಾರಿ ಅಂಗಡಿಯಲ್ಲಿ ವ್ಯಾಪಾರ ಮಾಡುವವರು ತಮ್ಮ ಬಳಿ ಇರುವ ಉದ್ದನೆಯ ಕಟ್ಟಿಗೆಯಿಂದ ದನಗಳನ್ನು ಬಾರಿಸಿ ಓಡಿಸುತ್ತಾರೆ ಆದರೆ ತರಕಾರಿ ತರಲು ಹೋದ ಜನರು ಮೈಯೆಲ್ಲಾ ಕಣ್ಣು ಇಟ್ಡು ಕೊಂಡಿದ್ದರೆ ಅವುಗಳಿಂದ ತಪ್ಪಿಸಿಕೊಳ್ಳಬಹುದು ಇಲ್ಲದಿದ್ದರೆ ಅವುಗಳ ಕಾಲುಗಳಿಗೆ ಸಿಲುಕಿ ಗಾಯಗೊಳ್ಳಬೇಕಾಗುತ್ತದೆ.
ಇಂತಹ ಕಠಿಣ ಪರಿಸ್ಥಿತಿಯನ್ನು ಇಲ್ಲಿನ ಜನರು ಎದುರಿಸ ಬೇಕಾಗಿದ್ದು ಅಂತಹದರಲ್ಲಿ ಭಾನುವಾರದಂದು ಎರಡು ಗೂಳಿಗಳ ಕಾದಾಟದಲ್ಲಿ ಅಲ್ಲಿ ನಿಲ್ಲಿಸಿದ್ದ ಬೈಕು ಮತ್ತು ಕಾರುಗಳು ಜಖಂಗೊಂಡಿವೆ.ವಾಹನ ತಂದ ತಪ್ಪಿಗೆ ನಗರಸಭೆ ಸಿಬ್ಬಂದಿಯನ್ನು ಮನಸ್ಸಿನಲ್ಲಿಯೇ ಬೈದುಕೊಳ್ಳುತ್ತಾ ಸಾಗಿದರು.