SK Home Ad
Home ತಾಜಾ ಸುದ್ದಿ ಬೆಳಗಾವಿಗೆ ಡಿಸಿಎಂ

ಬೆಳಗಾವಿಗೆ ಡಿಸಿಎಂ

0
241
DK Shivakumar

ಬೆಳಗಾವಿ: ಉಪಮುಖ್ಯಮಂತ್ರಿ ಡಿ.ಕೆ‌ ಶಿವಕುಮಾರ ಅವರು ಬೆಳಗಾವಿಗೆ ಬರಲಿದ್ದಾರೆ. ನಾಳೆ ಬುಧವಾರ ಬೆಳಿಗ್ಗೆ ‌ನಗರದಲ್ಲಿರುವ ಲಕ್ಷ್ಮಣ ಸವದಿ ಮನೆಗೆ ಭೆಟ್ಟಿ ನೀಡಲಿದ್ದಾರೆ. ಮಂತ್ರಿ ಪದವಿ ಸಿಗದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿರುವ ಸವದಿ ಅವರನ್ನು ಸಮಾಧಾನಪಡಿಸಲು ಡಿ.ಕೆ. ಶಿವಕುಮಾರ ಬರುತ್ತಿದ್ದಾರೆಂದು ಹೇಳಲಾಗಿದೆ. ಸಚಿವ ಸತೀಶ ಜಾರಕಿಹೊಳಿ, ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರು ಈ ಸಂದರ್ಭದಲ್ಲಿ ಹಾಜರಿರುವರು. ಡಿ.ಕೆ. ಶಿವಕುಮಾರ ಆಗಮನದ ಹಿನ್ನೆಲೆಯಲ್ಲಿ ಇಬ್ಬರು ಸಚಿವರು ತಮ್ಮ ಬೆಂಗಳೂರು ಪ್ರವಾಸವನ್ನು ಕೊನೆ ಕ್ಷಣದಲ್ಲಿ ಮೊಟಕುಗೊಳಿಸಿದರು.