SK Home Ad
Home ತಾಜಾ ಸುದ್ದಿ ಬಲರಾಮ ಇನ್ನಿಲ್ಲ

ಬಲರಾಮ ಇನ್ನಿಲ್ಲ

0
189

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾದ ಜಂಬೂಸವಾರಿ ಮೆರವಣಿಗೆಯಲ್ಲಿ ಬರೋಬ್ಬರಿ 14 ಬಾರಿ ಚಿನ್ನದ ಅಂಬಾರಿ ಹೊತ್ತು ಖ್ಯಾತಿ ಗಳಿಸಿದ್ದ ಬಲರಾಮ ಆನೆ ವಯೋಸಹಜ ಅನಾರೋಗ್ಯದಿಂದ ಇಂದು ಮೃತಪಟ್ಟಿದೆ.
ಗಜಪಡೆಯ ಮಾಜಿ ಕ್ಯಾಪ್ಟನ್ ಬಲರಾಮ(67) ನಾಗರಹೊಳೆ ಉದ್ಯಾನದ ಹುಣಸೂರು ರೇಂಜ್‌ ವ್ಯಾಪ್ತಿಯ ಭೀಮನಕಟ್ಟೆ ಆನೆ ಶಿಬಿರದಲ್ಲಿದ್ದ ಕೆಲ ದಿನಗಳಿಂದ ಇದ್ದು ಆಹಾರವನ್ನು ಸೇವಿಸುತ್ತಿರಲಿಲ್ಲ. ಬಾಯಿಯಲ್ಲಿ ಹುಣ್ಣಾಗಿದ್ದರಿಂದ ಆಹಾರ ತ್ಯಜಿಸಿದ್ದು ಹೀಗಾಗಿ ನಿತ್ರಾಣಗೊಂಡಿತ್ತು. ಆನೆಗೆ ಶಿಬಿರದಲ್ಲೇ ಪಶುವೈದ್ಯರು ಚಿಕಿತ್ಸೆ ನೀಡುತ್ತಿದ್ದರು. ಆದರೆ ಚಿಕಿತ್ಸೆ ಫಲಿಸದೇ ಆನೆ ಮೃತಪಟ್ಟಿದೆ.