Home Advertisement
Home ನಮ್ಮ ಜಿಲ್ಲೆ ಕೊಪ್ಪಳ ನುಡಿದಂತೆ ನಡೆದುಕೊಳ್ಳದ ಸಿದ್ದರಾಮಯ್ಯ

ನುಡಿದಂತೆ ನಡೆದುಕೊಳ್ಳದ ಸಿದ್ದರಾಮಯ್ಯ

0
194
ಬಸವಜಯ ಮೃತ್ಯುಂಜಯ ಶ್ರೀ

ಕುಷ್ಟಗಿ: ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದುಕೊಳ್ಳಲಿದೆ ಎಂದು ಸಿಎಂ ಸಿದ್ದರಾಮಯ್ಯನವರು ಹೇಳುವ ಮೂಲಕ ನಮ್ಮನ್ನು ಮತ್ತು ಪಂಚಮಸಾಲಿ ಸಮಾಜದ 20 ಜನ ಶಾಸಕರನ್ನು ವಿಧಾನಸೌಧಕ್ಕೆ ಕರೆಸಿಕೊಂಡು ಮಾತು ಕೊಟ್ಟಿದ್ದರು ಆದರೆ ಮಾತಿಗೆ ತಪ್ಪಿದ ಸಿಎಂ ಸಿದ್ದರಾಮಯ್ಯನವರಾಗಿದ್ದಾರೆ ಎಂದು ಪಂಚಮಸಾಲಿ ಸಮಾಜದ ಜಗದ್ಗುರುಗಳಾದ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ೨ಎ ಮೀಸಲಾತಿ ನೀಡಲು ಸಿಎಂ ಸಿದ್ದರಾಮಯ್ಯ ನವರ ಸರಕಾರ ಅಧಿಕಾರಕ್ಕೆ ಬಂದ ತಕ್ಷಣ ಮೀಸಲಾತಿ ಜಾರಿಗೊಳಿಸಲು ಸಭೆ ಕರೆದು ನಿರ್ಣಯ ಕೈಗೊಳ್ಳಲಾಗುವುದೆಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದರು.ಆದರೆ ಸರಕಾರ ಅಧಿಕಾರಕ್ಕೆ ಬಂದು ಹಲವಾರು ತಿಂಗಳ ಕಾಲ ಗತಿಸಿದರೂ ಸಹ ಇನ್ನುವರೆಗೂ ಸಭೆ ಕರೆಯದೆ ಇರುವುದು ನಮಗೆ ಬೇಸರ ತಂದಿದೆ ಎಂದರು.
ಎಲ್ಲ ಸರ್ಕಾರಗಳು ಕೇವಲ ನಮಗೆ ಭರವಸೆ ನೀಡುತ್ತಲೇ ಬಂದಿವೆ. ಆದರೆ ಯಾವ ಸರ್ಕಾರ ಕೂಡ ಸ್ಪಂದಿಸುತ್ತಿಲ್ಲ. ಅಧಿಕಾರ ಹಿಡಿಯಲು ನಮ್ಮ ಸಮಾಜದವರು ಬೇಕು. ಆದರೆ ಗದ್ದುಗೆ ಏರಿದ ನಂತರ ನಮ್ಮ ನೆನಪಾಗುದಿಲ್ಲ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.