Home Advertisement
Home ತಾಜಾ ಸುದ್ದಿ ಬಿಯಾಂಡ್ ಬೆಂಗಳೂರು 5k ವಾಕಥಾನ್ ಗೆ ಚಾಲನೆ

ಬಿಯಾಂಡ್ ಬೆಂಗಳೂರು 5k ವಾಕಥಾನ್ ಗೆ ಚಾಲನೆ

0
163

ಹುಬ್ಬಳ್ಳಿ : ಬಿಯಾಂಡ್ ಬೆಂಗಳೂರು ಹುಬ್ಬಳ್ಳಿ, ಧಾರವಾಡ, ಬೆಳಗಾವಿ 5k ವಾಕಥಾನ್ ಗೆ ಮಾಹಿತಿ ತಂತ್ರಜ್ಞಾನ ಸಚಿವ ಅಶ್ವತ್ಥ ನಾರಾಯಣ ಚಾಲನೆ. ನಗರದಲ್ಲಿ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ಆಯೋಜಿಸಿರುವ ಎರಡು ದಿನಗಳ ಟೆಕ್ಲ ರೇಶನ್ 2022 ಅಂಗವಾಗಿ 5K ವಾಕಥಾನ್ ಗೆ ಮಾಹಿತಿ ತಂತ್ರಜ್ಞಾನ ಸಚಿವ ಅಶ್ವತ್ಥ ನಾರಾಯಣ ಅವರು ಚಾಲನೆ ನೀಡಿದರು.

ಡೆನಿಸನ್ ಹೋಟೆಲ್ ನಿಂದ ಆರಂಭಗೊಂಡ 5K ವಾಕಥಾನ ಡಾಲರ್ಸ್ ಕಾಲೋನಿ, ಅಕ್ಷಯ ಕಾಲನಿ, ಗೋಕುಲ ರಸ್ತೆಯಲ್ಲಿ ಸಂಚರಿಸಿ ಮತ್ತೆ ಡೆನ್ನಿಸನ್ ಹೋಟೆಲಿನಲ್ಲಿ ಮುಕ್ತಾಯಗೊಂಡಿತು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಅಶ್ವಥ್ ನಾರಾಯಣ ಅವರು, ಇಂದು ಮಾಹಿತಿ ತಂತ್ರಜ್ಞಾನ ವು ಬೀದಿ ವ್ಯಾಪಾರಿಗಳಿಂದ ಹಿಡಿದು ಪ್ರತಿಯೊಬ್ಬರ ಅವಿಭಾಜ್ಯ ಅಂಗವಾಗಿದೆ. ಇದನ್ನು ಇನಷ್ಟು ಪ್ರಚಾರ ಮಾಡುವ ಉದ್ದೇಶದಿಂದ ಬಿಯಾಂಡ್ ಬೆಂಗಳೂರು ಕಾರ್ಯಕ್ರಮದ ಅಂಗವಾಗಿ ವಾಕಥಾನ್ ಹಮ್ಮಿಕೊಳ್ಳಲಾಗಿದೆ ಎಂದು ನುಡಿದರು.
ವಾಕಥಾನ್ ನಲ್ಲಿ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ಸಿಇಒ ಸಂಜೀವ ಗುಪ್ತಾ ಮತ್ತು ಇತರ ಅಧಿಕಾರಿಗಳು ಭಾಗಿಯಾಗಿದ್ದರು.

Previous articleಅಮೆರಿಕ ನೋಡಿ ಕಲಿಯಬೇಕಿದೆ: ಸಚಿವ ಅಶ್ವತ್ಥನಾರಾಯಣ
Next articleಸತತ ಮಳೆಗೆ ಮನೆಗೋಡೆ ಕುಸಿತ: ಒಂದೇ ಕುಟುಂಬದ ಮೂವರು ಸಾವು