SK Home Ad
Home ಸಿನಿ ಮಿಲ್ಸ್ 18 ವರ್ಷ ಪೂರೈಸಿದ ಗೋಕುಲಧಾಮ್ : ಕುಟುಂಬದ ವಿಶೇಷ ಸಂಭ್ರಮ

18 ವರ್ಷ ಪೂರೈಸಿದ ಗೋಕುಲಧಾಮ್ : ಕುಟುಂಬದ ವಿಶೇಷ ಸಂಭ್ರಮ

0
69

18 ವರ್ಷ ಪೂರೈಸಿದ ‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’; ನಗು ಹಂಚುವ ಹಬ್ಬಕ್ಕೆ ಆಚರಣೆಗೆ ಆಹ್ವಾನ

ಮುಂಬೈ : ಭಾರತೀಯ ಕಿರುತೆರೆಯ ಅತ್ಯಂತ ಜನಪ್ರಿಯ ಹಾಸ್ಯ ಧಾರಾವಾಹಿಗಳಲ್ಲಿ ಒಂದಾದ ‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ (TMKOC) ಮತ್ತೊಂದು ಮಹತ್ವದ ಮೈಲಿಗಲ್ಲು ತಲುಪಿದೆ. ಜುಲೈ 28, 2026ರಂದು ಈ ಧಾರಾವಾಹಿ ಯಶಸ್ವಿಯಾಗಿ 18 ವರ್ಷಗಳನ್ನು ಪೂರೈಸಿ 19ನೇ ವರ್ಷಕ್ಕೆ ಕಾಲಿಡುತ್ತಿದೆ.

ಈ ವಿಶೇಷ ಸಂದರ್ಭವನ್ನು ಅಭಿಮಾನಿಗಳೊಂದಿಗೆ ಸಂಭ್ರಮಿಸಲು ಧಾರಾವಾಹಿಯ ನಿರ್ಮಾಣ ಸಂಸ್ಥೆ ಸಾಮಾಜಿಕ ಜಾಲತಾಣಗಳ ಮೂಲಕ ವಿಶೇಷ ಅಭಿಯಾನವನ್ನು ಘೋಷಿಸಿದೆ.

ಇದನ್ನೂ ಓದಿ: ‘ದೇವರ ಹೆಸರಿನಲ್ಲಿ ಪ್ರಮಾಣ ಮಾಡುತ್ತೇನೆ’ ಟೀಸರ್ ರಿಲೀಸ್

ಧಾರಾವಾಹಿ ತಂಡವು ಈ ಬಾರಿ ನಗು ಹಂಚುವ ಹಬ್ಬಕ್ಕೆ ಆಚರಣೆಗೆ ಆಹ್ವಾನ (‘ಹಸೋ ಹಸಾವೋ ದಿವಸ್’) ಎಂಬ ವಿಶೇಷ ಆಚರಣೆಯನ್ನು ಹಮ್ಮಿಕೊಂಡಿದ್ದು, ಅಭಿಮಾನಿಗಳನ್ನು ಸಕ್ರಿಯವಾಗಿ ಭಾಗವಹಿಸುವಂತೆ ಆಹ್ವಾನಿಸಿದೆ. 2008ರ ಜುಲೈ 28ರಂದು ಆರಂಭವಾದ ಈ ಕಾರ್ಯಕ್ರಮ ಕಳೆದ ಒಂದೂವರೆ ದಶಕಕ್ಕೂ ಹೆಚ್ಚು ಕಾಲ ಕುಟುಂಬ ಸಮೇತ ವೀಕ್ಷಿಸಬಹುದಾದ ಮನರಂಜನಾ ಕಾರ್ಯಕ್ರಮವಾಗಿ ಜನಮನ ಗೆದ್ದಿದೆ.

ಈ ಅಭಿಯಾನದ ಅಂಗವಾಗಿ ಜುಲೈ 28ರಂದು ಜನ್ಮದಿನ ಆಚರಿಸಿಕೊಳ್ಳುವವರು ಅಥವಾ 2008ರಿಂದ ಇಂದಿನವರೆಗೆ ಧಾರಾವಾಹಿಯ ಒಂದೇ ಒಂದು ಸಂಚಿಕೆಯನ್ನು ಸಹ ತಪ್ಪಿಸದೇ ವೀಕ್ಷಿಸಿರುವ ಅಭಿಮಾನಿಗಳು ತಮ್ಮ ವಿಶೇಷ ನೆನಪುಗಳನ್ನು ಹಂಚಿಕೊಳ್ಳಬಹುದು. ತಮ್ಮ 18ನೇ ಹುಟ್ಟುಹಬ್ಬದ ರೀಲ್ಸ್, ಫೋಟೋಗಳು ಅಥವಾ ಟಿಎಂಕೆಒಸಿಗೆ ಸಂಬಂಧಿಸಿದ ನೆನಪುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ ಅಧಿಕೃತ ಖಾತೆಯನ್ನು ಟ್ಯಾಗ್ ಮಾಡುವಂತೆ ನಿರ್ಮಾಪಕರು ಮನವಿ ಮಾಡಿದ್ದಾರೆ.

ಇದನ್ನೂ ಓದಿ: ʼಕರಾವಳಿ’ : ಕಂಬಳ ಸಂಸ್ಕೃತಿಯ ಸಿನಿರೂಪಕ್ಕೆ ಉತ್ತಮ ಪ್ರತಿಕ್ರಿಯೆ

‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ಹಾಸ್ಯದ ಜೊತೆಗೆ ಸಾಮಾಜಿಕ ಸಂದೇಶಗಳನ್ನು ಮನರಂಜನಾತ್ಮಕವಾಗಿ ಪ್ರೇಕ್ಷಕರಿಗೆ ತಲುಪಿಸುತ್ತಾ ಹಲವು ವರ್ಷಗಳಿಂದ ಎಲ್ಲ ವಯೋಮಾನದ ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಗೊಕುಲಧಾಮ್ ಸೊಸೈಟಿಯ ಪಾತ್ರಗಳು ಮತ್ತು ಅವರ ದೈನಂದಿನ ಬದುಕಿನ ಘಟನೆಗಳು ಭಾರತೀಯ ಕಿರುತೆರೆ ಇತಿಹಾಸದಲ್ಲಿ ವಿಶೇಷ ಸ್ಥಾನ ಪಡೆದಿವೆ.

18 ವರ್ಷಗಳ ಈ ಪಯಣವನ್ನು ನೆನಪಿಸಿಕೊಳ್ಳುವ ಉದ್ದೇಶದಿಂದ ಆರಂಭಿಸಿರುವ ‘ಹಸೋ ಹಸಾವೋ ದಿವಸ್’ ಅಭಿಯಾನವು ಅಭಿಮಾನಿಗಳ ನೆನಪುಗಳನ್ನು ಒಂದೇ ವೇದಿಕೆಯಲ್ಲಿ ಸಂಗ್ರಹಿಸುವ ಪ್ರಯತ್ನವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ಸಾಕಷ್ಟು ಪ್ರತಿಕ್ರಿಯೆ ಪಡೆಯತೊಡಗಿದೆ.