SK Home Ad
Home ನಮ್ಮ ಜಿಲ್ಲೆ ಬೆಳಗಾವಿ ಬೆಳಗಾವಿ: ನಾಡದ್ರೋಹಿ ಶುಭಂ ಶೆಳಕೆಗೆ ನ್ಯಾಯಾಂಗ ಬಂಧನ

ಬೆಳಗಾವಿ: ನಾಡದ್ರೋಹಿ ಶುಭಂ ಶೆಳಕೆಗೆ ನ್ಯಾಯಾಂಗ ಬಂಧನ

0
46

ಬೆಳಗಾವಿ: ನ್ಯಾಯಾಲಯಕ್ಕೆ ನಿಗದಿತ ಅವಧಿಯಲ್ಲಿ ಹಾಜರಾಗದ ಹಿನ್ನೆಲೆಯಲ್ಲಿ ಬಂಧನಕ್ಕೊಳಗಾಗಿದ್ದ ಎಂಇಎಸ್‌ ನಾಯಕ ಶುಭಂ ವಿಕ್ರಾಂತ ಶೆಳಕೆ ಮತ್ತು ಮನೋಹರ್‌ ಅಪ್ಪಾಜಿ ಹುಂದ್ರೆ ಅವರನ್ನು ಬೆಳಗಾವಿಯ ನ್ಯಾಯಾಲಯವು 2026ರ ನವೆಂಬರ್‌ 4ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಬೆಳಗಾವಿಯ ಖಡೇಬಜಾರ್‌ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ ಅಪರಾಧ ಸಂಖ್ಯೆ 12/2025 ಹಾಗೂ ಬೆಳಗಾವಿಯ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವ ಎಸ್‌ಸಿ ನಂ. 285/2025 ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಬೆಳವಣಿಗೆ ನಡೆದಿದೆ.

ಪ್ರಕರಣದ ವಿಚಾರಣೆಗೆ ನಿಗದಿಪಡಿಸಿದ್ದ ಅವಧಿಯಲ್ಲಿ ನ್ಯಾಯಾಲಯಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ಇಬ್ಬರ ವಿರುದ್ಧ ನ್ಯಾಯಾಲಯವು ಉದ್ಘೋಷಣೆ (ಪ್ರೊಕ್ಲಮೇಷನ್‌) ಹೊರಡಿಸಿತ್ತು. ಬಳಿಕ ನ್ಯಾಯಾಲಯದ ಆದೇಶದಂತೆ ತಲೆಮರೆಸಿಕೊಂಡ ಆರೋಪಿಗಳೆಂದು ಪರಿಗಣಿಸಲಾಗಿದ್ದ ಶುಭಂ ಶೆಳಕೆ ಮತ್ತು ಮನೋಹರ್‌ ಹುಂದ್ರೆ ಅವರನ್ನು ಅಕ್ಟೋಬರ್‌ 22ರಂದು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು.

ಇಬ್ಬರ ವಿಚಾರಣೆ ನಡೆಸಿದ ನ್ಯಾಯಾಲಯವು ಅವರನ್ನು ನವೆಂಬರ್‌ 4, 2026ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿದೆ.

ನ್ಯಾಯಾಲಯಕ್ಕೆ ಹಾಜರಾಗದಿರುವ ಹಿನ್ನೆಲೆಯಲ್ಲಿ ಕೈಗೊಂಡ ಕ್ರಮದ ಮುಂದುವರಿದ ಭಾಗವಾಗಿ ಈ ಬೆಳವಣಿಗೆ ನಡೆದಿದೆ. ಪ್ರಕರಣದ ಮುಂದಿನ ವಿಚಾರಣೆ ಹಾಗೂ ನ್ಯಾಯಾಲಯದ ಮುಂದಿನ ಆದೇಶಗಳ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.